ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಯಲ್ಲಿ ಒಕ್ಕಣೆ, ವಾಹನ ಸಂಚಾರಕ್ಕೆ ಅಡಚಣೆ

Last Updated 29 ಜನವರಿ 2011, 7:15 IST
ಅಕ್ಷರ ಗಾತ್ರ

ಗುಂಡ್ಲುಪೇಟೆ:  ತಾಲ್ಲೂಕಿನ ಬಹುತೇಕ ರಸ್ತೆಗಳಲ್ಲಿ ರೈತರು ತಾವು ಬೆಳೆದ ಹುರುಳಿ ಬೆಳೆಯ ಒಕ್ಕಣೆ ಕಾರ್ಯವನ್ನು ಮಾಡುತ್ತಿರುವುದರಿಂದ ವಾಹನ ಸಂಚಾರಕ್ಕೆ ಬಹಳ ತೊಂದರೆಯಾಗಿದೆ.ರಸ್ತೆಯ ಮಧ್ಯದಲ್ಲಿಯೇ ಕುಳಿತು ಒಕ್ಕಣೆ ಮಾಡುವುದರಿಂದ ಅಪಘಾತವಾಗುವ ಸಂಭವಗಳು ಹೆಚ್ಚಾಗಿವೆ, ಆದರೂ ರೈತರು ಈ ಬಗ್ಗೆ ಗಮನಹರಿಸಿಲ್ಲ. ವಾಹನಗಳು ವೇಗವಾಗಿ ಬರುವುದರಿಂದ ಕೆಲವು ವೇಳೆ ವಾಹನ ಚಾಲಕರಿಗೆ ರೈತರು ಕುಳಿತಿರುವುದು ಗೊತ್ತಾಗದೆ ಅವರ ಸಮೀಪಕ್ಕೆ ಹೋಗಿ ವಾಹನಗಳನ್ನು ನಿಲ್ಲಿಸುವ ಸ್ಥಿತಿ ನಿರ್ಮಾಣವಾಗಿದೆ.

ವಾಹನಗಳು ಬರುತ್ತಿದ್ದರೂ ತಮಗೆ ಏನು ತಿಳಿಯದಂತೆ ತಮ್ಮ ಒಕ್ಕಣೆ ಕಾರ್ಯದಲ್ಲಿ ಮಗ್ನರಾಗುತ್ತಾರೆ ಎಂದು ವಾಹನಗಳ ಚಾಲಕರು ದೂರಿದ್ದಾರೆ. ದ್ವಿಚಕ್ರ ವಾಹನಗಳನ್ನು ರಸ್ತೆಯ ಬದಿಯಲ್ಲಿ ಓಡಿಸುವುದು ಕೂಡ ಕಷ್ಟಕರವಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ರಸ್ತೆಯಲ್ಲಿ ಒಕ್ಕಣೆ ಮಾಡುವ ಪ್ರವೃತ್ತಿಯನ್ನು ತಪ್ಪಿಸಲು ರೈತರಿಗೆ ಅಪಘಾತಗಳ ಬಗ್ಗೆ ಸೂಕ್ತ ಮಾಹಿತಿ ಕೊಡ ಬೇಕೆಂದು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT