ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತನಾಡುವ ಸಿಗರೇಟ್ ಪ್ಯಾಕ್!

Last Updated 1 ಜುಲೈ 2013, 19:59 IST
ಅಕ್ಷರ ಗಾತ್ರ

ಲಂಡನ್(ಪಿಟಿಐ):  ಧೂಮಪಾನ ತ್ಯಜಿಸುವುದನ್ನು ಉತ್ತೇಜಿಸಲು `ಮಾತನಾಡುವ' ಸಿಗರೇಟ್ ಪ್ಯಾಕೆಟ್‌ಗಳನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಈ ಪ್ಯಾಕೆಟ್‌ಗಳಲ್ಲಿ ಧ್ವನಿಮುದ್ರಿತ ಸಂದೇಶಅಳವಡಿಸಲಾಗಿದ್ದು, ಇದು ಧೂಮಪಾನಿಗೆ ದುಷ್ಪರಿಣಾಮದ ಬಗ್ಗೆ ಎಚ್ಚರಿಕೆ ನೀಡುತ್ತದೆ.

ಬ್ರಿಟನ್‌ನ ಸ್ಟಿರ್ಲಿಂಗ್ ವಿಶ್ವವಿದ್ಯಾಲಯದ ಸಂಶೋಧಕರು ವಿವಿಧ ಸಂದೇಶವುಳ್ಳ ಎರಡು ಸಿಗರೇಟ್ ಪ್ಯಾಕೆಟ್‌ಗಳನ್ನು ತಯಾರಿಸಿದ್ದಾರೆ.

ಒಂದು ಪ್ಯಾಕೆಟ್ ಮೇಲೆ ಫೋನ್ ನಂಬರ್ ಮುದ್ರಿಸಲಾಗಿದೆ. ಆ ಸಂಖ್ಯೆಗೆ ಕರೆ ಮಾಡಿದರೆ ಧೂಮಪಾನ ತ್ಯಜಿಸುವ ಬಗ್ಗೆ ಸಲಹೆ ದೊರೆಯುತ್ತದೆ. ಇನ್ನೊಂದು ಪ್ಯಾಕೆಟ್ `ಧೂಮಪಾನದಿಂದ ಶಕ್ತಿ ಕುಂದುತ್ತದೆ' ಎಂದು ಎಚ್ಚರಿಕೆ ನೀಡುತ್ತದೆ ಎಂದು `ದ ಮಿರರ್' ಪತ್ರಿಕೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT