ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಉದ್ಯೋಗ ಕಡಿತ

ಸಿಟಿಗ್ರೂಪ್ 11000 ಸಿಬ್ಬಂದಿ ಮನೆಗೆ
Last Updated 6 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ನ್ಯೂಯಾರ್ಕ್/ಲಂಡನ್(ಐಎಎನ್‌ಎಸ್): ಮತ್ತೆ `ಉದ್ಯೋಗ ಕಡಿತ' ಆರಂಭವಾಗಿದೆ. `ಸಿಟಿ ಗ್ರೂಪ್' ಶೇ 4ರಷ್ಟು ಮತ್ತು ಬ್ರಿಟಿಷ್ ಏರ್‌ವೇಸ್ 400 ಸಿಬ್ಬಂದಿಯನ್ನು ಮನೆಗೆ ಕಳುಹಿಸಲು ಸಿದ್ಧತೆ ನಡೆಸಿವೆ.

ಒಟ್ಟು 11 ಸಾವಿರ ನೌಕರಿ ಕಡಿತ ಮಾಡಲಾಗುವುದು. ಇದರಲ್ಲಿ 6200 ಹುದ್ದೆಗಳನ್ನೇ ತೆಗೆದುಹಾಕಲಾಗುತ್ತಿದೆ ಎಂದು `ಸಿಟಿ ಗ್ರೂಪ್' ತಿಳಿಸಿದೆ.
ಅಮೆರಿಕದ ಪ್ರಮುಖ ಬ್ಯಾಂಕ್ ಆಗಿರುವ `ಸಿಟಿಗ್ರೂಪ್' ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಹುದ್ದೆಯಲ್ಲಿದ್ದ ಭಾರತೀಯ ಮೂಲದ ವಿಕ್ರಂ ಪಂಡಿತ್ ಅವರಿಂದಲೂ ಇತ್ತೀಚೆಗಷ್ಟೇ ರಾಜೀನಾಮೆ ಪಡೆದುಕೊಂಡಿತ್ತು.

ಬ್ರಿಟಿಷ್ ಏರ್‌ವೇಸ್: ಲಂಡನ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ `ಬ್ರಿಟಿಷ್ ಏರ್‌ವೇಸ್' ಹಿರಿಯ ಶ್ರೇಣಿಯಲ್ಲಿರುವ 400 ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಲು ಮುಂದಾಗಿದೆ. ಈ ಬಗ್ಗೆ ಕಾರ್ಮಿಕ ಸಂಘಟನೆಗಳ ಜತೆಗೂ ಮಾತುಕತೆ ನಡೆಸಲಾಗುತ್ತಿದೆ ಎಂದು ಕಂಪೆನಿ ತಿಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT