ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಪೋಷಕರು ಮಾದರಿಯಾಗಲಿ

Last Updated 18 ಅಕ್ಟೋಬರ್ 2011, 10:00 IST
ಅಕ್ಷರ ಗಾತ್ರ

ಕಾಪು (ಕಟಪಾಡಿ): `ಮಕ್ಕಳು ಸಿನಿಮಾ ಅಥವಾ ಕ್ರೀಡಾ ತಾರೆಯರ ಬದಲು ಪೋಷಕರನ್ನು ಅನುಕರಿಸಬೇಕು. ಮಕ್ಕಳನ್ನು ರೂಪಿಸಲು ಪೋಷಕರು ಮಾದರಿ ಜೀವನ ನಡೆಸಬೇಕು~ ಎಂದು ಉಡುಪಿ ಎ.ವಿ.ಬಾಳಿಗಾ ಆಸ್ಪತ್ರೆ ನಿರ್ದೇಶಕ ಡಾ.ಪಿ.ವಿ. ಭಂಡಾರಿ ಹೇಳಿದರು.

ಕಾಪು ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಸೋಮವಾರ ಇಲ್ಲಿ ಆರಂಭಗೊಂಡ `ಜೀವನ ಕೌಶಲ ಮತ್ತು ಸಮುದಾಯ ದೇಶ~ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

`ಹದಿಹರೆಯದವರು ಗೊಂದಲದ ಸ್ಥಿತಿಯಲ್ಲಿರುತ್ತಾರೆ. ಅವರು ಸಮಾಜದ ಹಿತಾಸಕ್ತಿಗೆ ವಿರುದ್ಧವಾಗಿ ನಡೆಯುವುದು ಸಾಮಾನ್ಯ. ಮಕ್ಕಳಿಗೆ ಸ್ನೇಹಿತರ ಮಾತುಗಳೇ ಈ ಅವಧಿಯಲ್ಲಿ ವೇದವಾಕ್ಯ. ಈ ಸಮಯದಲ್ಲಿ ಉತ್ತಮ ಗುಣನಡತೆಯ ಸ್ನೇಹಿತರು ದೊರೆತೆರೆ ಭವಿಷ್ಯ ಉತ್ತಮವಾಗುತ್ತದೆ~ ಎಂದು ಹೇಳಿದರು.

ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಪಿ. ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಪ್ರೊ.ವಿ.ಕೆ.ಉದ್ಯಾವರ, ಪ್ರಾಂಶುಪಾಲ ವಿದ್ಯಾಧರ್‌ಪುರಾಣಿಕ್, ಮುಖ್ಯಶಿಕ್ಷಕಿ ಜಯಭಾರತಿ, , ಅಗಸ್ಟಿನಾ ಬರ್ಲಾ, ಚೇತನ್, ಪ್ರಭಾ, ಗ್ಲಾಸಿಶ್, ಇಶ್‌ರಾಕ್ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT