ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಕಾಂಗ್ರೆಸ್ ಚುನಾವಣೆ: ವೇಳಾಪಟ್ಟಿ ಪ್ರಕಟ

Last Updated 3 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ಯುವ ಕಾಂಗ್ರೆಸ್‌ನ ಸದಸ್ಯತ್ವ ಅಭಿಯಾನ ಪೂರ್ಣಗೊಂಡಿದ್ದು, ಬೂತ್ ಮಟ್ಟದ ಚುನಾವಣೆಗೆ ಇದೇ 11 ಮತ್ತು 12ರಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ. 16ರಿಂದ 21ರವರೆಗೆ ಚುನಾವಣೆಗಳು ನಡೆಯಲಿವೆ.

`ರಾಜ್ಯದ 18,951 ಬೂತ್‌ಗಳಿಗೆ ಚುನಾವಣೆಗಳು ನಡೆಯಲಿವೆ. ಒಟ್ಟು 4,58,102 ಮಂದಿ ಸದಸ್ಯರು ಮತ ಚಲಾಯಿಸಲಿದ್ದಾರೆ~ ಎಂದು ಭಾರತ ಯುವ ಕಾಂಗ್ರೆಸ್‌ನ  ರಾಜ್ಯ ಚುನಾವಣಾಧಿಕಾರಿ ವಿ.ಕೆ. ಅರಿವಳಗನ್ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಚುನಾವಣಾ ವೇಳಾಪಟ್ಟಿ: ಇದೇ 11 ಮತ್ತು 12ರಂದು ನಾಮಪತ್ರಗಳ ಸಲ್ಲಿಕೆ. 13ರಂದು ನಾಮಪತ್ರಗಳ ಪರಿಶೀಲನೆ. 14ರಂದು ಚುನಾವಣಾ ಚಿಹ್ನೆ ನೀಡಿಕೆ. 15ರಂದು ಮತಗಟ್ಟೆಗಳ ಸಿದ್ಧತೆ. 16ರಿಂದ 21ರವರೆಗೆ ಮತದಾನ. 23ರಂದು ಚುನಾವಣೆಯ ಫಲಿತಾಂಶವನ್ನು ಐವೈಸಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT