ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಯುಕೆ ಎಜು ಫೇರ್' ಶಿಕ್ಷಣ ಮೇಳದಲ್ಲಿ 70 ವಿ.ವಿಗಳು

Last Updated 2 ಫೆಬ್ರುವರಿ 2013, 18:59 IST
ಅಕ್ಷರ ಗಾತ್ರ

ಬೆಂಗಳೂರು: ಬ್ರಿಟಿಷ್ ಕೌನ್ಸಿಲ್ ನಗರದಲ್ಲಿ ಶನಿವಾರದಿಂದ ಆಯೋಜಿಸಿದ್ದ `ಯುಕೆ ಎಜು ಫೇರ್' ಶಿಕ್ಷಣ ಮೇಳದಲ್ಲಿ ಇಂಗ್ಲೆಂಡ್‌ನ 70ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಮೇಳದಲ್ಲಿ ಪಾಲ್ಗೊಂಡಿವೆ.

ಇಂಗ್ಲೆಂಡ್‌ನಲ್ಲಿ ಹೊರದೇಶಗಳ ಸುಮಾರು ನಾಲ್ಕು ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಇವರಲ್ಲಿ 30 ಸಾವಿರ ವಿದ್ಯಾರ್ಥಿಗಳು ಭಾರತೀಯರೇ ಇದ್ದಾರೆ. ಇತ್ತೀಚಿನ ವರ್ಷಗಳವರೆಗೂ ಭಾರತೀಯ ವಿದ್ಯಾರ್ಥಿಗಳು ಎಂಬಿಎ ಪದವಿಗಾಗಿ ಇಂಗ್ಲೆಂಡ್‌ಗೆ ವ್ಯಾಸಂಗಕ್ಕೆ ಹೋಗುವುದು ಹೆಚ್ಚಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಎಂಬಿಎ ಪದವಿಯಲ್ಲದೇ ಉಳಿದ ಕೋರ್ಸ್‌ಗಳ ಕಡೆಗೂ ಭಾರತೀಯ ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿದ್ದಾರೆ.

ನಾರ್ಥಂಪ್ಟನ್ ವಿಶ್ವವಿದ್ಯಾಲಯದ ಪ್ರತಿನಿಧಿ ಅನ್ನಾ ಫಿಷರ್ ಮಾತನಾಡಿ, `ಇತ್ತೀಚಿನ ವರ್ಷಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಕೇವಲ ಎಂಬಿಎ ಪದವಿಯ ಕಡೆಗೆ ಗಮನ ನೀಡದೇ ವಿವಿಧ ಕೋರ್ಸ್‌ಗಳನ್ನು ಆಯ್ದುಕೊಳ್ಳುತ್ತಿದ್ದಾರೆ. ಕಲಾ ವಿಭಾಗವೂ ಸೇರಿದಂತೆ ವಿಷಯ ವೈವಿಧ್ಯತೆಯ ಕೋರ್ಸ್‌ಗಳ ಕಡೆಗೆ ಭಾರತೀಯ ವಿದ್ಯಾರ್ಥಿಗಳು ಆಕರ್ಷಿತರಾಗುತ್ತಿದ್ದಾರೆ' ಎಂದರು.

ಲಂಡನ್‌ನ ಸ್ಕೂಲ್ ಆಫ್ ಓರಿಯಂಟಲ್ ಅಂಡ್ ಆಫ್ರಿಕನ್ ಸ್ಟಡೀಸ್‌ನ ಅಧಿಕಾರಿ ಲಾರಾ ಹಯಸ್ ಮಾತನಾಡಿ, `ಇಂಗ್ಲೆಂಡ್‌ನ ಶಿಕ್ಷಣ ಕ್ಷೇತ್ರಕ್ಕೆ ಭಾರತ ಉತ್ತಮ ಮಾರುಕಟ್ಟೆಯಾಗಿದೆ. ಇತ್ತೀಚೆಗೆ ಭಾರತೀಯ ವಿದ್ಯಾರ್ಥಿಗಳು ಕಲಾ ವಿಭಾಗಳಿಗೂ ಹೆಚ್ಚು ಪ್ರವೇಶ ಪಡೆಯುತ್ತಿದ್ದಾರೆ' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT