ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕರು ರಾಷ್ಟ್ರ ನಿರ್ಮಾಣದ ಶಿಲ್ಪಿಗಳು

Last Updated 9 ಫೆಬ್ರುವರಿ 2011, 11:55 IST
ಅಕ್ಷರ ಗಾತ್ರ

ಮೂಡಲಗಿ: ಯುವಕರು ರಾಷ್ಟ್ರ ನಿರ್ಮಾಣದ ಶಿಲ್ಪಿಗಳಾಗಿದ್ದು, ಉತ್ತಮ ಚಾರಿತ್ರ್ಯ, ಚಿಂತನಗಳ ಮೂಲಕ ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸಲು ಮುಂದಾಗಬೇಕು’ ಎಂದು ಜಿ.ಪಂ. ಅಧ್ಯಕ್ಷ ಈರಪ್ಪ ಕಡಾಡಿ ಅವರು ಹೇಳಿದರು.ಇಲ್ಲಿಯ ರೂರಲ್ ಡೆವೆಲೆಪ್‌ಮೆಂಟ್  ಸೊಸೈಟಿಯಲ್ಲಿ ಬೆಳಗಾವಿಯ ನೆಹರು ಯುವ ಕೇಂದ್ರ, ಸೇವಾ ಮಹಿಳಾ ಮಂಡಳ, ಮದರ ತರೆಸಾ ಯುವತಿ ಮಂಡಳ, ವೀರಭದ್ರೇಶ್ವರ ಯುವಕ ಸಂಘದ ಆಶ್ರಯದಲ್ಲಿ ಏರ್ಪಡಿಸಿರುವ ‘ಯುವಕ-ಯುವತಿ ಮಂಡಳಗಳ ಸಬಲೀಕರಣ’ ಕುರಿತಾದ 5 ದಿನಗಳ ಶಿಬರವನ್ನು ಮಂಗಳವಾರಂದು ಉದ್ಘಾಟಿಸಿ ಮಾತನಾಡಿದರು.

ಸರ್ಕಾರವು ಗ್ರಾಮೀಣ ಜನರಿಗೆ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಅವುಗಳು ಜನ ಸಾಮಾನ್ಯರಿಗೆ ತಲುಪಿಸುವಲ್ಲಿ ಯುವಕ ಮಂಡಳದ ಸದಸ್ಯರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.ಮುಖ್ಯ ಅತಿಥಿ ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ಎಸ್.ಯು,. ಜಮಾದಾರ ಮಾತನಾಡಿ ಎ.ಪಿ.ಜಿ. ಅಬ್ದುಲ್ ಕಲಾಮ್ ಅವರ ಕನಸು ನನಸಾಗುವ ನಿಟ್ಟಿನಲ್ಲಿ ಯುವಕರು ಕಾರ್ಯನ್ಮೋಖ ರಾಗಬೇಕು ಎಂದರು.

ಪದವಿ ಕಾಲೇಜು ಗ್ರಂಥಪಾಲಕ ಬಾಲಶೇಖರ ಬಂದಿ ಅತಿಥಿಯಾಗಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ತಮ್ಮಣ್ಣಾ ಪಾರ್ಶಿ ಮಾತನಾಡಿ ಶ್ರಮ, ಅನುಭವ ಮತ್ತು ಉತ್ತಮ ಗುರಿಗಳ ಮೂಲಕ ಯುವಕರು ಆದರ್ಶ ಪ್ರಾಯರಾಗಬೇಕು ಎಂದರು.ಪಿ.ವೈ. ಮುನ್ಯಾಳ, ಮುತ್ತಪ್ಪ ಈರಪ್ಪಣ್ಣವರ, ಶೀತಲ ಖೇಮಲಾಪುರ, ಮಲ್ಲಪ್ಪ ಮದಗುಣಕಿ, ಮಲ್ಲಪ್ಪ ನೇಮಗೌಡರ, ಗಿರಿಗೌಡರ ಪಾಟೀಲ, ಸಿ.ಎಸ್. ಬಗನಾಳ, ಜಗನ್ನಾಥ ಕೋರಾಡಿ ಅತಿಥಿಯಾಗಿ ಉಪಸ್ಥಿತರಿದ್ದರು.ಎಸ್.ಎಸ್. ಪಾರ್ಶಿ ಸ್ವಾಗತಿಸಿದರು, ಸಂಗಮೇಶ ಕುಂಬಾರ ನಿರೂಪಿಸಿದರು, ಸಿದ್ದು ದುರದುಂಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT