ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜನ್ ನೂತನ ಸಿಇಎ

Last Updated 11 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ  (ಪಿಟಿಐ): ಹಿರಿಯ ಆರ್ಥಿಕ ತಜ್ಞ ರಘುರಾಮ್ ಜಿ.ರಾಜನ್ ಅವರು ಕೇಂದ್ರ ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರರಾಗಿ(ಸಿಇಎ) ಶುಕ್ರವಾರ ನೇಮಕಗೊಂಡಿದ್ದಾರೆ. ಅಲ್ಲದೆ, ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಗೌರವ ಆರ್ಥಿಕ ಸಲಹೆಗಾರರೂ ಆಗಿರುತ್ತಾರೆ.

ರಾಜನ್ ಈ ಮೊದಲು `ಅಂತರರಾಷ್ಟ್ರೀಯ ಹಣಕಾಸು ನಿಧಿ~(ಐಎಂಎಫ್)ಯಲ್ಲಿ ಮುಖ್ಯ ಆರ್ಥಿಕ ತಜ್ಞರಾಗಿದ್ದರು. 2008ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತ ಉಂಟಾಗುವ ಬಗೆಗೂ ಭವಿಷ್ಯ ನುಡಿದಿದ್ದರು.

ಪ್ರತಿಷ್ಠಿತ ಐಐಎಂ-ಅಹಮದಾಬಾದ್ ಮತ್ತು ಐಐಟಿ-ದೆಹಲಿ ಸಂಸ್ಥೆಗಳ ಪ್ರತಿಭೆಯಾದ ರಾಜನ್, ಸದ್ಯ ಶಿಕಾಗೊ ವಿಶ್ವವಿದ್ಯಾಲಯದ `ಬೂತ್ ಸ್ಕೂಲ್ ಆಫ್ ಬಿಜಿನೆಸ್~ನಲ್ಲಿ ಪ್ರೊಫೆಸರ್ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT