ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ತಾನ: ಶೇ 75 ಮತದಾನ

Last Updated 1 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಜೈಪುರ (ಪಿಟಿಐ): ರಾಜಸ್ತಾನ ವಿಧಾನ­­­ಸಭೆಗೆ ಭಾನುವಾರ ನಡೆದ ಚುನಾವಣೆ­ಯಲ್ಲಿ ಶೇ 75ರಷ್ಟು ಮತ­ದಾನವಾಗಿದೆ. ಕೆಲವು ಕಡೆಗಳಲ್ಲಿ ಹಿಂಸಾ­ಚಾರ ನಡೆ­ದಿರುವ ಬಗ್ಗೆ ವರದಿ­ಯಾಗಿದೆ. ಪರಿಸ್ಥಿತಿ­ ತಿಳಿಗೊಳಿಸಲು ಪೊಲೀ­ಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಬಿಎಸ್‌ಪಿ ಅಭ್ಯರ್ಥಿ ಜಗದೀಶ್‌ ಮೇಘವಾಲ್ ಅವರ ನಿಧನದ ಹಿನ್ನೆಲೆ­ಯಲ್ಲಿ ಛುರು ಕ್ಷೇತ್ರದಲ್ಲಿ ಮತದಾನ­ವನ್ನು ಡಿ.13ಕ್ಕೆ ಮುಂದೂಡಲಾಗಿದೆ.

ದಾಖಲೆಯ ಶೇ 74.38ರಷ್ಟು ಮತದಾರರು ತಮ್ಮ ಮತ ಚಲಾಯಿ­ಸಿ­ದ್ದಾರೆ ಎಂದು ಚುನಾ­ವಣಾ ಆಯೋಗ ಹೇಳಿದೆ. ಸಿ.ಎಂ. ಅಶೋಕ್‌ ಗೆಹ್ಲೋಟ್‌, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಸೇರಿದಂತೆ 2,087 ಅಭ್ಯರ್ಥಿ­ಗಳ ಭವಿಷ್ಯ ಎಲೆಕ್ಟ್ರಾನಿಕ್‌ ಮತ­ಯಂತ್ರ­ದಲ್ಲಿ ದಾಖಲಾಗಿದೆ.

ಕೆಲವೆಡೆ ವಾಹನಗಳಿಗೆ ಬೆಂಕಿ ಹಚ್ಚಿದ ಮತ್ತು ಮತಗಟ್ಟೆ­ಗಳನ್ನು ವಶಕ್ಕೆ ತೆಗೆದುಕೊಳ್ಳಲು ಹಾಗೂ ಮತ­­­ಯಂತ್ರ­ಗಳನ್ನು ಹಾಳು ಮಾಡಲು ಯತ್ನಿಸಿದ  ಘಟನೆಗಳು ನಡೆದಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಒಟ್ಟು 200 ಸ್ಥಾನ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ 199 ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT