ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗನತಿಟ್ಟು: ಪಕ್ಷಿಗಳಿಗೆ ತಾಯ್ತನದ ಸುಖ!

Last Updated 10 ಜೂನ್ 2011, 10:05 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಇಲ್ಲಿಗೆ ಸಮೀಪದ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮಕ್ಕೆ ವಂಶಾಭಿವೃದ್ಧಿಗಾಗಿ ಬಂದಿರುವ ಪಕ್ಷಿ ಸಂಕುಲ ಮೊಟ್ಟೆ ಇಟ್ಟು ಮರಿ ಮಾಡಿದ್ದು, ತಾಯ್ತನದ ಸುಖ ಅನುಭವಿಸುತ್ತಿವೆ.

ಪಕ್ಷಿಧಾಮದಲ್ಲಿ ಓಪನ್ ಬಿಲ್, ವೈಟ್ ಐಬಿಸ್, ಕೆಟಲ್ ಇಗ್ರೆಟ್, ನೈಟ್ ಹೆರೋನ್, ಪೇಂಟೆಡ್ ಸ್ಟೋರ್ಕ್, ಪ್ಯಾಡಿ ಬರ್ಡ್, ಲಿಟಲ್ ಇಗ್ರೆಟ್, ಸ್ನೇಕ್ ಬರ್ಡ್ ಇತರ ಪಕ್ಷಿಗಳು ಮರಿ ಮಾಡಿವೆ.  ಅವುಗಳಿಗೆ ಗುಟುಕು ನೀಡುತ್ತಿವೆ. ಇದೇ ಮೊದಲ ಬಾರಿಗೆ ರಂಗನತಿಟ್ಟಿಗೆ ಆಗಮಿಸಿರುವ ಹೆಜ್ಜಾರ್ಲೆ (ಪೆಲಿಕಾನ್) ಬಳಗ ಕೂಡ ಎತ್ತರದ ಮರಗಳ ಮೇಲೆ ಮೊಟ್ಟೆಯಿಟ್ಟು ಮರಿ ಮಾಡಿದ್ದು, ಪೋಷಿಸುತ್ತಿದೆ. ಲಾರ್ಜ್ ಇಗ್ರೆಟ್, ಸ್ನೇಕ್ ಬರ್ಡ್ ಹಾಗೂ ಪೇಂಟೆಡ್ ಸ್ಟೋರ್ಕ್ ಹಾಗೂ ಓಪನ್ ಬಿಲ್ ಮರಿಗಳು ಹೆಚ್ಚು ಕಂಡು ಬರುತ್ತಿವೆ.

ಓಪನ್ ಬಿಲ್ ಹಾಗೂ ಪೇಂಟೆಡ್ ಸ್ಟೋರ್ಕ್ ಜಾತಿಯ ಮರಿಗಳು ಸಾಕಷ್ಟು ಬೆಳೆದಿದ್ದು ಹಾರುವ ಯತ್ನ ನಡೆಸುತ್ತಿವೆ. ಕೆಟಲ್ ಇಗ್ರೆಟ್ ಹಾಗೂ ವೈಟ್ ಐಬಿಸ್‌ನ ಎಳೆಯ ಮರಿಗಳು ಅಲ್ಲಲ್ಲಿ ಕಂಡು ಬರುತ್ತಿದ್ದು, ವಯಸ್ಕ ಪಕ್ಷಿಗಳು ಅವುಗಳ ಪೋಷಣೆಗೆ ನಿಂತಿವೆ. ತಾಯಿ ಪಕ್ಷಿ ತನ್ನ ಕಂದಮ್ಮಗಳಿಗೆ ಗುಟುಕು ನೀಡುವ ದೃಶ್ಯ ಸಾಮಾನ್ಯವಾಗಿದೆ. ಪಾಂಡ್ ಹೆರೋನ್, ಕಾರ್ಮೊರೆಂಟ್ ಪಕ್ಷಿಗಳು ಮರದಿಂದ ಮರಕ್ಕೆ ಹಾರಾಡುತ್ತಿವೆ. `ಪಕ್ಷಿಧಾಮದಲ್ಲಿ ನವಜಾತ ಮರಿಗಳು ಸೇರಿ ವಿವಿಧ ಜಾತಿಯ ಸುಮಾರು 8 ಸಾವಿರ ಪಕ್ಷಿಗಳು ಇವೆ~ ಎಂದು ಫಾರೆಸ್ಟರ್ ಆನಂದ್ ತಿಳಿಸಿದ್ದಾರೆ.

ದಾಖಲೆ ಆದಾಯ
ಪಕ್ಷಿಧಾಮ ಪ್ರವೇಶ ಹಾಗೂ ದೋಣಿ ವಿಹಾರ ಶುಲ್ಕ ದುಪ್ಪಟ್ಟಾಗಿದ್ದರೂ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯಲ್ಲಿ ಯಾವುದೇ ಇಳಿಮುಖವಾಗಿಲ್ಲ. 2010-11ನೇ ಸಾಲಿಗೆ 3,09,823 ಭಾರತೀಯರು ಹಾಗೂ 6,636 ಮಂದಿ ವಿದೇಶಿಯರು ಇಲ್ಲಿಗೆ ಭೇಟಿ ನೀಡಿದ್ದಾರೆ. ಕಳೆದ ಏಪ್ರಿಲ್‌ನಲ್ಲಿ 29 ಸಾವಿರ ಹಾಗೂ ಮೇ ತಿಂಗಳಲ್ಲಿ 41 ಸಾವಿರ ಪಕ್ಷಿ ಪ್ರಿಯರು ಇಲ್ಲಿಗೆ ಆಗಮಿಸಿ ಪಕ್ಷಿ ವೀಕ್ಷಿಸಿದ್ದಾರೆ. ಎರಡು ತಿಂಗಳಲ್ಲಿ ರೂ.62.50 ಲಕ್ಷ ಹಾಗೂ 2010-11ನೇ ಸಾಲಿನಲ್ಲಿ ದಾಖಲೆಯ ರೂ.1.53 ಕೋಟಿ ಆದಾಯ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT