ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿದೆ ಸವಾಲಿನ ಹಾದಿ: ಅರುಣ್‌ ಕುಮಾರ್‌

Last Updated 9 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಲಾಹ್ಲಿ, ರೋಹ್ಟಕ್‌: ಸತತ ಎರಡು ಪಂದ್ಯಗಳಲ್ಲಿ ಗೆಲುವು ಪಡೆದಿರುವ ಕರ್ನಾಟಕ ತಂಡದ ಮುಂದೆ ಈಗ ನಿಜವಾದ ಸವಾಲಿದೆ.
‘ನಮ್ಮ ತಂಡ ಬ್ಯಾಟಿಂಗ್‌ ವಿಭಾಗದಲ್ಲಿ ಎಲ್ಲಾ ತಂಡಗಳಿಗಿಂತಲೂ ಬಲಿಷ್ಠವಾಗಿದೆ’ ಎಂದು ಕೋಚ್‌ ಅರುಣ್‌ ಕುಮಾರ್‌ ಹೇಳಿದ್ದಾರೆ. ಮುಂದೆ ನಡೆಯುವ ಪಂಜಾಬ್‌, ಮುಂಬೈ ಮತ್ತು ದೆಹಲಿ ಎದುರಿನ ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಅಗ್ನಿಪರೀಕ್ಷೆ ಎದುರಾಗಲಿದೆ.

ದೆಹಲಿ ಮತ್ತು ಪಂಜಾಬ್‌ ತಂಡದಲ್ಲಿ ಅನುಭವಿ ಆಟಗಾರರಿದ್ದಾರೆ. ಇನ್ನು 40 ಬಾರಿ ರಣಜಿ ಟ್ರೋಫಿ ಎತ್ತಿ ಹಿಡಿದಿರುವ ಹಾಲಿ ಚಾಂಪಿಯನ್‌ ಮುಂಬೈ ಭಾರಿ ಸವಾಲು ಎನ್ನುವುದರಲ್ಲಿ ಅನುಮಾನವೇ ಬೇಡ. ಹರಿಯಾಣ ಮತ್ತು ಒಡಿಶಾದಂಥ ಪ್ರಮುಖವಲ್ಲದ ತಂಡದ ಎದುರು ಸಾಕಷ್ಟು ಕಷ್ಟಪಟ್ಟು ಗೆಲುವು ಪಡೆದಿರುವ ಕರ್ನಾಟಕ ಪ್ರಬಲ ತಂಡಗಳ ಎದುರು ಹೇಗೆ ಹೋರಾಟ ನಡೆಸಲಿದೆ ಎನ್ನುವ ಆತಂಕವಿದೆ. ಇದೇ ಮಾತನ್ನು ಆಲ್‌ರೌಂಡರ್‌ ಸ್ಟುವರ್ಟ್‌ ಬಿನ್ನಿ ಕೂಡಾ ಹೇಳಿದರು.

ಸೋಮವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು ‘ಮುಂದೆ ಪ್ರಬಲ ತಂಡಗಳ ಸವಾಲಿದೆ. ಕ್ವಾರ್ಟರ್‌ ಫೈನಲ್‌ ಪ್ರವೇಶಿಸಬೇಕಾದರೆ, ಅಲ್ಲಿ ಶಕ್ತಿ ಮೀರಿ ಪ್ರದರ್ಶನ ತೋರುವುದು ಅನಿವಾರ್ಯ’ ಎಂದರು.

‘ಬನ್ಸಿ ಲಾಲ್‌ ಅಂಗಳದ ಪಿಚ್‌ನಲ್ಲಿ ಒಂದೊಂದು ರನ್‌ ಗಳಿಸಲೂ ತುಂಬಾ ಕಷ್ಟಪಡಬೇಕಾಯಿತು. ಆದರೆ. ನಾವು ಎರಡನೇ ಇನಿಂಗ್ಸ್‌ನಲ್ಲಿ 24 ಇತರೆ ರನ್‌ಗಳನ್ನು ಬಿಟ್ಟುಕೊಟ್ಟೆವು. ಇದರಿಂದ ಬೌಲಿಂಗ್‌ನಲ್ಲಿಯೂ ಸುಧಾರಣೆ ಅಗತ್ಯವಿದೆ. ಮುಂದಿನ ಪಂದ್ಯಗಳಲ್ಲಿ ಈ ತಪ್ಪು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ’ ಎಂದೂ ಅವರು ಹೇಳಿದರು.

ಹೋರಾಟ ತೋರಿದೆವು: ‘ಕಠಿಣ ಹೋರಾಟ ತೋರಿದೆವು. ಅಲ್ಪ ಮೊತ್ತದ ಗುರಿಯಿದ್ದರೂ ಸಾಕಷ್ಟು ಸವಾಲು ಎಸೆದವು. ಇನ್ನು 30ರಿಂದ 40 ರನ್‌ ಹೆಚ್ಚು ಗಳಿಸಿದ್ದರೆ ಕರ್ನಾಟಕ ತಂಡವನ್ನು ಸೋಲಿಸಬಹುದಿತ್ತು’ ಎಂದು ಹರಿಯಾ ಣದ ಹರ್ಷಲ್‌ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT