ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಕಾಂಗ್ರೆಸ್ ಚುನಾವಣೆ: ನಾಮಪತ್ರ

Last Updated 13 ಸೆಪ್ಟೆಂಬರ್ 2011, 10:25 IST
ಅಕ್ಷರ ಗಾತ್ರ

ಚಿಂತಾಮಣಿ: ಶಿಡ್ಲಘಟ್ಟ, ಚಿಂತಾಮಣಿ, ಶ್ರಿನಿವಾಸಪುರ ತಾಲ್ಲೂಕುಗಳ ಯುವ ಕಾಂಗ್ರೆಸ್ ಸಮಿತಿಯ ಆಂತರಿಕ ಚುನಾವಣೆಯ ಪ್ರಕ್ರಿಯೆ ನಗರದಲ್ಲಿ ಆರಂಭವಾಗಿದ್ದು, ಭಾನುವಾರ ಮತ್ತು ಸೋಮವಾರ ಉತ್ಸಾಹಿಗಳು ನಾಮಪತ್ರ ಸಲ್ಲಿಸಿದರು.

ನಾಮಪತ್ರ ಪರಿಶೀಲನೆ ಇದೇ 13ರಂದು ನಡೆಯಲಿದೆ. 16 ಮತ್ತು 17ರಂದು ಚಿಂತಾಮಣಿ ವಿಧಾನಸಭಾ ಕ್ಷೇತ್ರ ಸಮಿತಿಗೆ, 18ರಂದು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಸಮಿತಿಗೆ ಹಾಗೂ 19ರಂದು ಶ್ರಿನಿವಾಸಪುರ ಕ್ಷೇತ್ರ ಸಮಿತಿಗೆ ಚುನಾವಣೆ ನಡೆಯಲಿದೆ. ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷ, 3 ಮುಕ್ತ ಮಹಾ ಪ್ರಧಾನ ಕಾರ್ಯದರ್ಶಿಗಳು ಹಾಗೂ 5 ಮೀಸಲಾತಿ ಮಹಾ ಕಾರ್ಯದರ್ಶಿಗಳ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಸಹಾಯಕ ಚುನಾವಣಾಧಿಕಾರಿ ಸತೀಶ್‌ಕುಮಾರ್ ತಿಳಿಸಿದರು.

ರಾಜಕೀಯದಲ್ಲಿ ಆಸಕ್ತಿ ಇರುವ ಯುವಕರನ್ನು ಗುರುತಿಸಿ, ಹೊಸ ರಾಜಕೀಯ ನಾಯಕರನ್ನು ಬೆಳಕಿಗೆ ತರುವ ದೃಷ್ಟಿಯಿಂದ ಚುನಾವಣೆ ನಡೆಸಲಾಗುತ್ತಿದೆ. ಸ್ವತಂತ್ರ ಸಂಸ್ಥೆಯ ವತಿಯಿಂದ ನಿಷ್ಪಕ್ಷಪಾತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಯಲಿದೆ ಎಂದರು.

ಕಾಂಗ್ರೆಸ್ ತತ್ವ, ಆದರ್ಶಗಳಲ್ಲಿ ನಂಬಿಕೆ ಇರುವ ಯಾರು ಬೇಕಾದರೂ ಸದಸ್ಯತ್ವ ಪಡೆಯ ಬಹುದು. ನೊಂದಾಯಿಸಲ್ಪಟ್ಟ ಸದಸ್ಯರು ಮಾತ್ರ ಯುವ ಕಾಂಗ್ರೆಸ್ ಪದಾಧಿಕಾರಿಗಳನ್ನು ಆಯ್ಕೆ ಮಾಡಲು ಅರ್ಹರಾಗುತ್ತಾರೆ ಎಂದು ವಿವರಿಸಿದರು.

ಹಿಂದಿ ದಿವಸ್
ತಾಲ್ಲೂಕು ಹಿಂದಿ ಶಿಕ್ಷಕರ ಸಂಘವು ಇದೇ 14ರಂದು ನಗರದ ಡಿಲಿಜಿಯನ್ಸ್ ಸಂಯುಕ್ತ ಪ್ರೌಢಶಾಲೆಯಲ್ಲಿ `ಹಿಂದಿ ದಿವಸ್~  ಆಯೋಜಿಸಿದೆ ಎಂದು ಸಂಘದ ಅಧ್ಯಕ್ಷ ರಾಮಚಂದ್ರಸಿಂಗ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT