ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳು, ಮಹಿಳೆಯರಿಂದ ಪ್ರತಿಭಟನೆ

Last Updated 9 ಅಕ್ಟೋಬರ್ 2011, 6:40 IST
ಅಕ್ಷರ ಗಾತ್ರ

ಹಾವೇರಿ: ಗ್ರಾಮದಲ್ಲಿ ಯಾವುದೇ ನಿಯಂತ್ರಣವಿಲ್ಲದೇ ಅಂಗಡಿ ಮುಂಗಟ್ಟುಗಳಲ್ಲಿ ನಡೆಯುತ್ತಿರುವ ಮದ್ಯ ಮಾರಾಟವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕಿನ ನೆಲೋಗಲ್ಲನ ಸ್ತ್ರೀಶಕ್ತಿ ಗುಂಪುಗಳ ಸದಸ್ಯರು ಹಾಗೂ ಶಾಲಾ ಮಕ್ಕಳು ಶನಿವಾರ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.

ಗ್ರಾಮದ ರಾಜೇಶ್ವರ ದೇವಸ್ಥಾನ ದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಪ್ರತಿಭಟನಾಗಾರರು, ``ಮದ್ಯ ಮಾರಾಟ ಸಂಪೂರ್ಣ ನಿಲ್ಲಬೇಕು. ಸಾರಾಯಿ ಮಾರಾಟಗಾರ ರಿಗೆ ದಿಕ್ಕಾರ, ನಿಯಂತ್ರಣ ಮಾಡದ ಅಧಿಕಾರಿಗಳಿಗೆ ದಿಕ್ಕಾರ~~ ಎನ್ನುವ ಘೋಷಣೆಗಳನ್ನು ಕೂಗುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾ ಯಿತಿ ಸದಸ್ಯೆ ದ್ಯಾಮವ್ವ ಕಾಗಿನೆಲೆ ಮಾತನಾಡಿ, ಇಡೀ ಊರಿಗೆ ಊರೇ ಸಾರಾಯಿ ಅಂಗಡಿಯಾಗಿದ್ದು, ಗ್ರಾಮದ ಬಹುತೇಕ ಕಿರಾಣಿ ಅಂಗಡಿ ಗಳಲ್ಲಿ ಹಾಗೂ ಪಾನಶಾಪ್‌ಗಳಲ್ಲಿ ಮದ್ಯ ಮಾರಾಟ ನಡೆಯುತ್ತಿದೆ. ಕುಡುಕರು ಅಂಗಡಿಗಳ ಎದುರಿನಲ್ಲಿ ನಿಂತುಕೊಂಡು ಮದ್ಯ ಕುಡಿಯುವುದ ರಿಂದ ಮಕ್ಕಳ ಮೇಲೆ ವ್ಯತಿರಿಕ್ತ ಪರಿ ಣಾಮ ಬೀರುತ್ತಿದೆಯಲ್ಲದೇ, ಯುವಕರು ಸಹ ಕುಡಿತದ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ ಎಂದು ಹೇಳಿದರು.

ಸಂಬಂಧಿಸಿದ ಅಧಿಕಾರಿಗಳು ಅಂಗಡಿಗಳಲ್ಲಿ ನಡೆಯುವ ಅಕ್ರಮ ಮದ್ಯ ಮಾರಾಟದ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲವಾದರೆ, ಅಬಕಾರಿ ಇಲಾಖೆ ಎದುರೇ ಮಹಿಳೆಯರು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಿಷೇಧಕ್ಕೆ ನಿರ್ಧಾರ: ಇದಕ್ಕೂ ಮುನ್ನ ಗ್ರಾಮದ ರಾಜೇಶ್ವರಿ ದೇವಸ್ಥಾದಲ್ಲಿ ಗ್ರಾಮದ ಮುಖಂಡರು ಹಾಗೂ ಮಹಿಳೆಯರು ಸಭೆ ನಡೆಸಿ ಗ್ರಾಮದಲ್ಲಿ ಯಾವುದೇ ಕಾರಣಕ್ಕೂ ಮದ್ಯ ಮಾರಾಟ ನಡೆಯಬಾರದು. ಅದು ಸಂಪೂರ್ಣ ನಿಷೇಧ ಮಾಡಲು  ನಿರ್ಧರಿಸಿದರು.

ಮದ್ಯ ಮಾರಾಟ ಮಾಡುವ ವ್ಯಕ್ತಿಗೆ 10 ಸಾವಿರ ರೂ. ದಂಡ, ಕುಡಿದು ದಾಂದಲೇ ಮಾಡುವ ವ್ಯಕ್ತಿಗೆ ಐದು ಸಾವಿರ ರೂ. ದಂಡ ಹಾಗೂ ಮದ್ಯ ಮಾರಾಟ ಮಾಡುವು ದನ್ನು ಹಿಡಿದು ಕೊಟ್ಟವರಿಗೆ ಎರಡೂ ವರೆ ಸಾವಿರ ರೂ. ಬಹುಮಾನ ನೀಡಲು ಸಭೆಯಲ್ಲಿ ಸರ್ವಾನುಮತ ದಿಂದ ನಿರ್ಧರಿಸಲಾಯಿತು.

ಸಭೆಯ ನಿರ್ಣಯವನ್ನು ಧಿಕ್ಕರಿಸಿ ಮದ್ಯ ಮಾರಾಟ ಹಾಗೂ ಕುಡಿದು ದಾಂದಲೇ ಮಾಡುವುದನ್ನು ಮುಂದುವರೆಸಿದರೆ, ಅಂತಹ ವ್ಯಕ್ತಿ ಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು 32 ಜನರ ಸಮಿತಿಯೊಂದನ್ನು ರಚಿಸ ಲಾಯಿತು ಎಂದು ಗ್ರಾಮದ ಮುಖಂಡ ಸಿದ್ಧನಗೌಡ ರುದ್ರಗೌಡ ಸಿದ್ಧನಗೌಡ್ರ ತಿಳಿಸಿದರು.

ಸಭೆ ಹಾಗೂ ಪ್ರತಿಭಟನೆಯಲ್ಲಿ ನಾಗಪ್ಪ ಬಣಕಾರ, ಬಸವರಾಜ ಬಣ ಕಾರ, ಮಹೇಶಪ್ಪ ಚಂದ್ರಾಪಟ್ಟಣ, ಚಂದ್ರಗೌಡ ಹೊಸಗೌಡ, ಚನ್ನಪ್ಪ ಚಂದ್ರಾಪಟ್ಟಣ, ನಾಗಪ್ಪ ಶೆಟ್ಟೆಪ್ಪ ನವರ, ಶಂಕರಗೌಡ ಸಿದ್ಧನಗೌಡ ಅಲ್ಲದೇ ಅನೇಕ ಮಹಿಳೆಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT