ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ನಿರ್ಮೂಲನೆ ಯುವಕರಿಂದ ಸಾಧ್ಯ

Last Updated 27 ಜನವರಿ 2012, 10:15 IST
ಅಕ್ಷರ ಗಾತ್ರ

ಸಿರಿಗೆರೆ: ರಾಷ್ಟ್ರದಲ್ಲಿ ತುಂಬಿ ತುಳುಕಾಡುತ್ತಿರುವ ಭ್ರಷ್ಟಾಚಾರ ನಿರ್ಮೂಲನೆ ಯುವಜನರ ಸಂಕಲ್ಪ, ಶ್ರದ್ಧೆ ಮತ್ತು ಹೋರಾಟದಿಂದ ಮಾತ್ರ ಸಾಧ್ಯ ಎಂದು ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಸ್ಮಾರಕ ಬಾಲಕರ ಪ್ರಸಾದ ನಿಲಯದ ಮೇಲುಪ್ಪರಿಗೆಯಲ್ಲಿ ಸ್ಥಳೀಯ ಶಾಲಾ ಕಾಲೇಜುಗಳ ಆಶ್ರಯದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಧರ್ಮಗ್ರಂಥಗಳಲ್ಲಿ ಇರುವಂತೆ ಸಂವಿಧಾನದಲ್ಲಿಯೂ ಆದರ್ಶಗಳು, ಪೂಜ್ಯ ಭಾವನೆಗಳು ಇರುತ್ತವೆ. ಆದರೆ, ಇತ್ತೀಚಿನ ದಿನಗಳಲ್ಲಿ ಯಾವೊಬ್ಬ ಪ್ರಜಾಪ್ರತಿನಿಧಿಯೂ ಕೂಡಾ ಸಂವಿಧಾನದ ಆಶಯದಂತೆ ಸರ್ಕಾರ ನಡೆಸುತ್ತಿಲ್ಲ, ಇದೊಂದು ದುರ್ದೈವದ ಸಂಗತಿ ಎಂದು ವಿಷಾದಿಸಿದರು.
 

ಸಮಾಜದಲ್ಲಿ ಬರೀ ಸ್ವಾರ್ಥ, ಭ್ರಷ್ಟತೆ, ಸ್ವಜನ ಪಕ್ಷಪಾತ ಮೇಳೈಸುತ್ತಿರುವುದು ವಿಷಾದನೀಯ. ಸಾಧು ಸಂತರು, ಸ್ವಾತಂತ್ರ್ಯ ಹೋರಾಟಗಾರರು ವಿಶ್ವಕುಟುಂಬತ್ವದ ಪರಿಕಲ್ಪನೆ ಹೊಂದಿದ್ದವರು. ಗಾಂಧೀಜಿ ಅವರ ಆದರ್ಶಗಳು ಇಂದು ಕಣ್ಮರೆ ಆಗುತ್ತಿರುವುದು ಆತಂಕದ ಸಂಗತಿ. ಆದರೆ, ಯುವಕರು ಅವರ ಆಶಯಗಳಿಗೆ ಪೂರಕವಾಗಿ ನಡೆದುಕೊಂಡು ಭವಿಷ್ಯ ಜೀವನದಲ್ಲಿ ಬರುವ ಎಂತಹ ಕಠಿಣ ಸವಾಲುಗಳನ್ನೂ ಎದುರಿಸಿ ಗೆಲ್ಲುವ ಆತ್ಮ ವಿಶ್ವಾಸ ಹೊಂದಿ ರಾಷ್ಟ್ರದ ಹೆಮ್ಮೆಯ ಪುತ್ರರಾಗಿರಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ತರಳಬಾಳು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಪ್ರೊ.ಎಸ್.ಬಿ. ರಂಗನಾಥ್, ಪ್ರಾದೇಶಿಕ ಅಧಿಕಾರಿ ಡಾ.ನಾ. ಲೋಕೇಶ ಒಡೆಯರ್, ಪ್ರಾಂಶುಪಾಲ ಆರ್. ಕುಮಾರಸ್ವಾಮಿ. ಪ್ರೊ.ಡಿ.ಎಂ. ನಾಗರಾಜ್, ಸಿ.ಎಲ್. ಬಸವರಾಜ್, ಹೆಚ್.ಎನ್. ಓಂಕಾರಪ್ಪ, ಕೆ. ಮೌನೇಶ್ವರಾಚಾರ್, ಎಸ್. ರೇವಣಸಿದ್ದಯ್ಯ, ಜಿಲ್ಲಾ ಪಂಚಾಯ್ತಿ ಸದಸ್ಯೆ ಲಲಿತಮ್ಮ ಬಸವಂತಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಂ. ಮಹಾಂತೇಶ್, ಗ್ರಾಮಸ್ಥರು ಉಪಸ್ಥಿರಿದ್ದರು.

ಪೂರಕ ನಾಲೆ: ಸಿಎಂ ಜತೆ ಚರ್ಚೆ
ಹಿರಿಯೂರು: ದಶಕಗಳ ಬೇಡಿಕೆಯ ಧರ್ಮಪುರ ಕೆರೆಗೆ ಪೂರಕ ನಾಲೆ ನಿರ್ಮಾಣ ಕುರಿತಂತೆ ಮುಖ್ಯಮಂತ್ರಿ ಜತೆ ಚರ್ಚೆ ಮಾಡಿದ್ದು, ಈ ಬಜೆಟ್‌ನಲ್ಲಿ ಹಣ ಮೀಸಲಿಡುವ ಭರವಸೆಯನ್ನು ಅವರು ನೀಡಿದ್ದಾರೆ ಎಂದು ಶಾಸಕ ಡಿ. ಸುಧಾಕರ್ ಹೇಳಿದರು.

ನಗರದ ನೆಹರು ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮತಿ ವತಿಯಿಂದ ನಡೆದ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭದ್ರಾ ಮೇಲ್ದಂಡೆ ಯೋಜನೆ ಜಾರಿ ಕುರಿತಂತೆ ತರೀಕೆರೆ ಭಾಗದ ರೈತರ ಮನವೊಲಿಸಲಾಗಿದ್ದು, ಯೋಜನೆಯ ಕಾಮಗಾರಿ ಮತ್ತೆ ಆರಂಭಗೊಳ್ಳಲಿದೆ. ಪ್ರಸ್ತುತ ವರ್ಷ ತಾಲ್ಲೂಕಿಗೆ ರೂ 30 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಸರ್ವತೋಮುಖ ಅಭಿವೃದ್ಧಿ ಮಾಡಬೇಕೆಂಬ ಗುರಿ ತಮ್ಮದು. ರಾಷ್ಟ್ರೀಯ ಹಬ್ಬಗಳು ದೇಶಪ್ರೇಮ ಉಕ್ಕಿಸುವ ಆಚರಣೆಗಳಾಗಬೇಕು. ದೇಶದಲ್ಲಿನ ಭ್ರಷ್ಟಾಚಾರ, ಜಾತೀಯತೆಯನ್ನು ತೊಲಗಿಸಲು ಯುವಕರು ಪ್ರಯತ್ನಿಸಬೇಕು ಎಂದು ಅವರು ಕರೆ ನೀಡಿದರು.

ತಹಶೀಲ್ದಾರ್ ಎನ್. ತಿಪ್ಪೇಸ್ವಾಮಿ ಧ್ವಜಾರೋಹಣ ನೆರವೇರಿಸಿದರು.
ತಾ.ಪಂ. ಅಧ್ಯಕ್ಷೆ ಗಿರಿಜಮ್ಮ ತಿಪ್ಪೀರಯ್ಯ, ಪುರಸಭಾಧ್ಯಕ್ಷೆ ಮಂಜುಳಾ ವೆಂಕಟೇಶ್, ಉಪಾಧ್ಯಕ್ಷೆ ಜ್ಯೋತಿಲಕ್ಷ್ಮೀ ಗೋಪಿಯಾದವ್, ಡಾ.ಸುಜಾತಾ, ಶಾರದಮ್ಮ, ಈ. ಮಂಜುನಾಥ್, ಡಿ. ಗಂಗಾಧರ್, ರೋಷನ್‌ಜಮೀರ್, ಎ. ಮಂಜುನಾಥ್, ಕೆ.ಆರ್. ವೆಂಕಟೇಶ್, ಲಲಿತಾರಾಮಕೃಷ್ಣ, ಎಚ್.ರಾಜಪ್ಪ,ಕೆ. ತಿಮ್ಮರಾಜು, ವಿಜಯಲಕ್ಷ್ಮಿ, ದಿವಾಕರನಾಯಕ್, ಎಚ್.ಪಿ. ರವೀಂದ್ರನಾಥ್, ನಾಗಭೂಷಣ್, ಸಬೀಹಾಬೇಗಂ, ಫೈರೂಜಾಖಾನುಂ, ಕುಮಾರಸ್ವಾಮಿ, ಬಿ.ಆರ್. ಚಿನ್ನರಾಜು, ಪಿಎಸ್‌ಐ ಗಿರೀಶ್, ಎಸ್.ಬಿ. ಪಾಲಭಾವಿ, ಗಂಗಾಧರಪ್ಪ, ಜೆ. ಸ್ವಾಮಿ, ಹನುಮಂತರಾಯಪ್ಪ, ಪಿ. ರಂಗನಾಥ್, ನೂರ್‌ಅಹಮದ್, ಜಿ.ಎಲ್. ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ ವಿಜೇತರು: ಗಣರಾಜ್ಯೋತ್ಸವ ಪ್ರಯುಕ್ತ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಸಕ ಡಿ. ಸುಧಾಕರ್ ನೀಡುತ್ತಿರುವ ರೂ 10 ಸಾವಿರ ಮೊತ್ತದ ಪ್ರಥಮ ನಗದು ಬಹುಮಾನವನ್ನು ಅಸಂಷನ್ ಶಾಲೆಯ ವಿದ್ಯಾರ್ಥಿಗಳು ಪಡೆದರೆ, ರೂ 5 ಸಾವಿರ ಮೊತ್ತದ ಎರಡನೇ ಬಹುಮಾನವನ್ನು ವಾಗ್ಧೇವಿ ಕನ್ನಡ ಹಿ.ಪ್ರಾ.ಶಾಲೆ, ರೂ 3 ಸಾವಿರ ಮೊತ್ತದ ಮೂರನೇ ಬಹುಮಾನವನ್ನು ವಾಸವಿ ಹಿ.ಪ್ರಾ.ಶಾಲೆ, ಹಾಗೂ ರೂ 2 ಸಾವಿರ ಮೊತ್ತದ ನಾಲ್ಕನೇ ಬಹುಮಾನವನ್ನು ಹರಿಶ್ಚಂದ್ರಘಾಟ್ ಬಡಾವಣೆಯ ಸರ್ಕಾರಿ ಹಿ.ಪ್ರಾ.ಶಾಲೆ ವಿದ್ಯಾರ್ಥಿಗಳು ಪಡೆದುಕೊಂಡರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT