ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಹೆಂಜೊದಾರೊ ಅಭಿವೃದ್ಧಿಗೆ ನೆರವು

Last Updated 21 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ಭಾರತದ ಪ್ರಾಚೀನ ನಾಗರಿಕತೆಯ ಪ್ರದೇಶ ಎಂದೇ ಪ್ರಸಿದ್ಧವಾದ ಮೊಹೆಂಜೊದಾರೊದಲ್ಲಿ ಸಾಂಸ್ಕೃತಿಕ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಪಾಕಿಸ್ತಾನವು 10 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ.

ಈ ಪ್ರದೇಶ ಪ್ರಸ್ತುತ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿದೆ. ಕ್ರಿ.ಪೂ. 2600 ವರ್ಷಗಳಷ್ಟು ಹಿಂದೆ ನಿರ್ಮಿಸಲಾದ ಮಡಿದವರ ದಿಣ್ಣೆಗೆ ಮೊಹೆಂಜೊದಾರೊ ಎನ್ನಲಾಗುತ್ತದೆ. ಈ ಪ್ರದೇಶದಲ್ಲಿ ಪುನರ್ವಸತಿ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಪಾಕ್ ಸರ್ಕಾರವು `ಮಾಸ್ಟರ್ ಪ್ಲಾನ್~ ಸಿದ್ಧಪಡಿಸುತ್ತಿದೆ.

ಭೌಗೋಳಿಕವಾಗಿ, ಸುಮಾರು 12,60,000 ಚದರ ಕಿ.ಮೀ.ಗಳಷ್ಟು ವ್ಯಾಪಿಸಿರುವ ಈ ನಾಗರಿಕತೆಯು ಜಗತ್ತಿನ ಬೃಹತ್ ಪ್ರಾಚೀನ ನಾಗರಿಕತೆಯಾಗಿದೆ. ಈ ಪ್ರದೇಶವನ್ನು ಕಳೆದ ವರ್ಷದ ಏಪ್ರಿಲ್‌ನಲ್ಲಿ ಪಾಕ್ ಒಕ್ಕೂಟ ಸರ್ಕಾರದಿಂದ ಸಿಂಧ್ ಪ್ರಾಂತ್ಯಕ್ಕೆ ವರ್ಗಾಯಿಸಲಾಯಿತು. ಆನಂತರ ಸಿಂಧ್ ಪ್ರಾಂತೀಯ ಸರ್ಕಾರವು ಮೊಹೆಂಜೊದಾರೊ ಜೀರ್ಣೋದ್ಧಾರಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಲು ತಾಂತ್ರಿಕ ಸಲಹಾ ಸಮಿತಿ ಮತ್ತು ಮಂಡಳಿಯನ್ನು ರಚಿಸಿತು.

 ಇತ್ತೀಚೆಗೆ ಮೊಹೆಂಜೊದಾರೊ ಅಭಿವೃದ್ಧಿಗಾಗಿರುವ ರಾಷ್ಟ್ರೀಯ ನಿಧಿಯ ಕಾರ್ಯಕಾರಿ ಮಂಡಳಿಯು ಮೊಹೆಂಜೊದಾರೊದಲ್ಲಿನ ವಿಶ್ರಾಂತಿ ಧಾಮವನ್ನು ದುರಸ್ತಿಗೊಳಿಸಲು ಮತ್ತು ಪ್ರದೇಶದ ಸ್ಥಳವಿವರಣೆ ಸಮೀಕ್ಷೆ ನಡೆಸಲು ನಿರ್ಧರಿಸಿದೆ ಎಂದು ಸಿಂಧ್ ಸಾಂಸ್ಕೃತಿಕ ಕಾರ್ಯದರ್ಶಿ ಅಜೀಜ್ ಉಖೈಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT