ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜೆಯ ಔಚಿತ್ಯ ಏನು?

Last Updated 12 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಗಣ್ಯರು ತೀರಿಕೊಂಡಾಗ ಸರ್ಕಾರ ರಜೆ ಘೋಷಣೆ ಮಾಡುವುದು ಅನಾದಿ ಕಾಲದಿಂದಲೂ ನಡೆದು ಬಂದ ಸಂಪ್ರದಾಯ. ಇದು ಎಷ್ಟರ ಮಟ್ಟಿಗೆ ಸಾರ್ಥಕತೆ ಪಡೆಯುತ್ತೆ ಅನ್ನುವುದು ನಮಗೆಲ್ಲರಿಗೂ ಗೊತ್ತಿದೆ. ವಿಧಿವಶರಾದವರ ಬಗ್ಗೆ ಅಗೌರವದಿಂದ ಈ ಮಾತು ಹೇಳುತ್ತಿಲ್ಲ.

  ತೀರಿಕೊಂಡವರನ್ನು ರಜೆಯ ಮಜಾದಲ್ಲಿ ಮರೆತರೆ ಅವರ ಸಾಧನೆ ಜನಸಾಮಾನ್ಯರಿಗೆ ತಿಳಿಯುವುದಾದರೂ ಹೇಗೆ?
ನೌಕರರು ರಜೆಗಾಗಿ ಹಂಬಲಿಸಲಾರರು. ಕಡೇ ಪಕ್ಷ ವಿದ್ಯಾ ಇಲಾಖೆಯಲ್ಲಿ ರಜೆ ನೀಡದೆ ಅದೇ ದಿನ ಅಲ್ಲಿನ ಮಕ್ಕಳಿಗೆ ಅಗಲಿದ ಸಾಧಕರ ಪರಿಚಯ, ಸಾಧನೆಗೆ ಪ್ರೇರಣೆ, ಸಾಗ­ಬೇಕಾದ ಹಾದಿಯನ್ನು  ತಿಳಿಸುವುದು ಸೂಕ್ತವಲ್ಲವೆ? 

ಬೇರೆ ದೇಶಗಳಲ್ಲಿ ಗಣ್ಯರು ಸತ್ತಾಗ ಒಂದು ಗಂಟೆ ಹೆಚ್ಚು ದುಡಿದು ಗೌರವ ಸಲ್ಲಿಸುತ್ತಾರೆ. ನಾವು ವಿದೇಶಿಯರ ಈ ಕ್ರಮವನ್ನು  ಮೆಚ್ಚಿಕೊಳ್ಳುತ್ತೇವೆ. ಆದರೆ ಪಾಲಿಸುವುದಿಲ್ಲ. ಹೀಗೇಕೆ?

ಇನ್ನು ಮುಂದಾದರೂ ಅನಗತ್ಯ ರಜೆಗಳಿಗೆ ಸರ್ಕಾರ ಕಡಿವಾಣ ಹಾಕಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT