ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯ ಮೌಲ್ಯ ನಶಿಸುತ್ತಿವೆ:ಸ್ವಾಮೀಜಿ

Last Updated 22 ಡಿಸೆಂಬರ್ 2012, 5:57 IST
ಅಕ್ಷರ ಗಾತ್ರ

ಹೊಸಪೇಟೆ: ಹಿಂದೂ ಸಂಸ್ಕೃತಿಯ ಆಚರಣೆಗಳು ತನ್ನದೇ ಆದ ಮಹತ್ವ ಹೊಂದಿದ್ದರೂ ಅವುಗಳನ್ನು ಇಂದು ಯುವ ಪೀಳಿಗೆಗೆ ತಿಳಿಸುವ ಕೆಲಸ  ಮಠ ಮಾನ್ಯಗಳಿಂದಲಾದರೂ ಆಗಬೇಕಿದೆ ಎಂದು  ಸಂಗನಬಸವ ಸ್ವಾಮೀಜಿ ಹೇಳಿದರು. ಹೊಸಪೇಟೆಯ  ಕೊಟ್ಟೂರುಸ್ವಾಮಿ ಮಠದಲ್ಲಿ ನಡೆಯುತ್ತಿರುವ ಧಾರ್ಮಿ ಕೋತ್ಸವದ ಅಂಗವಾಗಿ ಹಮ್ಮಿ ಕೊಂಡಿದ್ದ 1111 ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮದ ನಂತರ ಆಶೀರ್ವಚನ ನೀಡಿದರು.

ಹಿಂದೂ ಕುಟುಂಬಗಳು ಬೇರೆ ಬೇರೆ ಕಾರಣಗಳಿಂದ ಹರಿದು ಹಂಚಿ ಹೋಗುತ್ತಿವೆ. ಪಾಲಕರು ಹಾಗೂ ಅಜ್ಜ ಅಜ್ಜಿಯರ ಲಾಲನೆ ಪಾಲನೆಯಲ್ಲಿ ಬೆಳೆಯಬೇಕಾದ ಮಕ್ಕಳು ಬಾಲ ವಾಡಿಗಳಲ್ಲಿ ಬೆಳೆಯುತ್ತಿದ್ದು ಅವು ಗಳಿಗೂ ತಾಂತ್ರಿಕ ಶಿಕ್ಷಣ ನೀಡುತ್ತಿದ್ದೇವೆ.
ಹೀಗಾಗಿ ನಮ್ಮ ಹಿಂದೂ ಸಂಸ್ಕೃತಿ ಹಾಗೂ ಆಚಾರ ವಿಚಾರಗಳು ಮತ್ತು ಮಹತ್ವ ಮಕ್ಕಳಿಗೆ ತಿಳಿಯದಾಗುತ್ತಿದ್ದು  ಮೌಲ್ಯಯುತ ಮಾನವೀಯ ಸಂಬಂಧ ಗಳು ಮಾಯ ವಾಗುವ ಹಂತಕ್ಕೆ ಬಂದು ತಲುಪಿದ್ದು ಈ ವಿನಾಶವನ್ನು ತಡೆಯಲು ಇಂತಹ ಕಾರ್ಯಕ್ರಮಗಳು ಸಹಕಾರಿ.

ನಮ್ಮ ಲಾಲನೆ ಪಾಲನೆ ಜೊತೆ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಕಾರಣಳಾದ ಮಾತೆಗೆ ಗೌರವಿಸ ಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಈ ಹಿನ್ನೆಲೆಯಲ್ಲಿಯೇ ಉಡಿತುಂಬುವ ಕೆಲಸ ಮಾಡಲಾಗಿದೆ ಎಂದರು.   
ದರೂರು ಕೊಟ್ಟೂರು ದೇಶಿಕರು, ಕರೇಗುಡ್ಡದ ಷ.ಬ್ರ. ಮಹಾಂತಲಿಂಗ ಶಿವಾಚಾರ್ಯರು, ಗರಗ ನಾಗ ಲಾಪುರದ  ಮರಿಮಹಾಂತ ಸ್ವಾಮೀಜಿ, ನಿರಡ ಗುಂಬ ಜಯ  ಪಂಚಮ ಸಿದ್ಧಲಿಂಗ ಸ್ವಾಮೀಜಿ, ಮಾಜಿ ಶಾಸಕ ದಿವಂಗತ ಭೀಮನೇನಿ ಕೊಂಡಯ್ಯ ಕುಂಟುಂಬದವರು ಹಾಜರಿದ್ದರು.

ಅಕ್ಕನಬಳಗ, ವೀರಶೈವ ಯುವ ವೇದಿಕೆಯ ಕಾರ್ಯಕರ್ತರು ಹಾಜರಿದ್ದು ವಿವಿಧ ಧರ್ಮದ ಸಾವಿರದ ಒಂದುನೂರ ಹನ್ನೊಂದು ಮುತ್ತೈದೆಯರಿಗೆ ಸಾಂಪ್ರದಾಯಿಕ ವಿಧಿ ಯೊಂದಿಗೆ ಉಡಿ ತುಂಬಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT