ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಯಾಂಕ್ ದ್ವಿಶತಕ

Last Updated 9 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಬೆಂಗಳೂರಿನ ಮಯಾಂಕ್ ಅಗರ್‌ವಾಲ್ ಇಲ್ಲಿ ನಡೆಯುತ್ತಿರುವ ಅಂತರ ವಿಶ್ವವಿದ್ಯಾಲಯ ಅಂತರ ವಲಯ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ದ್ವಿಶತಕದ ಮೂಲಕ ಮಿಂಚಿದರು. ದಕ್ಷಿಣ ವಲಯ ತಂಡವನ್ನು ಪ್ರತಿನಿಧಿಸುತ್ತಿರುವ ಮಯಾಂಕ್ ಉತ್ತರ ವಲಯ ವಿರುದ್ಧದ ಪಂದ್ಯದಲ್ಲಿ ಗುರುವಾರ ಆಕರ್ಷಕ 235 ರನ್ (22 ಬೌಂ, 13 ಸಿಕ್ಸರ್) ಗಳಿಸಿದರು.

ನಾಲ್ಕು ದಿನಗಳ ಪಂದ್ಯದಲ್ಲಿ ಉತ್ತರ ವಲಯ ಮೊದಲ ಇನಿಂಗ್ಸ್‌ನಲ್ಲಿ 365 ರನ್‌ಗಳಿಗೆ ಆಲೌಟಾಗಿತ್ತು. ಇದಕ್ಕೆ ಉತ್ತರವಾಗಿ ದಕ್ಷಿಣ ವಲಯ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್‌ಗೆ 417 ರನ್ ಗಳಿಸಿದೆ. ಮಯಾಂಕ್ ಅವರು ಕೆ. ರೋಹಿತ್ (109) ಜೊತೆಗೆ ಮೊದಲ ವಿಕೆಟ್‌ಗೆ 328 ರನ್ ಸೇರಿಸಿದರು.

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿಧಿಸುತ್ತಿರುವ ಮಯಾಂಕ್ ಶತಕ ಪೂರೈಸಲು 102 ಎಸೆತಗಳನ್ನು ತೆಗೆದುಕೊಂಡರು. ಅಲ್ಲಿಂದ ದ್ವಿಶತಕದ ಗಡಿ ದಾಟಲು ಕೇವಲ 73 ಎಸೆತಗಳು ಬೇಕಾಗಿ ಬಂದವು.

ಸಂಕ್ಷಿಪ್ತ ಸ್ಕೋರ್: ಉತ್ತರ ವಲಯ: ಮೊದಲ ಇನಿಂಗ್ಸ್ 365. ದಕ್ಷಿಣ ವಲಯ: ಮೊದಲ ಇನಿಂಗ್ಸ್ 3 ವಿಕೆಟ್‌ಗೆ 417 (ಮಯಾಂಕ್ ಅಗರ್‌ವಾಲ್ 235, ಕೆ. ರೋಹಿತ್ 109, ಚರಣ್‌ಜೀತ್ ಸಿಂಗ್ 94ಕ್ಕೆ 3).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT