ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಎಚ್‌ಎಎಲ್ ಪಾತ್ರ

ರಕ್ಷಣಾ ಇಲಾಖೆಗೆ ಫ್ರಾನ್ಸ್ ಕಂಪೆನಿ ಪ್ರಶ್ನೆ
Last Updated 9 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ


ನವದೆಹಲಿ (ಪಿಟಿಐ):ಭಾರತದ ವಾಯು ಪಡೆಗೆ 126 ಯುದ್ಧ ವಿಮಾನಗಳನ್ನು ಪೂರಕೆ ಮಾಡಲು ಬಹುಕೋಟಿ ಡಾಲರ್‌ಗಳ ಒಪ್ಪಂದ ಮಾಡಿಕೊಂಡಿರುವ ಫ್ರಾನ್ಸ್‌ನ `ಡಸಲ್ಟ್' ಕಂಪೆನಿಯು, ಈ ಯೋಜನೆಯಲ್ಲಿ `ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್'ನ (ಎಚ್‌ಎಲ್) ಪಾತ್ರದ ಕುರಿತು ವಿವರಿಸುವಂತೆ ರಕ್ಷಣಾ ಸಚಿವಾಲಯವನ್ನು ಕೋರಿದೆ.

ಈ ಒಪ್ಪಂದ ಪೂರ್ಣಗೊಂಡರೆ `ಡಸಲ್ಟ್' ಕಂಪೆನಿಯು ಮೊದಲ ಹಂತದಲ್ಲಿ 18 ಯುದ್ಧ ವಿಮಾನಗಳನ್ನು ನೇರವಾಗಿ ವಾಯು ಪಡೆಗೆ ಪೂರೈಕೆ ಮಾಡಬೇಕು. ಉಳಿದ 108 ವಿಮಾನಗಳ ಪೂರೈಕೆಗಾಗಿ ಬೆಂಗಳೂರಿನಲ್ಲಿರುವ `ಎಚ್‌ಎಎಲ್'ಗೆ ತಂತ್ರಜ್ಞಾನ ವರ್ಗಾಯಿಸಿ ಉತ್ಪಾದನೆಗೆ ಅನುಮತಿ ನೀಡಬೇಕು. ಈ ಹಿನ್ನೆಲೆಯಲ್ಲಿ ಭಾರತದ ಪ್ರತಿಷ್ಠಿತ ವಿಮಾನ ತಯಾರಿಕಾ ಸಂಸ್ಥೆ `ಎಚ್‌ಎಎಲ್' ಪಾತ್ರದ ಬಗ್ಗೆ ವಿವರಣೆ ನೀಡುವಂತೆ `ಡಸಲ್ಟ್' ಕೋರಿದೆ ಎಂದು ಮೂಲಗಳು ತಿಳಿಸಿವೆ.

ವಾಯು ಪಡೆಯು ಈ ಯುದ್ಧ ವಿಮಾನಗಳ ಖರೀದಿಗಾಗಿ ನೀಡಿರುವ ಟೆಂಡರ್‌ನಲ್ಲಿ, ಈ ವಿಮಾನಗಳ ಪೂರೈಕೆ ಹೊಣೆಯು `ಎಚ್‌ಎಎಲ್'ನದ್ದು ಎಂದು ಹೇಳಿದೆ.    ಆದ್ದರಿಂದ `ಡಸಲ್ಟ್' , `ಪೂರ್ಣ ಹೊಣೆಗಾರಿಕೆಯನ್ನು `ಎಚ್‌ಎಎಲ್'ಗೆ ವಹಿಸಿರುವ ಕಾರಣ ಈ ಯೋಜನೆಯಲ್ಲಿ ಕಾರ್ಯಭಾರದ ಪ್ರಮಾಣದ ಯಾರಿಗೆ ಎಷ್ಟು ಎನ್ನುವುದನ್ನು ವಿವರಿಸಬೇಕು ಎಂದು ರಕ್ಷಣಾ ಸಚಿವಾಲಯವನ್ನು ಕೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT