ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯವರ್ತಿಗಳ ಮೊರೆ ಹೊಗದಿರಲು ಸಲಹೆ

Last Updated 9 ಡಿಸೆಂಬರ್ 2013, 9:15 IST
ಅಕ್ಷರ ಗಾತ್ರ

ಸಾಲಿಗ್ರಾಮ: ರಾಜ್ಯ ಸರ್ಕಾರದ ವಿವಿಧ ಯೋಜನೆಗಳಿಂದ ಸವಲತ್ತುಗಳನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸುವ ಅರ್ಹಫಲಾನುಭವಿಗಳು ಯಾವುದೇ ಕಾರಣಕ್ಕೂ ಮಧ್ಯವರ್ತಿಗಳನ್ನು ಕರೆದು ಕೊಂಡು ಕಚೇರಿಗೆ ಬರಬೇಡಿ.

ಬದಲಿಗೆ ನೇರವಾಗಿ ಬಂದು ಅರ್ಜಿ ಕೊಟ್ಟು ಸವಲತ್ತುಗಳನ್ನು ಪಡೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ಹೊಸ ಅಗ್ರಹಾರ ಹೋಬಳಿ ಉಪ ತಹಶೀಲ್ದಾರ್ ಎಂ.ಎಸ್. ಯದು ಗಿರೀಶ್ ಈಚೆಗೆ ಮನವಿ ಮಾಡಿದರು.

ಹೊಸ ಅಗ್ರಹಾರ ಹೋಬಳಿ ವ್ಯಾಪ್ತಿಯ ಮುಂಜನಹಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಪಿಂಚಣಿ ಅದಾಲತ್’ ನಲ್ಲಿ ಅರ್ಹ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿ ಅವರು ಮಾತನಾಡಿದರು. ವೃದ್ಧಾಪ್ಯ, ಅಂಗವಿಕಲ, ವಿಧವಾ, ಸಂಧ್ಯಾ ಸುರಕ್ಷಾ, ಮನಸ್ವಿನಿ ಯೋಜನೆಗಳಿಂದ ಸವಲತ್ತು ಬಯಸಿ ಅರ್ಜಿಸಲ್ಲಿಸಲು ಇಚ್ಛೆ ಪಡುವ ಅರ್ಹರು ಯಾವುದೇ ಕಾರಣಕ್ಕೂ ಮಧ್ಯವರ್ತಿಗಳಿಗೆ ಹಣವನ್ನು ಕೊಟ್ಟು ಸವಲತ್ತುಗಳನ್ನು ಪಡೆದು ಕೊಳ್ಳಲು ಬಯಸಬೇಡಿ ಎಂದು ಹೇಳಿದರು.

ಯೋಜನೆಗಳ ಲಾಭ ಒದಗಿಸಲು ಅಥವಾ ಯೋಜನಾ ಮಂಜೂರಾತಿಗೆ ಯಾರಾದರೂ ಹಣ ಕೇಳಿದರೆ ತಕ್ಷಣ ತಹಶೀಲ್ದಾರ್ ಅವರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು. ತಾಲ್ಲೂಕಿನ 31ಗ್ರಾಮ ಪಂಚಾಯಿತಿ ಗಳಲ್ಲಿ ಪಿಂಚಣಿ ಅದಾಲತ್ ಅಯೋಜಿಸ ಲಾಗುತ್ತದೆ. ಇದರ ಉಪಯೋಗವನ್ನು ಅರ್ಹ ಫಲಾನುಭವಿಗಳು ಪಡೆದು­ಕೊಳ್ಳಬೇಕು ಎಂದರು.

ಮುಂಜನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಅಮರ್, ಉಪಾಧ್ಯಕ್ಷೆ ಕಮಲಮ್ಮ, ಮಾಜಿ ಅಧ್ಯಕ್ಷ ಹನೀಫ್‌ಗೌಡ, ಕಂದಾಯಾಧಿಕಾರಿ ಜಯಪ್ಪ, ಗ್ರಾಮಲೆಕ್ಕಿಗರಾದ ಗುರುಪ್ರಸಾದ್, ಪರ್ವತಯ್ಯ, ಯುವ ಮುಖಂಡ ಅಮರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT