ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯ ಪ್ರಗತಿ ಕುಸಿತ

Last Updated 1 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಕಲ್ಲಿದ್ದಲು, ನೈಸರ್ಗಿಕ ಅನಿಲ, ವಿದ್ಯುತ್ ಸೇರಿದಂತೆ ಎಂಟು ಮೂಲಸೌಕರ್ಯ ವಲಯಗಳ ಸಾಧನೆ ನಕಾರಾತ್ಮಕ ಮಟ್ಟಕ್ಕಿಳಿದಿದೆ. ಫೆಬ್ರುವರಿಯಲ್ಲಿ ಶೇ 2.5ರಷ್ಟು ಕುಸಿತ ಕಂಡಿದೆ.

ಒಟ್ಟಾರೆ ಕೈಗಾರಿಕೆ ಉತ್ಪಾದನೆ ಸೂಚ್ಯಂಕಕ್ಕೆ (ಐಐಪಿ) ಮೂಲ        ಸೌಕರ್ಯ ವಲಯಗಳು ಶೇ 37.9ರಷ್ಟು ಕೊಡುಗೆ ನೀಡುತ್ತವೆ. 2012ನೇ ಸಾಲಿನ ಫೆಬ್ರುವರಿಯಲ್ಲಿ ಎಂಟು ಮೂಲಸೌಕರ್ಯ ರಂಗಗಳು ಶೇ 7.7ರಷ್ಟು ಪ್ರಗತಿ ದಾಖಲಿಸಿದ್ದವು.

2012-13ನೇ ಸಾಲಿನಲ್ಲಿ ಮೊದಲ ಬಾರಿಗೆ ಮೂಲಸೌಕರ್ಯ ವಲಯ ನಕಾರಾತ್ಮಕ ಮಟ್ಟಕ್ಕೆ ಕುಸಿದಿದೆ.  ಒಟ್ಟಾರೆ ವಲಯವಾರು ಪ್ರಗತಿ ಶೇ 20ರಷ್ಟು ಕುಸಿದಿದೆ. ನೈಸರ್ಗಿಕ ಅನಿಲ ಮತ್ತು ಕಲ್ಲಿದ್ದಲು ಕ್ರಮವಾಗಿ ಶೇ -8 (ಮೈನಸ್ ಲೆಕ್ಕ)ಕ್ಕೆ ಕುಸಿದಿದೆ. ವಿದ್ಯುತ್ ಮತ್ತು ಕಚ್ಚಾತೈಲ ಶೇ -4.1 ಮತ್ತು ಶೇ -4ರಷ್ಟು ಇಳಿಕೆ ಕಂಡಿವೆ. ರಸಗೊಬ್ಬರ ತಯಾರಿಕೆ ಶೇ 4ರಷ್ಟು ಇಳಿದಿದೆ.  ಸಿಮೆಂಟ್ ಮತ್ತು ತೈಲ ಶುದ್ಧೀಕರಣ ವಲಯಗಳು ಕ್ರಮವಾಗಿ ಶೇ 3.9 ಮತ್ತು ಶೇ 4.3ರಷ್ಟು ಏರಿಕೆ ಕಂಡಿವೆ. 

2012ನೇ ಸಾಲಿನ ಫೆಬ್ರುವರಿಯಲ್ಲಿ ಶೇ 8.7ರಷ್ಟು ಪ್ರಗತಿ ದಾಖಲಿಸಿದ್ದ ಉಕ್ಕು ತಯಾರಿಕೆ ಪ್ರಸಕ್ತ ಅವಧಿಯಲ್ಲಿ ಶೇ 0.5ಕ್ಕೆ ಇಳಿದಿದೆ. ಮೂಲಸೌಕರ್ಯ ಪ್ರಗತಿ ಕುಂಠಿತವಾಗಿರುವುದು `ಐಐಪಿ' ಅಂಕಿ-ಅಂಶಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT