ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿಯಾಗಿಯೂ ದೇಶ ಸೇವೆ ಸಲ್ಲಿಸಬಹುದು

ಮೋದಿಗೆ ಜೆಡಿಯು ತಿರುಗೇಟು
Last Updated 5 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಪಟ್ನಾ (ಪಿಟಿಐ): `ಪ್ರತಿಯೊಬ್ಬರೂ ದೇಶದ ಋಣ ತೀರಿಸಬೇಕಿದೆ' ಎಂಬ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಟೀಕಿಸಿರುವ ಜೆಡಿಯು, ರಾಜಕಾರಣಿಯೊಬ್ಬರು ಈ ರೀತಿ ಹೇಳಿಕೆ ನೀಡಿದಾಗ ಅದು ದೆಹಲಿ ಗದ್ದುಗೆ ಕುರಿತು ಅವರಿಗಿರುವ ಆಕಾಂಕ್ಷೆಯನ್ನು ಪ್ರತಿಬಿಂಬಿಸುತ್ತದೆ ಎಂದಿದೆ.

`2014ರ ಚುನಾವಣೆಯ ನಂತರ ದೆಹಲಿ ಯಾರನ್ನು ಆಯ್ಕೆ ಮಾಡಿಕೊಳ್ಳುತ್ತದೆ ಎಂಬುದನ್ನು ನೋಡೋಣ. ಗುಜರಾತ್‌ಗೆ ಸೇವೆ ಸಲ್ಲಿಸುವ ಮೂಲಕವೂ ದೇಶಕ್ಕೆ ಸೇವೆ ಸಲ್ಲಿಸಬಹುದು. ನಿತೀಶ್ ಕುಮಾರ್ ಬಿಹಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ದೇಶಕ್ಕೂ ಸೇವೆ ಸಲ್ಲಿಸುತ್ತಿದ್ದಾರೆ' ಎಂದು ಜೆಡಿಯು ನಾಯಕ ಶಿವಾನಂದ ತಿವಾರಿ ಹೇಳಿದ್ದಾರೆ.

`ಅಧಿಕಾರ ಹೊಂದಿರುವ ಹಲವು ಜನ ದೇಶದ ಪ್ರಧಾನಿಯಾಗಲು ಇಚ್ಛಿಸುತ್ತಿದ್ದಾರೆ. ಎಲ್ಲರೂ ಆಶಾವಾದಿಗಳಾಗಿದ್ದಾರೆ. ಮುಲಾಯಂ ಸಿಂಗ್ ಯಾದವ್ ಸಹ ಪ್ರಧಾನಿ ಹುದ್ದೆಯ ಕುರಿತು ತಮಗಿರುವ ಆಕಾಂಕ್ಷೆ ಹೇಳಿಕೊಂಡಿದ್ದಾರೆ' ಎಂದೂ ತಿವಾರಿ ಅಭಿಪ್ರಾಯ ಪಟ್ಟಿದ್ದಾರೆ.

ಎನ್‌ಡಿಎ ಪ್ರಧಾನಿ ಅಭ್ಯರ್ಥಿ ಜಾತ್ಯತೀತ ಹಿನ್ನೆಲೆಯವರಾಗಿರಬೇಕು ಹಾಗೂ ಸಮಾಜದ ಎಲ್ಲ ವರ್ಗಕ್ಕೂ ಸೇರಿದವರಾಗಿರಬೇಕು ಎಂಬ ಜೆಡಿಯು ನಿಲುವನ್ನು ಪುನರುಚ್ಚರಿಸಿದ ತಿವಾರಿ, ಎನ್‌ಡಿಎ ಪ್ರಧಾನಿ ಅಭ್ಯರ್ಥಿ ಆಯ್ಕೆಗೆ ಪ್ರಕ್ರಿಯೆ ಆರಂಭಗೊಂಡಿಲ್ಲ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT