ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯಕ್ಕೆ ಆಗ್ರಹ: ರಸ್ತೆ ತಡೆ

ಕುಡಿಯುವ ನೀರಿಗೆ ಪರದಾಟ n ಅಧಿಕಾರಿಗಳಿಗೆ ಹಿಡಿಶಾಪ
Last Updated 17 ಡಿಸೆಂಬರ್ 2013, 8:56 IST
ಅಕ್ಷರ ಗಾತ್ರ

ರಾಮನಗರ: ಅಸಮರ್ಪಕ ಕುಡಿಯುವ ನೀರು ಸರಬರಾಜು, ನಿರ್ವಹಣೆ ಇಲ್ಲದ ಚರಂಡಿ, ರಸ್ತೆ ದುರಸ್ತಿ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಒತ್ತಾ ಯಿಸಿ ನಗರದ ಟ್ರೂಪ್‌ಲೈನ್‌, ಅರ್ಕೇ ಶ್ವರ ಕಾಲೊನಿ, ರೆಹಮಾನಿಯಾ ನಗರ, ಟಿಪ್ಪುನಗರ ಮತ್ತು ಯಾರಬ್‌ ನಗರದ ನಿವಾಸಿಗಳು ಸೋಮವಾರ ಹುಣಸನ ಹಳ್ಳಿ– ರಾಮನಗರ ಮಾರ್ಗದಲ್ಲಿ ರಸ್ತೆ ತಡೆ ನಡೆಸಿದರು.

ಈ ಭಾಗದಲ್ಲಿ ನಾಗರಿಕರು ಎದು ರಿಸುತ್ತಿರುವ ಸಮಸ್ಯೆ ಮತ್ತು ಕುಂದು ಕೊರತೆ ಪರಿಹರಿಸುವಂತೆ ಒತ್ತಾಯಿಸಿ ಹಲವು ಬಾರಿ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜವಾ ಗಲಿಲ್ಲ. ಹಾಗಾಗಿ ಪ್ರತಿಭಟನೆ, ರಸ್ತೆ ತಡೆ ಅನಿವಾರ್ಯವಾಗಿದೆ ಎಂದು ಪ್ರತಿಭಟ ನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಕೆಲ ಪ್ರತಿಭಟ ನಾಕಾರರು ಟೈರ್‌ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ರಸ್ತೆಯಲ್ಲಿ ನೆಲಹಾಸು ಹಾಕಿಕೊಂಡು ಕುಳಿತ ಪ್ರತಿಭ ಟಿಸಿದರು. ನಗರಸಭೆ ಸದಸ್ಯರು, ಅಧಿಕಾ ರಿಗಳು ಮತ್ತು ಆಯುಕ್ತರಿಗೆ ಹಿಡಿಶಾಪ ಹಾಕಿದರು.

ಏಳರಿಂದ ಎಂಟು ದಿನಕ್ಕೊಮ್ಮೆ ಕುಡಿ ಯುವ ನೀರು ಸರಬರಾಜು ಮಾಡಲಾ ಗುತ್ತಿದೆ. ಅದೂ ಕೇವಲ 20ರಿಂದ 30 ನಿಮಿಷ ಮಾತ್ರ ಪೂರೈಸಲಾಗುತ್ತಿದೆ. ಇಷ್ಟು ಕಡಿಮೆ ಅವಧಿಯಲ್ಲಿ ನಾವು ವಾರಕ್ಕಾಗುವಷ್ಟು ನೀರನ್ನು ಹೇಗೆ ಮತ್ತು ಎಲ್ಲಿ ಶೇಖರಿಸಿಟ್ಟುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಅಲವ ತ್ತುಕೊಂಡರು.

ಈ ಬಡಾವಣೆಗಳಲ್ಲಿ ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲ. ಚರಂಡಿ ನೀರು ರಸ್ತೆಗಳಲ್ಲಿ ಹರಿದಾಡುತ್ತದೆ. ಇದ ರಿಂದ ರೋಗ ರುಜಿನಗಳು ಬರುತ್ತಿವೆ. ನಗರಸಭೆ ಮತ್ತು ಒಳಚರಂಡಿ ಮಂಡಳಿ ಚರಂಡಿ ನಿರ್ವಹಣೆಯಲ್ಲಿ ವಿಫಲ ವಾಗಿವೆ ಎಂದು ಅವರು ಕಿಡಿಕಾರಿದರು.

ನಗರಸಭೆ ರಸ್ತೆಗಳ ಮೇಲಿನ ಕಸ ವನ್ನು ಸರಿಯಾಗಿ ವಿಲೇವಾರಿ ಮಾಡು ತ್ತಿಲ್ಲ. ಅಲ್ಲದೆ ರಸ್ತೆ ನಿರ್ಮಾಣ ಕಾಮ ಗಾರಿ ವಿಳಂಬವಾಗುತ್ತಿದೆ. ರಸ್ತೆಯ ಮೇಲೆ ಕಲ್ಲು ಮತ್ತು ಜಲ್ಲಿಗಳನ್ನು ಹಾಕ ಲಾಗಿದ್ದು, ಡಾಂಬರು ಹಾಕದೆ ನಾಗರಿ ಕರು ಪರದಾಡುವಂತೆ ಮಾಡಲಾಗಿದೆ. ಇಲ್ಲಿ ಸಾಗುವ ವಾಹನಗಳಿಂದ ನಿತ್ಯ ಧೂಳು ರಾಚುತ್ತಿದ್ದು, ಜಲ್ಲಿ ಕಲ್ಲುಗಳು ಸಿಡಿದು ಪಾದಚಾರಿಗಳಿಗೆ ಹಲವು ಬಾರಿ ಗಾಯಗಳಾಗಿವೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ನಗರಸಭೆ ಎಇಇ ಷಣ್ಮುಖಪ್ಪ ಆಗಮಿಸಿದ ಕೂಡಲೇ, ವರನ್ನು ಮುತ್ತಿದ ಪ್ರತಿಭಟನಾಕಾರರು ಕುಂದು ಕೊರತೆ ಮತ್ತು ಮೂಲ ಸೌಕರ್ಯ ಸಮಸ್ಯೆ ವಿವರಿಸಿದರು. ನಗರ ಸಭೆ ನಿರ್ಲಕ್ಷ್ಯಕ್ಕೆ ಬೇಸತ್ತು ಪ್ರತಿಭಟನೆ ಮಾಡುತ್ತಿರುವುದಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಎಲ್ಲ ಸಮಸ್ಯೆಗಳನ್ನು ಹಂತ ಹಂತ ವಾಗಿ ಪರಿಹರಿಸುವ ಭರವಸೆಯನ್ನು ಎಇಇ ನೀಡಿದ ನಂತರ ಪ್ರತಿಭಟ ನಾಕ
ರರು ಪ್ರತಿಭಟನೆಯನ್ನು ಹಿಂಪಡೆದರು.

ಮಹಮದ್‌ ರಿಯಾಜ್‌, ಜುಬೈರ್‌, ಅಮ್ಜದ್‌, ಷರೀಫ್‌, ಮುನ್ನಾ, ಸೈಯದ್‌ ಅಕ್ರಮ್‌ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT