ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಕ್ರೊಸಾಫ್ಟ್ ತೆಕ್ಕೆಗೆ ನೋಕಿಯಾ

Last Updated 3 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಅಮೆರಿಕ ಮೂಲದ ಬಹುರಾಷ್ಟ್ರೀಯ ಕಂಪ್ಯೂಟರ್ ಸಾಫ್ಟ್‌ವೇರ್ ಕಂಪೆನಿ ಮೈಕ್ರೊಸಾಫ್ಟ್, ಫಿನ್ಲೆಂಡ್ ಮೂಲದ ದೂರಸಂಪರ್ಕ ಉಪಕರಣಗಳ ತಯಾರಿಕಾ ಕಂಪೆನಿ ನೋಕಿಯಾದ  ಮೊಬೈಲ್ ಹ್ಯಾಂಡ್‌ಸೆಟ್ ವಹಿವಾಟು ವಿಭಾಗವನ್ನು ಸುಮಾರು ರೂ47,200 ಕೋಟಿಗೆ (717 ಕೋಟಿ ಡಾಲರ್) ಸ್ವಾಧೀನಪಡಿಸಿಕೊಂಡಿದೆ.

ಮಂಗಳವಾರ ಇದಕ್ಕೆ ಸಂಬಂಧಿಸಿದಂತೆ ಅಧಿಕೃತ ಪ್ರಕಟಣೆ ಹೊರಬಿದ್ದಿದೆ. `ಸ್ಮಾರ್ಟ್‌ಫೋನ್ ಮಾರುಕಟ್ಟೆ ವಿಸ್ತರಣೆ ಉದ್ದೇಶದಿಂದ ನೋಕಿಯಾದ ಹ್ಯಾಂಡ್‌ಸೆಟ್ ವಿಭಾಗ ಸ್ವಾಧೀನಪಡಿಸಿಕೊಳ್ಳಲಾಗಿದೆ' ಎಂದು ಮೈಕ್ರೊಸಾಫ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.  ಈ ಒಪ್ಪಂದಕ್ಕೆ ನೋಕಿಯಾದ ಷೇರುದಾರರು ಮತ್ತು ನಿಯಂತ್ರಣ ಸಂಸ್ಥೆಗಳು ಒಪ್ಪಿಗೆ ಸೂಚಿಸಬೇಕಿದ್ದು, 2014ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

`2011ರ ಜುಲೈನಲ್ಲಿ ನೋಕಿಯಾ ಮೈಕ್ರೊಸಾಫ್ಟ್ ಜತೆಗೆ ಪಾಲುದಾರಿಕೆ ಪ್ರಕಟಿಸಿತ್ತು. ನೋಕಿಯಾದ `ಲುಮಿಯಾ' ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ವಿಂಡೋಸ್ ಕಾರ್ಯನಿರ್ವಹಣಾ ತಂತ್ರಾಂಶ ಬಳಸಲು ಈ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದಕ್ಕೆ ಷೇರುದಾರರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಈ ಪಾಲುದಾರಿಕೆಯೇ ಈಗಿನ ಸ್ವಾಧೀನಕ್ಕೆ ಪ್ರಮುಖ ಕಾರಣ' ಎಂದು ಮೈಕ್ರೊಸಾಫ್ಟ್‌ನ `ಸಿಇಒ' ಸ್ಟೀವ್ ಬಲ್ಮರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

32 ಸಾವಿರ ಉದ್ಯೋಗಿಗಳು
ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ನಂತರ ನೋಕಿಯಾ ಹ್ಯಾಂಡ್‌ಸೆಟ್ ವಿಭಾಗದಲ್ಲಿರುವ 32 ಸಾವಿರ ಉದ್ಯೋಗಿಗಳು ಮೈಕ್ರೊಸಾಫ್ಟ್ ಸೇರಲಿದ್ದಾರೆ. ನೋಕಿಯಾದ ಮಧ್ಯಂತರ `ಸಿಇಒ' ಆಗಿ ಟಿಮೊ ನೇಮಕಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT