ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಘವೆಂದ್ರ ರಾಯ್ಕರ್ ಪ್ರಥಮ

ರಾಜ್ಯ ಸೀನಿಯರ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್
Last Updated 20 ಜುಲೈ 2013, 19:59 IST
ಅಕ್ಷರ ಗಾತ್ರ

ಸೋಮವಾರಪೇಟೆ: ದಾವಣಗೆರೆಯ ರಾಘವೇಂದ್ರ ರಾಯ್ಕರ್ ರಾಜ್ಯ ಪವರ್‌ಲಿಫ್ಟಿಂಗ್ ಸಂಸ್ಥೆ ಮತ್ತು ಜಾಗರಣ ವೇದಿಕೆ ಆಶ್ರಯದಲ್ಲಿ ಶನಿವಾರ ಆರಂಭವಾದ ರಾಜ್ಯ ಸೀನಿಯರ್ ಪುರುಷ ಮತ್ತು ಮಹಿಳೆಯರ ಪವರ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನ ಪುರುಷರ 93 ಕೆಜಿಯೊಳಗಿನವರ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದರು.

ದಾವಣಗೆರೆ ಮುನ್ಸಿಪಲ್     ಸ್ಪೋರ್ಟ್ಸ್ ಕ್ಲಬ್‌ನ ರಾಘವೇಂದ್ರ ಸ್ಕ್ವಾಟ್‌ನಲ್ಲಿ 280 ಕೆಜಿ, ಬೆಂಚ್‌ಪ್ರೆಸ್‌ನಲ್ಲಿ 110ಕೆಜಿ, ಡೆಡ್‌ಲಿಫ್ಟ್‌ನಲ್ಲಿ 245 ಕೆಜಿ ಎತ್ತಿದರು.

ಇದೇ ವಿಭಾಗದಲ್ಲಿ ದಾವಣೆಗೆರೆಯ ಬೀರೇಶ್ವರ ವ್ಯಾಯಮಶಾಲೆಯ ಎಚ್. ದೇವೇಂದ್ರಪ್ಪ ಮತ್ತು ಮಂಗಳೂರಿನ ಬಾಲಾಂಜನೇಯ ಜಿಮ್ನಾಷಿಯಂನ  ಎನ್. ಸುರೇಶ್ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದರು.  ಚಾಂಪಿಯನ್‌ಷಿಪ್‌ಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ 175 ಪುರುಷರು ಮತ್ತು 75 ಮಹಿಳಾ ಸ್ಪರ್ಧಿಗಳು ಆಗಮಿಸಿದ್ದಾರೆ.

ಫಲಿತಾಂಶಗಳು: 59 ಕೆಜಿ: ರಾಜೇಂದ್ರ (ವೀರಮೂರ್ತಿ ಜಿಮ್, ಕೋಟೇಶ್ವರ; ಸ್ಕ್ವಾಟ್: 195ಕೆಜಿ, ಬೆಂಚ್‌ಪ್ರೆಸ್ 110, ಡೆಡ್‌ಲಿಫ್ಟ್ 215)-1, ಬಲಿರಾಮ್ ಚವ್ಹಾಣ್ (ಬಾಲಾಂಜನೇಯ ಜಿಮ್ನಾಷಿಯಂ ಮಂಗಳೂರು)-2, ಹರೀಶ್ (ಆಳ್ವಾಸ್ ಕಾಲೇಜು ಮೂಡಬಿದರೆ)-3. 66 ಕೆಜಿ: ಪ್ರಸಾದ್ ಶೆಟ್ಟಿ (ಬಾಲಾಂಜನೇಯ ಜಿಮ್ ಮಂಗಳೂರು-ಸ್ಕ್ವಾಟ್ 185ಕೆಜಿ; ಬೆಂಚ್‌ಪ್ರೆಸ್ 115ಕೆಜಿ; ಡೆಡ್‌ಲಿಫ್ಟ್ 225ಕೆಜಿ; )-1, ಸತೀಶ್ ಕಾರ್ವಿ (ಹರ್ಕ್ಯುಲಸ್ ಕುಂದಾಪುರ)-2, ಎಂ. ಸಲೀಂ (ಭದ್ರಾವತಿ)-3; 

74 ಕೆಜಿ: ಸಚ್ಚೀಂದ್ರ (ಬಾಲಾಂಜನೇಯ ಜಿಮ್ನಾಷಿಯಂ ಮಂಗಳೂರು-ಸ್ಕ್ವಾಟ್: 190, ಬೆಂಚ್: 127.5ಕೆಜಿ, ಡೆಡ್‌ಲಿಫ್ಟ್: 235ಕೆಜಿ )-1, ಬಿ.ಎಚ್. ಮಂಜುನಾಥ್ (ಎಸ್‌ಪಿಟಿ ಕ್ಲಬ್ ದಾವಣಗೆರೆ)-2, ಜಿ.ಆರ್. ಗೋವಿಂದೇಗೌಡ (ಕೆಪಿಟಿಸಿಎಲ್‌ಎಸ್‌ಒ)-3; 83ಕೆಜಿ: ಬಿ. ವಿಶ್ವನಾಥ್ (ಸೂಪರ್ ಬಾಡಿ ಫಿಟ್‌ನೆಸ್ ಬೆಂಗಳೂರು-ಸ್ಕ್ವಾಟ್: 255ಕೆಜಿ, ಬೆಂಚ್ 117.5, ಡೆಡ್‌ಲಿಫ್ಟ್ 300ಕೆಜಿ)-1, ಸೂರಜಕುಮಾರಸಿಂಗ್ (ಬಾಲಾಂಜನೇಯ ಜಿಮ್ ಮಂಗಳೂರು)-2, ಸುರೇಶ್ ಪಡುಕೋಣೆ (ಗುರುಮೂರ್ತಿ ಜಿಮ್ ಬೆಂಗಳೂರು)-3;

93 ಕೆಜಿ: ರಾಘವೇಂದ್ರ ರಾಯ್ಕರ್ (ಮುನ್ಸಿಪಲ್ ಸ್ಪೋರ್ಟ್ಸ್ ಕ್ಲಬ್ ದಾವಣಗೆರೆ-ಸ್ಕ್ವಾಟ್ 280ಕೆಜಿ, ಬೆಂಚ್‌ಪ್ರೆಸ್ 110ಕೆಜಿ, ಡೆಡ್: 245ಕೆಜಿ)-1,  ಎಚ್. ದೇವೇಂದ್ರಪ್ಪ (ಬೀರೇಶ್ವರ ವ್ಯಾಯಾಮ ಶಾಲಾ ದಾವಣಗೆರೆ)-2, ಎನ್. ಸುರೇಶ್ (ಬಾಲಾಂಜನೇಯ ಜಿಮ್ ಮಂಗಳೂರು)-3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT