ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ ತಾಲ್ಲೂಕು ಪಂಚಾಯಿತಿ:ಅಧ್ಯಕ್ಷೆ ಕೊಂಡುಬಾಯಿ, ಪಾಟೀಲ ಉಪಾಧ್ಯಕ್ಷ

Last Updated 20 ಅಕ್ಟೋಬರ್ 2012, 8:15 IST
ಅಕ್ಷರ ಗಾತ್ರ

ಮುಂಡಗೋಡ: ಇಲ್ಲಿನ ತಾಲ್ಲೂಕು ಪಂಚಾಯಿತಿಯ ಎರಡನೆಯ ಅವಧಿಗೆ ಅಧ್ಯಕ್ಷರಾಗಿ ಕೊಂಡುಬಾಯಿ ಜೋರೆ ಹಾಗೂ ಉಪಾಧ್ಯಕ್ಷರಾಗಿ ಸಿದ್ದನಗೌಡ ಪಾಟೀಲ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.
ಒಟ್ಟು 11 ಸದಸ್ಯ ಬಲದ ಇಲ್ಲಿನ ತಾ.ಪಂ.ದಲ್ಲಿ ಕಾಂಗ್ರೆಸ್ 6 ಹಾಗೂ ಬಿಜೆಪಿ 5 ಸದಸ್ಯರನ್ನು ಹೊಂದಿದೆ.

ಎರಡನೆಯ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಎಂದು ಮೀಸಲಾತಿ ಪ್ರಕಟಗೊಂಡಿತ್ತು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಿಂದ ಕೊಂಡುಬಾಯಿ ಜೋರೆ, ಬಿಜೆಪಿಯಿಂದ ಶ್ಯಾಮಲಾ ಹೆಗಡೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಸಿದ್ದನಗೌಡ ಪಾಟೀಲ, ಬಿಜೆಪಿಯಿಂದ ಸಹದೇವ ನಡಗೇರಿ  ನಾಮಪತ್ರ ಸಲ್ಲಿಸಿದ್ದರು.

ಆದರೆ ಅಂತಿಮವಾಗಿ ಬಹುಮತವಿಲ್ಲದ ಕಾರಣ ಬಿಜೆಪಿ ಬೆಂಬಲಿತ ಸದಸ್ಯರು ನಾಮಪತ್ರ ಹಿಂಪಡೆದಿದ್ದರಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದರು. ಶಿರಸಿ ಉಪವಿಭಾಗಾಧಿಕಾರಿ ಗೌತಮ ಬಗಾದಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ತಹಶೀಲ್ದಾರ ವಿ.ಎನ್.ನಾಡಗೌಡ, ತಾ.ಪಂ.ಇ.ಒ ಆರ್.ಎಚ್.ಕುಲಕರ್ಣಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ನಂತರ ನಡೆದ ಅಭಿನಂದನಾ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಶಿವರಾಮ ಹೆಬ್ಬಾರ ಮಾತನಾಡಿ ಮಾತನಾಡಿದರು.ಎಲ್.ಟಿ.ಪಾಟೀಲ, ನೂತನ ಅಧ್ಯಕ್ಷೆ ಕೊಂಡುಬಾಯಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿಗೌಡ ಪಾಟೀಲ, ರಾಮಣ್ಣ ಪಾಲೇಕರ, ರಾಮಕೃಷ್ಣ ಮೂಲಿಮನಿ, ಕೃಷ್ಣ ಹಿರೇಹಳ್ಳಿ, ಕೆ.ಬಿ.ಕೊಳ್ಳಾನವರ, ರಫೀಕ ಇನಾಂದಾರ, ಎಚ್.ಎಂ.ನಾಯ್ಕ, ಕೆ.ಆರ್.ಬಾಳೆಕಾಯಿ, ಅಶೋಕ ಸಿರ್ಸಿಕರ, ಸರೋಜಾ ಹೇಂದ್ರೆ, ಶಾರದಾಬಾಯಿ ರಾಠೋಡ, ಪಕ್ಷದ ತಾ.ಪಂ. ಸದಸ್ಯರು ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT