ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿ: 83 ಸಾವಿರ ಅರ್ಜಿ

Last Updated 10 ಏಪ್ರಿಲ್ 2013, 7:01 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ದಾಖಲೆಯ ಮಟ್ಟದಲ್ಲಿ ಜನತೆ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿದ್ದಾರೆ. ಮತದಾರರ ಪಟ್ಟಿಗೆ ಹೆಸರು ಸೇರಿಸಲು ಸುಮಾರು 83236 ಮಂದಿ ನಮೂನೆ 6 ಸಲ್ಲಿಸಿದ್ದಾರೆ.

ಏ. 7ರವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಕಾರ್ಯ ನಡೆಯಿತು. ತುಮಕೂರು ನಗರ ಕ್ಷೇತ್ರದಲ್ಲಿ 22191, ಗ್ರಾಮಾಂತರ 7001, ಚಿಕ್ಕನಾಯಕನಹಳ್ಳಿ 5438, ತಿಪಟೂರು 6929, ತುರುವೇಕೆರೆ 4684, ಕುಣಿಗಲ್ 6962,  ಕೊರಟಗೆರೆ 6557, ಗುಬ್ಬಿ 4823, ಶಿರಾ 6776, ಪಾವಗಡ 6024, ಮಧುಗಿರಿಯಲ್ಲಿ 5851 ಅರ್ಜಿಗಳು ಸಲ್ಲಿಕೆಯಾಗಿವೆ.

ಮರಣ, ವಲಸೆ, ವರ್ಗಾವಣೆ ಮತ್ತು ಸ್ಥಳಾಂತರದ ಕಾರಣಗಳಿಂದ ಹೆಸರು ಕೈಬಿಡಲು ನಮೂನೆ 7ರಲ್ಲಿ ಜಿಲ್ಲೆಯಲ್ಲಿ 14264 ಅರ್ಜಿ ಸಲ್ಲಿಕೆಯಾಗಿವೆ.
ಚಿಕ್ಕನಾಯಕನಹಳ್ಳಿ 1202, ತಿಪಟೂರು 812, ತುರುವೇಕೆರೆ 1045, ಕುಣಿಗಲ್ 2842, ತುಮಕೂರು ನಗರ 1224, ತುಮಕೂರು ಗ್ರಾಮಾಂತರ 1392, ಕೊರಟಗೆರೆ 2051, ಗುಬ್ಬಿ 1100, ಶಿರಾ 842, ಪಾವಗಡ 927, ಮಧುಗಿರಿ 827 ಅರ್ಜಿಗಳು ಸಲ್ಲಿಕೆಯಾಗಿವೆ.

ಮತದಾರರ ಪಟ್ಟಿಯಲ್ಲಿ ತಪ್ಪುಗಳಿದ್ದಲ್ಲಿ ಸರಿಪಡಿಸಿಕೊಳ್ಳಲು 11080 ಅರ್ಜಿ ಸಲ್ಲಿಕೆಯಾಗಿವೆ. ಚಿಕ್ಕನಾಯಕನಹಳ್ಳಿ 868, ತಿಪಟೂರು 691, ತುರುವೇಕೆರೆ 1150, ಕುಣಿಗಲ್ 2036, ತುಮಕೂರು ನಗರ 1323, ಗ್ರಾಮಾಂತರ 1164, ಕೊರಟಗೆರೆ 1352, ಗುಬ್ಬಿ 636, ಶಿರಾ 655, ಪಾವಗಡ 558, ಮಧುಗಿರಿ 647 ಅರ್ಜಿ ಸಲ್ಲಿಕೆಯಾಗಿವೆ.

ಒಂದು ಕ್ಷೇತ್ರದಿಂದ ಮತ್ತೊಂದಕ್ಕೆ ಹೆಸರು ಬದಲಾವಣೆ ಮಾಡಲು 2194 ಅರ್ಜಿ ಸಲ್ಲಿಕೆಯಾಗಿವೆ.  ಚಿ.ನಾ.ಹಳ್ಳಿ ಕ್ಷೇತ್ರದಲ್ಲಿ ಒಂದು ಅರ್ಜಿ ಸಲ್ಲಿಕೆಯಾಗಿಲ್ಲ.  ತಿಪಟೂರು 198, ತುರುವೇಕೆರೆ 53, ಕುಣಿಗಲ್ 158, ತುಮಕೂರು ನಗರ 20, ತುಮಕೂರು ಗ್ರಾಮಾಂತರ 19, ಕೊರಟಗೆರೆ 108, ಗುಬ್ಬಿ 5, ಶಿರಾ 3, ಪಾವಗಡ 668, ಮಧುಗಿರಿ 962 ಅರ್ಜಿ ಸಲ್ಲಿಕೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT