ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಾಯಾಮ ಕಲಾಹಬ್ಬ

Last Updated 21 ಜನವರಿ 2011, 14:40 IST
ಅಕ್ಷರ ಗಾತ್ರ

ಹನುಮಂತನಗರದ ಕೆಂಗಲ್ ಹನುಮಂತಯ್ಯ ಕಲಾಸೌಧಕ್ಕೆ ಮೊದಲ ವಾರ್ಷಿಕೋತ್ಸವ ಸಂಭ್ರಮ. ಇದರ ಅಂಗವಾಗಿ ಭಾನುವಾರದಿಂದ ಬುಧವಾರ ವರೆಗೆ ನಾಲ್ಕು ದಿನಗಳ ‘ರಂಗಾಯಾಮ ಕಲಾ ಹಬ್ಬ’ ಹಮ್ಮಿಕೊಂಡಿದೆ. ಇಲ್ಲಿ ನಾಟಕ, ನೃತ್ಯ, ಚಲನಚಿತ್ರ ಹಾಗು ಸಂಗೀತ ಎಂಬ ನಾಲ್ಕು ವಿವಿಧ ಪ್ರಕಾರದ ಕಲೆಗಳ ಪ್ರದರ್ಶನ ನಡೆಯಲಿದೆ.

ಇದಲ್ಲದೆ ನಾಲ್ಕೂ ದಿನ ನಾಲ್ಕು ಪ್ರದರ್ಶಕ ಕಲೆಗಳ ಉಚಿತ ತರಬೇತಿ ಶಿಬಿರ, ನಿತ್ಯ ಬೆಳಿಗ್ಗೆ 9 ರಿಂದ ಚಿತ್ರ ಕಲಾ ಸ್ಪರ್ಧೆಯೂ ಇರುತ್ತದೆ.ಈ ಕಲಾಸೌಧವನ್ನು ಬಿಬಿಎಂಪಿಯಿಂದ ಫೋರ್ಥ್ ಕಾರ್ನರ್ ಸಂಸ್ಥೆಯ ಅಂಗವಾಗಿರುವ ‘ಪ್ರದರ್ಶನ ಕಲಾ ಸಂಘ’ ಗುತ್ತಿಗೆಗೆ ತೆಗೆದುಕೊಂಡಿದೆ.

ಕಳೆದ ಒಂದು ವರ್ಷದಲ್ಲಿ ಕಲಾಸೌಧ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಯಶಸ್ಸು ಕಂಡಿದ್ದು ಜನರ ಅಚ್ಚು ಮೆಚ್ಚಿನ ಕಲಾ ಕೇಂದ್ರವಾಗಿ ಬೆಳೆದಿದೆ. ಬೆಂಗಳೂರಿನ ಉತ್ಸಾಹಿ ಕಲಾ ತಂಡಗಳಿಗೆ ತವರಾಗಿ ಗುರುತಿಸಿಕೊಂಡಿದೆ. ರಂಗಾಯಾಮ ‘ಕಲಾ ಸಂಘದ’ ಮಹತ್ವಾಕಾಂಕ್ಷಿ ಕಲಾ ಹಬ್ಬ. 

ಎಂದು? ಏನು?
ಭಾನುವಾರ ಮಧ್ಯಾಹ್ನ 2.30ಕ್ಕೆ ಮೋವ್ ತಂಡದಿಂದ ನಾಟಕ ಶಿಬಿರ. ಸಂಜೆ 7.40ಕ್ಕೆ ‘ಹೊಸಬೆಳಕು’ ನಾಟಕ. ಸೋಮವಾರ ಮಧ್ಯಾಹ್ನ 2.30ಕ್ಕೆ ಪೂರ್ಣಿಮಾ ನವೀನ್ ನೃತ್ಯ ಶಿಬಿರ, ಸಂಜೆ 7.30ಕ್ಕೆ ಮೇಧಾ ದೀಕ್ಷಿತ್ ನೃತ್ಯ. ಮಂಗಳವಾರ ಮಧ್ಯಾಹ್ನ 2.30ಕ್ಕೆ ಬಿ.ಎಂ. ಗಿರಿರಾಜ್ ಅವರಿಂದ ಶಿಬಿರ, ಸಂಜೆ 7.30ಕ್ಕೆ ‘ನವಿಲಾದವರು’ ಚಲನಚಿತ್ರ. ಬುಧವಾರ ಮಧ್ಯಾಹ್ನ 2.30ಕ್ಕೆ ಬಿ.ಎಂ. ಪ್ರದೀಪ್ ಅವರಿಂದ ಸಂಗೀತ ಶಿಬಿರ, ಸಂಜೆ 7.30ಕ್ಕೆ ‘ಭಾವಾಯಾಮ’ ಸುಗಮ ಸಂಗೀತ

ಸ್ಥಳ: ಕೆಂಗಲ್ ಹನುಮಂತಯ್ಯ ಕಲಾಸೌಧ, ರಾಮಾಂಜನೇಯ ಗುಡ್ಡ, ಹನುಮಂತ ನಗರ. ವಿವರ ಮತ್ತು ಉಚಿತ ಪಾಸ್‌ಗಳಿಗೆ: 98803 88868, 98865 90312, 98804 87682, 72599 98222.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT