ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಪ್ರತಿಭೆಗಳಿಗೆ ಟೊಟೊ ಪುರಸ್ಕಾರ

Last Updated 3 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕಲಾ ಜಗತ್ತಿನಲ್ಲಿ ಹೆಸರು ಗಳಿಸಿದವರಿಗೆ ಹೆಚ್ಚಿನ ಮನ್ನಣೆ. ಹೀಗಾಗಿಯೇ ಯುವ ಪ್ರತಿಭೆಗಳಿಗೆ ತಮ್ಮ ಪ್ರೌಢಿಮೆ ಪ್ರದರ್ಶಿಸಲು ಅವಕಾಶ ದೊರೆಯುವುದು ಕಡಿಮೆ.

ಇದನ್ನು ಮನಗಂಡೇ ಸಂಗೀತ, ಬರಹ, ಛಾಯಾಗ್ರಹಣ ಇತ್ಯಾದಿ ಕ್ಷೇತ್ರಗಳಲ್ಲಿ ಯುವ ಪ್ರತಿಭೆಗಳನ್ನು ಗುರುತಿಸಿ, ಬೆನ್ನು ತಟ್ಟಲು `ಟೊಟೊ ಫಂಡ್ಸ್ ದಿ ಆರ್ಟ್~ (ಟಿಎಫ್‌ಎ) ಏಳು ವರ್ಷಗಳಿಂದ ಪುರಸ್ಕಾರ ನೀಡುತ್ತಿದೆ.

20ರ ಎಳವೆಯಲ್ಲೇ ಅಪಘಾತದಲ್ಲಿ ದುರ್ಮರಣ ಹೊಂದಿದ ಪ್ರತಿಭಾವಂತ ಆಂಗೀರಸ `ಟೊಟೊ~ ವೆಲ್ಲಾನಿ ಹೆಸರಿನಲ್ಲಿ ಈ ಪುರಸ್ಕಾರ ನೀಡಲಾಗುತ್ತಿದೆ.

ಟಿಎಫ್‌ಎ ನಗರ ಪ್ರದೇಶದ ಯುವ ಪ್ರತಿಭೆಗಳಿಗೆ ಆದ್ಯತೆ ನೀಡುತ್ತಿದೆ. ಏಕೆಂದರೆ ಶಾಸ್ತ್ರೀಯ ಅಥವಾ ಜಾನಪದ ಪ್ರಕಾರಕ್ಕೆ ಸೇರದ, ಯಾವುದೇ ಪ್ರಾದೇಶಿಕ ಕಲಾ ಪ್ರಕಾರಕ್ಕೆ ಸೇರದ ಅವರ ಸಂಗೀತ, ಕಲಾಕೃತಿಗಳಿಗೆ ಮನ್ನಣೆ ದೊರೆಯುವುದು ಕಷ್ಟ.
 
ಈ ಹಿಂದೆ ಟೊಟೊ ಸಂಗೀತ ಪುರಸ್ಕಾರಕ್ಕೆ ಪಾತ್ರರಾದ ಅಭಿಜಿತ್ ತಾಂಬೆ ಮತ್ತು ಕಿಶನ್ ಬಾಲಾಜಿ ಟೊಟೊ ಪುರಸ್ಕಾರದಿಂದ ತಾವು ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಯಿತು ಎಂದು ಹೇಳುತ್ತಾರೆ.

ಟೊಟೊ ಒಟ್ಟು ನಾಲ್ಕು ವಿಭಾಗಗಳಲ್ಲಿ ಆರು ಪ್ರಶಸ್ತಿ ನೀಡುತ್ತಿದೆ. ಸಂಗೀತ (50 ಸಾವಿರ ರೂ.), ಛಾಯಾಗ್ರಹಣ (ತಲಾ 25 ಸಾವಿರ ರೂ. ಎರಡು ಪ್ರಶಸ್ತಿ), ಇಂಗ್ಲಿಷ್ ಸೃಜನಶೀಲ ಬರಹ (ತಲಾ 25 ಸಾವಿರ ರೂ. ಎರಡು ಪ್ರಶಸ್ತಿ) ಮತ್ತು ಕನ್ನಡ ಸೃಜನಶೀಲ ಬರಹ (25 ಸಾವಿರ ರೂ.).

18 ವರ್ಷದಿಂದ 29 ವರ್ಷ ವಯೋಮಾನದಲ್ಲಿರುವ ಯುವಕ, ಯುವತಿಯರು ಅರ್ಜಿ ಭರ್ತಿ ಮಾಡಿ ಸಲ್ಲಿಸಲು ಅ. 10 ಕೊನೆಯ ದಿನ.

totofundsthearts.blogspot.com  ನಲ್ಲಿ ವಿವರ ಪಡೆಯಬಹುದು.
ಇ-ಮೇಲ್ ವಿಳಾಸ: totomusicaward@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT