ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ದಾಳಿ: ಪಾಕ್ ಕೈವಾಡ ಸಾಬೀತು

Last Updated 27 ಜೂನ್ 2012, 19:30 IST
ಅಕ್ಷರ ಗಾತ್ರ

ತಿರುವನಂತಪುರ (ಪಿಟಿಐ): ಮುಂಬೈ ಮೇಲಿನ 26/11ರ ಅಮಾನುಷ ದಾಳಿಯಲ್ಲಿ ಪಾಕಿಸ್ತಾನದ ಸರ್ಕಾರಿ ಸಂಸ್ಥೆಗಳ ಕೈವಾಡ ಇತ್ತು ಎಂಬುದು ಜಬೀಯುದ್ದೀನ್ ಅಲಿಯಾಸ್ ಅಬು ಜುಂದಾಲ್ ಬಂಧನ ಹಾಗೂ ವಿಚಾರಣೆಯಿಂದ ಸಂಶಯಕ್ಕೆ ಆಸ್ಪದವಿಲ್ಲದಂತೆ ಸಾಬೀತಾಗಿದೆ ಎಂದು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.

`ಆದರೆ ಈ ದಾಳಿಯ ಹಿಂದೆ ಪಾಕಿಸ್ತಾನದ ಇಂತಹುದೇ ಸಂಸ್ಥೆಯ ಕೈವಾಡ ಇತ್ತು ಎಂದು ನಾನು ಈ ಸನ್ನಿವೇಶದಲ್ಲಿ ಬೆಟ್ಟು ಮಾಡುವುದಿಲ್ಲ. ಆದರೆ ಆ ರಾಷ್ಟ್ರದ ಸರ್ಕಾರಿ ಸಂಸ್ಥೆಯ ಕೈವಾಡವಿದ್ದುದರಲ್ಲಿ ಅನುಮಾನವಿಲ್ಲ. ಆ ದಾಳಿಯಲ್ಲಿ ಪಾಕ್ ಆಡಳಿತ ಯಂತ್ರ ಭಾಗಿಯಾಗಿದ್ದಕ್ಕೂ ಸ್ಪಷ್ಟ ಸಾಕ್ಷ್ಯಗಳಿವೆ~ ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

`ದಾಳಿಯನ್ನು ನಿರ್ದೇಶಿಸಲು ಸ್ಥಾಪಿಸಿದ್ದ ನಿಯಂತ್ರಣ ಕೊಠಡಿಯಲ್ಲಿ ತಾನು ಇದ್ದುದನ್ನು ಜುಂದಾಲ್ ದೃಢಪಡಿಸಿದ್ದಾನೆ. ಹೀಗಾಗಿ  ದಾಳಿಯ ಹಿಂದೆ ಯೋಜಿತ ಸಂಚು ಕೆಲಸ ಮಾಡಿದೆ ಎಂಬ ಭಾರತದ ಅನುಮಾನವನ್ನು ಇದು ನಿವಾರಿಸಿದೆ.

ಈ ದಾಳಿ ಎಸಗಿದ್ದು ತಮ್ಮ ರಾಷ್ಟ್ರಕ್ಕೆ ಸಂಬಂಧಪಡದ ವಿಧ್ವಂಸಕ ಶಕ್ತಿಗಳು ಎಂಬ ಪಾಕಿಸ್ತಾನದ ವಾದದಲ್ಲಿ ಹುರುಳಿಲ್ಲ~ ಎಂದು ಚಿದಂಬರಂ ಹೇಳಿದರು.

26/11ರ ಸಂಚುಕೋರರನ್ನು ಭಾರತ ಬೆನ್ನಟ್ಟಿರುವ ವೈಖರಿಯ ಬಗ್ಗೆ ವಿವಿಧ ರಾಷ್ಟ್ರಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಆದರೆ ಪಾಕಿಸ್ತಾನವು ಭಾರತದ ಹೇಳಿಕೆಗಳನ್ನು ಸುಖಾಸುಮ್ಮನೆ ಸಾರಾಸಗಟು ಅಲ್ಲಗಳೆಯುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT