ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಅಣ್ಣಾ ಉಪವಾಸ

Last Updated 4 ಅಕ್ಟೋಬರ್ 2011, 5:15 IST
ಅಕ್ಷರ ಗಾತ್ರ

ಹಮದ್ ನಗರ (ಮಹಾರಾಷ್ಟ್ರ) (ಐಎಎನ್ ಎಸ್): ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಅಣ್ಣಾ ಹಜಾರೆ ಅವರು ಅಕ್ಟೋಬರ್ 13ಕ್ಕೆ ನಡೆಯಲಿರುವ   ಹಿಸಾರ್ ಲೋಕಸಭಾ ಉಪಚುನಾವಣೆಯೊಂದಿಗೆ ಮತ್ತೊಮ್ಮೆ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ತಿಳಿಸಿದ್ದಾರೆ.

~ನನ್ನ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಹಿಸಾರ್ ಗೆ ತೆರಳಿ ಒಂದೆರಡು ಕಡೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಬೇಕೆಂದಿದ್ದೇನೆ. ಅದು ಸಾಧ್ಯವಾಗದೇ ಇದ್ದಲ್ಲಿ  ನಾನು ಹೇಳಬೇಕೆಂದಿರುವುದನ್ನು ವೀಡಿಯೊ ಮಾಡಿ ಅಲ್ಲಿನ ಜನಕ್ಕೆ ಕಳುಹಿಸುತ್ತೇನೆ. ಜನ ಲೋಕಪಾಲ್ ಮಸೂದೆಯನ್ನು ಕಾಂಗ್ರೆಸ್ ಹೇಗೆ ತಡೆ ಹಿಡಿದಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡುವ ಮೂಲಕ ಕಾಂಗ್ರೆಸ್ ಗೆ ಮತ ಕೊಡಬೇಡಿ ಎಂದು ಮನವಿ ಮಾಡುತ್ತೇನೆ~ ಎಂದು ಇಲ್ಲಿ ಹೇಳಿದರು.

~ಯುಪಿಎ ನೇತೃತ್ವದ ಕೇಂದ್ರ ಸರ್ಕಾರ ಅಣ್ಣಾ ಹಜಾರೆ ನೀಡಿದ ಲೋಕಪಾಲ್ ಬಿಲ್ ಬದಲಾಗಿ ಜನ ಲೋಕಪಾಲ್ ಮಸೂದೆ ಜಾರಿಗೆ ಮುಂದಾಗಿದೆ. ಮುಂಬರಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಇದೇ ಪ್ರಮುಖ ವಿಷಯವಾಗಲಿದೆ. ಒಂದೊಮ್ಮೆ ಚಳಿಗಾಲದ ಅಧಿವೇಶನದಲ್ಲಿ ಯುಪಿಎ ಸರ್ಕಾರ ಮಸೂದೆಯನ್ನು ಅಂಗೀಕರಿಸದಿದ್ದರೆ ಬರಲಿರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆ ಮತ ನೀಡಬೇಡಿ ಎಂದು ಜನರಲ್ಲಿ ಮನವಿ ಮಾಡುವುದು ಅನಿವಾರ್ಯವಾಗುತ್ತದೆ~ ಎಂದು ಅವರು ಕಾಂಗ್ರೆಸ್ ಗೆ ಎಚ್ಚರಿಕೆ ನಿಡಿದರು.

~ಉತ್ತರ ಪ್ರದೇಶ ಚುನಾವಣೆಗೆ ನಡೆಯಲಿರುವ ಮತದಾನಕ್ಕೆ ಮೂರು ದಿನ ಮುಂಚಿತವಾಗಿ ಲೋಕಪಾಲ ಮಸೂದೆಯ ಮಹತ್ವ ಹಾಗೂ ಅದನ್ನು ಕಾಂಗ್ರೆಸ್ ತಡೆಹಿಡಿಯುತ್ತಿರುವುದರ ಕುರಿತು ಜನರಲ್ಲಿ ಮನವರಿಕೆ ಮಾಡುವ ಸಲುವಾಗಿ ಮೂರು ದಿನಗಳ ಕಾಲ ಲಕ್ನೌನಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ~ ಅಣ್ಣಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT