ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾ.10 ರಿಂದ ಚುನಾವಣೆಗೆ ಸಿದ್ಧತೆ

Last Updated 5 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮೈಸೂರು: `ಜಾತ್ಯತೀತ ಜನತಾದಳವು  ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗಾಗಿ ಮಾರ್ಚ್ 10 ರಂದು ಸಿದ್ಧತೆ ಆರಂಭಿಸಲಿದೆ~ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭಾನುವಾರ ಇಲ್ಲಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಮಾರ್ಚ್ 10 ರಿಂದ ಪಕ್ಷದ ನಾಯಕರು ಪ್ರತಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಮೊದಲ ಹಂತದಲ್ಲಿ 30 ಜಿಲ್ಲೆಗಳು ಮತ್ತು ಐದು ವಿಭಾಗ ಮಟ್ಟದಲ್ಲಿ ವಿವಿಧ ಸಮಾವೇಶ ನಡೆಯಲಿವೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರು, ಅಲ್ಪಸಂಖ್ಯಾತರು ಮತ್ತು ಮಹಿಳಾ ಸಮಾವೇಶಗಳನ್ನು ನಡೆಸಲಾಗುವುದು. ಹೆಚ್ಚು ಸಮಯ ವ್ಯರ್ಥ ಮಾಡುವುದಿಲ್ಲ. ಜನರ ಮಧ್ಯದಲ್ಲಿಯೇ ಇದ್ದು ರಾಜ್ಯದ ಸಮಸ್ಯೆಗಳು ಮತ್ತು ಸವಾಲುಗಳ ಕುರಿತು ಜಾಗೃತಿ ಮೂಡಿಸುತ್ತೇವೆ. ನಮ್ಮ ಹೋರಾಟದ ಮೂಲಕ ಜನರ ವಿಶ್ವಾಸ ಗಳಿಸುತ್ತೇವೆ~ ಎಂದರು.

`ಕಾಂಗ್ರೆಸ್‌ನಲ್ಲಿ ಭಿನ್ನಮತ ಇಲ್ಲ~
ಉಡುಪಿ:
ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಮತವಿಲ್ಲ. ಶನಿವಾರ ನಡೆದ ಪ್ರದೇಶ ಕಾಂಗ್ರೆಸ್ ಸಮಿತಿಯ ಸರ್ವ ಸದಸ್ಯರ ಸಭೆಗೆ ಕೆಲವು ಶಾಸಕರು ಗೈರು ಹಾಜರಾಗಿರುವುದಕ್ಕೆ ವಿಶೇಷ ಅರ್ಥ ಬೇಡ, ಅವರೆಲ್ಲ ವೈಯಕ್ತಿಕ ಕಾರಣಗಳಿಗಾಗಿ ಗೈರಾಗಿದ್ದಾರೆ ಎಂದು ಕಂಪೆನಿ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿದ್ದಾರೆ.
ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೈರುಹಾಜರಾದ ಶಾಸಕರು ಎನ್‌ಸಿಪಿಗೆ ಸೇರುವುದಿಲ್ಲ. ಕಾರಣ ಆ ಪಕ್ಷ ಇಲ್ಲಿ ಅಸ್ತಿತ್ವದಲ್ಲಿ ಇಲ್ಲ, ಅಸ್ತಿತ್ವ, ಬೆಂಬಲ ಇಲ್ಲದ ಪಕ್ಷಕ್ಕೆ ಯಾವ ರಾಜಕಾರಣಿಗಳೂ ಆಕರ್ಷಿತರಾಗುವುದಿಲ್ಲ ಎಂದರು.

`ನೇತ್ರಾವತಿ ತಿರುವು ಯೋಜನೆ~ ಕುರಿತಂತೆ ಅವರು ಮಾತನಾಡಿ, ಸಕಲೇಶಪುರದ ಎತ್ತಿನಹೊಳೆಯಲ್ಲಿ ಪಂಪ್‌ಮೂಲಕ ನೀರೆತ್ತಿ ನೀರಿಲ್ಲದ ಭಾಗಗಳಿಗೆ ಅದನ್ನು ಹರಿಸುವ ಯೋಜನೆ ಸಮರ್ಪಕವಾಗಿದೆ. ಇದರಿಂದ ಪರಿಸರಕ್ಕೆ ಹಾನಿಯಿಲ್ಲ. ಮುಖ್ಯಮಂತ್ರಿ ಜತೆಗೆ ನೀರಿನ ವಿಚಾರದಲ್ಲಿ ಒಳಒಪ್ಪಂದ ಮಾಡಿಕೊಂಡಿಲ್ಲ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT