ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರದ ಕಲೆ: ಅಂತರರಾಷ್ಟ್ರೀಯ ಸಮ್ಮೇಳನ ಆರಂಭ

Last Updated 19 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಮರದ ಕಲೆ ಮತ್ತು ಸಂತಸ~ ಎಂಬ ಆಶಯದೊಂದಿಗೆ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ (ಎಫ್‌ಎಓ) ಸಹಯೋಗದೊಂದಿಗೆ ಭಾರತೀಯ ಮರ ಸಂಶೋಧನೆ ಮತ್ತು ತಂತ್ರಜ್ಞಾನ ಸಂಸ್ಥೆ (ಐಡಬ್ಲ್ಯೂಎಸ್‌ಟಿ)ಯು ಹಮ್ಮಿಕೊಂಡಿರುವ ಮೂರು ದಿನಗಳ ಅಂತರ ರಾಷ್ಟೀಯ ಸಮ್ಮೇಳನವು ನಗರದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯ ಟಾಟಾ ಸಭಾಂಗಣದಲ್ಲಿ ಬುಧವಾರ ಆರಂಭವಾಯಿತು.

ಒಟ್ಟು 31 ರಾಷ್ಟ್ರಗಳ, ದೇಶದ ಹಲವು ರಾಜ್ಯಗಳ ಒಟ್ಟು 273 ಪ್ರತಿನಿಧಿಗಳು ಭಾಗವಹಿಸಿರುವ ಈ ಸಮ್ಮೇಳನವನ್ನು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್.ಸುರೇಶ್‌ಕುಮಾರ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, `ಮರಗಳ ಬಳಕೆ ನಮ್ಮ ಸಂಸ್ಕೃತಿಯಲ್ಲೇ ಬೆರೆತು ಹೋಗಿದೆ. ದೇವಸ್ಥಾನ, ಚರ್ಚು, ಮಸೀದಿ ಸೇರಿದಂತೆ ಹಲವು ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಮರಗಳ ಉತ್ಪನ್ನಗಳನ್ನು ಬಳಸುತ್ತಿದ್ದೇವೆ.

ರಾಜ್ಯದಲ್ಲಿ ಶೇ 18ರಷ್ಟು ಕಾಡು ಪ್ರದೇಶವಿದೆ. ಆದರೆ ನಗರದಲ್ಲೂ ಸಹ ಮರಗಳನ್ನು ಉಳಿಸಿದ್ದಕ್ಕೆ ಪ್ರತೀಕವಾಗಿ ನಗರದ ಹಲವು ಬೀದಿಗಳಿಗೆ ಸಂಪಿಗೆ ರಸ್ತೆ, ಮಾರ್ಗೋಸಾ ರಸ್ತೆ, ಗುಲ್‌ಮೊಹರ್ ಮಾರ್ಗ ಹೀಗೆ ಹಲವು ಹೆಸರುಗಳನ್ನು ನಾಮಕರಣ ಮಾಡಲಾಗಿದೆ~ ಎಂದರು.

ಕೃಷಿ ಮತ್ತು ಆಹಾರ ಸಂಸ್ಥೆಯ ನಿರ್ದೇಶಕ ರೋಮ್‌ನ ಆರ್.ಮೈಕೆಲ್ ಮಾರ್ಟಿನ್, `ಭಾರತ ಆಹಾರ ಉತ್ಪಾದನೆ ಮತ್ತು ಪೂರೈಕೆಯಲ್ಲಿ ಮೊದಲಿನಿಂದಲೂ ಸಂಸ್ಥೆಗೆ ಸಹಾಯ ಮಾಡು ತ್ತಿದ್ದು, ಉತ್ತಮ ಸ್ನೇಹಿತನಾಗಿದೆ. ದೇಶದ ಯುವ ಕರು ಆಹಾರ ಉತ್ಪಾದಿಸಲು ಮುಂದಾಗಬೇಕು. ಕೃಷಿಯಲ್ಲಿ ತೊಡಗಿಕೊಳ್ಳಬೇಕು~ ಎಂದರು.

ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿಯ (ಐಸಿಎಫ್‌ಆರ್‌ಇ) ಮಹಾ ನಿರ್ದೇಶಕ ಡಾ.ವಿ.ಕೆ.ಬಹುಗುಣ, `ಸಂಸ್ಥೆಯು 200 ಬಗೆಯ ಮರಮುಟ್ಟುಗಳ ಬಗ್ಗೆ ಸಂಶೋಧನೆ ನಡೆಸಿದೆ.

ಇವುಗಳ ಮೂಲ ದತ್ತಾಂಶ ಮತ್ತು ತಾಂತ್ರಿಕ ಸಹಯೋಗವನ್ನು ನೀಡುತ್ತಿದೆ. ಸಾಂಪ್ರದಾಯಿಕವಾಗಿ ಬೆಳೆಯುತ್ತಿರುವ ಮರಗಳನ್ನು ಕಡಿದ ಬಳಿಕ ಅದರ ಇತರ ಭಾಗಗಳನ್ನು ಎಸೆಯುವ ಬದಲು ಸದುಪಯೋಗ ಮಾಡುವ ಮೂಲಕ ಬೇಡಿಕೆಯನ್ನು ತಗ್ಗಿಸಬಹುದು~ ಎಂದು ಹೇಳಿದರು.

ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ವಿಶೇಷ ಕಾರ್ಯದರ್ಶಿ ಡಾ.ಪಿ.ಜೆ.ದಿಲೀಪ್‌ಕುಮಾರ್ ಅವರು ಮಾತನಾಡಿ, `ಮರಗಳನ್ನು ಮೊದಲಿಂದಲೂ ಸಂಗೀತ ಉಪಕರಣ ತಯಾರಿಸಲು ಬಳಸಲಾಗು ತ್ತಿದೆ.

ಈ ಕ್ಷೇತ್ರದಲ್ಲಿ ಭಾರತ ಮುಂಚೂಣಿಯಲ್ಲಿದೆ. ಆದರೆ ಗಂಧದ ಮರಗಳನ್ನು ಅಕ್ರಮವಾಗಿ ಕಡಿ ಯಲಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಬೆಳೆಯುವ ಕೆಂಪು ಶ್ರೀಗಂಧ ಮರಗಳನ್ನು ಕಡಿಯುವ ಪ್ರವೃತ್ತಿ ಹೆಚ್ಚುತ್ತಿದೆ~ ಎಂದು ವಿಷಾದ ವ್ಯಕ್ತಪಡಿಸಿದರು. ಐಡಬ್ಲ್ಯೂಎಸ್‌ಟಿ ನಿರ್ದೇಶಕ ಎಸ್.ಸಿ.ಜೋಶಿ ಸ್ವಾಗತಿಸಿದರು.

ತ್ರಿಪುರಾದಲ್ಲಿ ರಾಷ್ಟ್ರೀಯ ಬಿದಿರು ಪಾರ್ಕ್
ವೈವಿಧ್ಯಮಯ ಬಿದಿರಿನ ತಳಿಗಳನ್ನು ಬೆಳೆಯುವ ತ್ರಿಪುರಾದಲ್ಲಿ ರಾಷ್ಟ್ರದಲ್ಲೇ ಮೊಟ್ಟ ಮೊದಲ ಬಿದಿರು ಪಾರ್ಕ್ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿದೆ. ಮರಗಳ ಬಳಕೆ ಕುರಿತಾದ ಮೂರು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ್ದ ತ್ರಿಪುರಾ ರಾಜ್ಯದ ಅರಣ್ಯ ಸಚಿವ ಜಿತೇಂದ್ರ ಚೌಧುರಿ `ಪ್ರಜಾವಾಣಿ~ಗೆ ಈ ಮಾಹಿತಿ ನೀಡಿದರು.

ಒಟ್ಟು 10,500 ಚದರ ಅಡಿ ವಿಸ್ತೀರ್ಣ ಹೊಂದಿರುವ ತ್ರಿಪುರಾದಲ್ಲಿ ಶೇ 43ರಷ್ಟು ಭಾಗದಲ್ಲಿ ಬಿದಿರು ಬೆಳೆಯಲಾಗುತ್ತಿದೆ. ಒಟ್ಟು 20 ಸಾವಿರ ಕರಕುಶಲ ಕರ್ಮಿಗಳು ಬಿದಿರು ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿದ್ದಾರೆ ಎಂದು ತಿಳಿಸಿದರು.

ಬಿದಿರಿನ ತಳಿಗಳನ್ನು ವೃದ್ಧಿಸುವ ಸಲುವಾಗಿ ಈ ಪಾರ್ಕ್ ಘೋಷಿಸಲಾಗಿದೆ. 21 ಬಗೆಯ ಬಿದಿರಿನ ತಳಿಗಳನ್ನು ಗುರುತಿಸಲಾಗಿದ್ದು, ಮನೆಗಳ ನಿರ್ಮಾಣ, ಕೈಗಾರಿಕೆಗಳಿಗೆ ಪೂರೈಕೆ, ಐಸ್‌ಕ್ರೀಂ ಕಡ್ಡಿಗಳಾಗಿ ಬಳಕೆ ಮಾಡಲು ಉದ್ದೇಶಿಸಲಾಗಿದೆ ಎಂದು ಚೌಧುರಿ ನುಡಿದರು.

ಮರ ಉತ್ಪನ್ನಗಳ ಪ್ರದರ್ಶನ
ವೈವಿಧ್ಯಮಯ ಮರಗಳ ಉತ್ಪನ್ನಗಳನ್ನು ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರದರ್ಶಿಸಲಾ ಗುತ್ತಿದೆ. ತೈವಾನ್‌ನ ಕುಶಲಕರ್ಮಿಗಳು ಸೇರಿ ದಂತೆ ದೇಶದ ತ್ರಿಪುರಾ, ಅರುಣಾಚಲ ಪ್ರದೇಶ, ಉತ್ತರಾಖಂಡ, ಆಂಧ್ರಪ್ರದೇಶ, ಕೇರಳ, ಕರ್ನಾ ಟಕದ ಹಲವು ಕುಶಲಕರ್ಮಿಗಳು ತಮ್ಮ ಉತ್ಪನ್ನ ಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದ್ದಾರೆ.

ಕೇರಳದ ಸಾಂಪ್ರದಾಯಿಕ ನೃತ್ಯ ಪ್ರಕಾರವಾದ ಕಥಕ್ಕಳಿ ಪ್ರದರ್ಶನ ಸಂದರ್ಭದಲ್ಲಿ ಕಲಾವಿದರು ಧರಿಸುವ ವಸ್ತುಗಳು ಪ್ರದರ್ಶನ ದಲ್ಲಿವೆ. ಆಂಧ್ರಪ್ರದೇಶದ ಕುಶಲಕರ್ಮಿಗಳ ವೀಣೆ, ಉತ್ತರಾಖಂಡದವರ ಬುದ್ಧ, ಗಣೇಶ, ಕಾಳಿಯ ಮೂರ್ತಿಗಳು, ರಾಜ್ಯದ ಚನ್ನಪಟ್ಟಣದ ಮರದ ಆಟಿಕೆಗಳು, ಅಲಂಕಾರಿಕ ವಸ್ತುಗಳು ಅಲ್ಲಿದ್ದವು.

ವಿಜಾಪುರ ಜಿಲ್ಲೆ ಆಲಮೇಲ ಬಳಿಯ ಉಚಿತ ನಾವದಗಿ ಗ್ರಾಮದ ಮೋನಪ್ಪ ಬಡಿಗೇರ ಅವರು ಚಿಕ್ಕ ಬಾಟಲಿಯಲ್ಲಿ ಎತ್ತಿನ ಚಕ್ಕಡಿ, ಮಂಚದ ಪ್ರತಿಕೃತಿಗಳು ಇಲ್ಲಿವೆ. ತೈವಾನ್‌ನ ಕುಶಲಕರ್ಮಿ ಗಳು ಜಪಾನಿ ಸಾಂಪ್ರದಾಯಿಕ ಕಲೆಯ ವಿಧಾನ ಗಳ ಪ್ರಾತ್ಯಕ್ಷಿಕೆ ನೀಡಿದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT