ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಮಿನರಲ್ಸ್ ದಾಖಲೆ

Last Updated 15 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:ಮೈಸೂರು ಮಿನರಲ್ಸ್ ನಿಯಮಿತ (ಎಂಎಂಎಲ್) ಸಂಸ್ಥೆಯು 2010-11 ನೇ ಸಾಲಿನಲ್ಲಿ ರೂ. 567ಕೋಟಿ ಮೊತ್ತದ ದಾಖಲೆ ವಹಿವಾಟು ನಡೆಸಿದೆ. ಈ ಅವಧಿಯಲ್ಲಿ ಸಂಸ್ಥೆಯು ರೂ.422 ಕೋಟಿ ತೆರಿಗೆ ಪೂರ್ವ ಮತ್ತು  ರೂ. 277 ಕೋಟಿ ತೆರಿಗೆ ನಂತರದ ಲಾಭ ಗಳಿಸಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

`ಎಂಎಂಎಲ್~ ಗಣಿಗಾರಿಕೆಯಲ್ಲಿ ತೊಡಗಿರುವ ರಾಜ್ಯ ಸರ್ಕಾರಿ ಸ್ವಾಮ್ಯದ ಉದ್ಯಮವಾಗಿದ್ದು, ಗಣಿಗಾರಿಕಾ ಕ್ಷೇತ್ರದಲ್ಲಿನ ಉತ್ತಮ ಸಾಧನೆಗಾಗಿ 2010-11 ನೇ ಸಾಲಿನ ಮುಖ್ಯಮಂತ್ರಿಗಳ `ರತ್ನ ಪ್ರಶಸ್ತಿ~  ಪಡೆದುಕೊಂಡಿದೆ. 

  ಸಂಸ್ಥೆಯು 2004-05ರಿಂದ 2011ರ ವರೆಗೆ ಸತತವಾಗಿ ಲಾಭ ಗಳಿಸುತ್ತಿದ್ದು, 2010-11 ನೇ ಸಾಲಿನಲ್ಲಿ ದಾಖಲೆ ವಹಿವಾಟು ನಡೆಸಿದೆ. ಇತ್ತೀಚೆಗೆ ನಡೆದ ಸಂಸ್ಥೆಯ 288ನೇ ಮಂಡಳಿ ಸಭೆಯ ನಿರ್ಣಯದಂತೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಎರಡನೇ ಕಂತಾಗಿ  ್ಙ5 ಕೋಟಿ ಮೊತ್ತದ ಚೆಕ್ ಅನ್ನು  ಹಸ್ತಾಂತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT