ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಬೀರ್‌ಗೆ ಶಸ್ತ್ರಚಿಕಿತ್ಸೆ

Last Updated 6 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕಳೆದ ವಾರವಷ್ಟೇ ಫಿಲ್ಮ್‌ಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದು ಖುಷಿಯಾಗಿದ್ದ ರಣಬೀರ್ ಕಪೂರ್ ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾದ ಸುದ್ದಿ ಬಂದಿದೆ.

ಇಮ್ತಿಯಾಜ್ ಅಲಿ ಅವರ `ರಾಕ್‌ಸ್ಟಾರ್~ ಚಿತ್ರದ ನಟನೆಗಾಗಿ ರಣಬೀರ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿತ್ತು. ಅದಾದ ಎರಡು ದಿನಕ್ಕೆ ಬೆನ್ನಿನಲ್ಲಿ ಇದ್ದ ಗಡ್ಡೆಯನ್ನು ಹೊರತೆಗೆಸಿಕೊಂಡಿರುವ ರಣಬೀರ್ ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ.
 
`ಆ ಗಡ್ಡೆ ಅಪಾಯಕಾರಿ ಏನಲ್ಲ. ಆದರೂ ಮುಂದೆ ಅದರಿಂದ ತೊಂದರೆಯಾಗಬಹುದು ಎಂದು ವೈದ್ಯರು ಹೇಳಿದ ಕಾರಣ ಅದನ್ನು ತೆಗೆಸುವ ನಿರ್ಧಾರ ಮಾಡಿದೆವು. ಇದೊಂದು ಸಣ್ಣ ಶಸ್ತ್ರ ಚಿಕಿತ್ಸೆ. ಎರಡು ಮೂರು ಗಂಟೆಯಲ್ಲಿ ಮುಗಿದು ಹೋಯಿತು~ ಎಂದು ರಣಬೀರ್ ತಂದೆ ರಿಷಿ ಕಪೂರ್ ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT