ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುಮೇಹದಿಂದ ಕರುಳಿನ ಕ್ಯಾನ್ಸರ್

Last Updated 4 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್ (ಪಿಟಿಐ): ವಯಸ್ಸಾದಂತೆ ಮಧುಮೇಹಿಗಳಲ್ಲಿ ಮಾರಕ ಕರುಳು ಕ್ಯಾನ್ಸರ್ ಕಂಡು ಬರುವ ಸಾಧ್ಯತೆ ಇದೆ ಎಂದು ಇತ್ತೀಚೆಗೆ ನಡೆಸಿರುವ ಅಧ್ಯಯನವೊಂದು ಹೇಳಿದೆ.ಪಶ್ಚಿಮ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದ ಅಧ್ಯಯನಕಾರರು ನಡೆಸಿರುವ ಅಧ್ಯಯನದಿಂದ ಈ ವಿಚಾರ ತಿಳಿದು ಬಂದಿದೆ.

ಟೈಪ್ -2 ಮಧುಮೇಹ ಮತ್ತು  ಮಾರಕ ಕರುಳಿನ ಕ್ಯಾನ್ಸರ್ ನಡುವೆ ಗಮನಾರ್ಹ ಸಂಬಂಧವಿರುವುದನ್ನು ಈ ಅಧ್ಯಯನ ಪತ್ತೆ ಹಚ್ಚಿದೆ. 11 ವರ್ಷಗಳ ಕಾಲ ನಡೆಸಿರುವ ಈ ಅಧ್ಯಯನಕ್ಕಾಗಿ ಟೈಪ್-2 ಮಧುಮೇಹದಿಂದ ಬಳಲುತ್ತಿರುವ 1,300 ಮಂದಿಯನ್ನು ತೊಡಗಿಸಿಕೊಳ್ಳಲಾಗಿದೆ.

`ಈ ಅಧ್ಯಯನದ ಫಲಿತಾಂಶವನ್ನು ಗಮನದಲ್ಲಿರಿಸಿಕೊಂಡು, ಟೈಪ್ 2 ಮಧುಮೇಹ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಅವರಿಗೆ ವಿಕಿರಣ ತಾಗದಂತೆ ಮುಂಜಾಗ್ರತೆ ವಹಿಸುವುದು ಸೂಕ್ತ~ ಎಂದು ಅಧ್ಯಯನದ ನೇತೃತ್ವ ವಹಿಸಿರುವ ಪ್ರೊ.ಟಿಮ್ ಡೇವಿಸ್ ಹೇಳಿದ್ದಾರೆ.

ಟೈಪ್ 2 ಮಧುಮೇಹದಿಂದ ಬಳಲುತ್ತಿರುವ ಪುರುಷ ಮತ್ತು ಮಹಿಳೆಯರಲ್ಲಿ ಕರುಳು ಕ್ಯಾನ್ಸರ್ ಕಂಡು ಬರುವ ಸಾಧ್ಯತೆ ಇದೆ ಆದರೂ, ಪುರುಷರಲ್ಲಿ ಈ ಪ್ರಮಾಣ ಎರಡರಷ್ಟಿರುತ್ತದೆ ಎಂದು ಅಧ್ಯಯನ ಹೇಳಿದೆ.
`ಕರುಳು ಕ್ಯಾನ್ಸರ್ ಇದೆ ಎಂದು ಆರಂಭದಲ್ಲೇ ತಿಳಿದ ಶೇ 90ರಷ್ಟು ಪ್ರಕರಣಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ~ ಎಂದು ಡೇವಿಸ್ ಹೇಳಿದ್ದಾರೆ.

ಪುಸ್ತಕದಂಗಡಿ ಮುಚ್ಚಿಸಿದ `ಇ- ರೀಡರ್~!
ಲಂಡನ್ (ಪಿಟಿಐ): ಬ್ರಿಟನ್‌ನಲ್ಲಿ ಕಳೆದ ಆರು ವರ್ಷಗಳಿಂದ 600ಕ್ಕೂ ಹೆಚ್ಚು ಪುಸ್ತಕದಂಗಡಿಗಳ ಬಾಗಿಲು ಮುಚ್ಚಿವೆ. ಇದಕ್ಕೆ ಅಂತರ್ಜಾಲದ ಮೂಲಕ ಓದುವಿಕೆ (ಇ- ರೀಡರ್) ಮತ್ತು ಹೆಚ್ಚಾಗುತ್ತಿರುವ ಸೂಪರ್ ಮಾರ್ಕೆಟ್ ಸಂಸ್ಕೃತಿ ಕಾರಣ ಎಂದು ಸಮೀಕ್ಷೆಯೊಂದು ಹೇಳಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT