ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ನಾಳ: ನೀರಿನ ಸಮಸ್ಯೆ

Last Updated 16 ಜುಲೈ 2013, 8:26 IST
ಅಕ್ಷರ ಗಾತ್ರ

ಹನುಮಸಾಗರ: ಸಮೀಪದ ಮದ್ನಾಳ ಗ್ರಾಮದಲ್ಲಿ ಹಲವಾರು ತಿಂಗಳುಗಳಿಂದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು ,ಗ್ರಾಮಸ್ಥರು ಕುಡಿಯಲು ಹಾಗೂ ಬಳಕೆಗೆ ನೀರಿಲ್ಲದೆ ತೊಂದರೆ ಎದುರಿಸುತ್ತಿರುವುದು ಕಂಡು ಬಂದಿದೆ.

ಗ್ರಾಮದಲ್ಲಿ ನಾಲ್ಕಾರು ಕೊಳವೆ ಬಾವಿಗಳಿದ್ದರೂ ಅಂತರ್ಜಲ ಬತ್ತಿರುವುದು ಹಾಗೂ ಇದ್ದ ನೀರನ್ನು ಗ್ರಾಮ ಪಂಚಾಯಿತಿ ಸಮರ್ಪಕವಾಗಿ ಪೂರೈಕೆ ಮಾಡದಿರುವ ಕಾರಣವಾಗಿ ನೀರಿನ ಸಮಸ್ಯೆ ಎದುರಾಗಲು ಕಾರಣವಾಗಿದೆ.

ಟ್ಯಾಂಕ್‌ಗಳಿಗೆ ನಳಗಳಿಲ್ಲ, ನೀರಿನ ಕೊಳವೆಗಳು ಅವೈಜ್ಞಾನಿಕವಾಗಿ ಚರಂಡಿಗಳ ಮೂಲಕವೂ ಹಾಯ್ದು ಹೋಗಿವೆ, ಅಲ್ಲಲ್ಲಿ ಕೊಳವೆಗಳು ಒಡೆದು ನೀರು ಪೋಲಾಗುತ್ತಿದ್ದರೂ ಹಲವಾರು ದಿನಗಳಿಂದ ಯಾವುದೆ ದುರಸ್ಥಿ ಕಾರ್ಯ ನಡೆದಿಲ್ಲ ಎಂದು ಎಂದು ಗ್ರಾಮಸ್ಥರು ದೂರುತ್ತಾರೆ.

ಗ್ರಾಮ ಪಂಚಾಯಿತಿಯಿಂದ ಈಚೆಗೆ ನಮ್ಮೂರಲ್ಲಿ ವಾರ್ಡುಗಳ ಸಭೆ ನಡೆದವು.
ನೀವು ಏನೂ ಮಾಡೋದು ಬ್ಯಾಡ ನೀರ ಕೊಡ್ರಿ ಸಾಕು ಎಂದು ಆ ಸಭೆಯಲ್ಲಿ ಹೇಳಿದ್ದೆವು ಆದರೆ ಅದೂ ಕೂಡ ಈಡೇರಲಿಲ್ಲ ಎಂದು ಗ್ರಾಮದ ಯುವಕ ಹನುಮೇಶ ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT