ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀವ ಹಂತಕರ ವಿಚಾರಣೆ ನ.29ಕ್ಕೆ ಮುಂದೂಡಿದ ಹೈ ಕೋರ್ಟ್

Last Updated 28 ಅಕ್ಟೋಬರ್ 2011, 5:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವವ ಮೂವರು ಆರೋಪಿಗಳು ತಮಗೆ ನೀಡಿದ ಶಿಕ್ಷೆಯನ್ನು ಕಡಿತಗೊಳಿಸುವಂತೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಇಲ್ಲಿನ ಮದ್ರಾಸ್ ಹೈಕೋರ್ಟ್ ನವೆಂಬರ್ 29ಕ್ಕೆ ಮುಂದೂಡಿದೆ.

ಶುಕ್ರವಾರ ಮೂವರು ರಾಜೀವ್ ಹಂತಕರ ಅರ್ಜಿಯ ವಿಚಾರಣೆ ಆರಂಭವಾಗುತ್ತಿದ್ದಂತೆಯೇ ಎಂಡಿಎಂಕೆ ಧುರೀಣ ವೈಕೋ ಅವರು, ಚೆನ್ನೈನಿಂದ ಹೊರಗಡೆ ಬೇರೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕೆಂದು ಮನವಿಯು  ಸುಪ್ರೀಂ ಕೋರ್ಟ್ ನಲ್ಲಿ ಇನ್ನೂ ಇತ್ಯರ್ಥವಾಗಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಈ ವಿಷಯವನ್ನು ಗಣನೆಗೆ ತೆಗೆದುಕೊಂಡ ನ್ಯಾಯಮೂರ್ತಿಗಳಾದ ಸಿ.ನಾಗಪ್ಪನ್ ಮತ್ತು ಎಂ. ಸತ್ಯನಾರಾಯಣನ್ ಅವರ ಪೀಠ, ರಾಜೀವ ಗಾಂಧಿ ಹಂತಕರ ಅರ್ಜಿ ವಿಚಾರಣೆಯನ್ನು ನ. 29ಕ್ಕೆ ಮುಂದೂಡಿತು.

ಇದೇ ನ್ಯಾಯಾಲಯವು, ರಾಜೀವ್ ಗಾಂಧಿ ಹಂತಕರಾದ ಮುರುಗನ್, ಸಂಥನ್ ಮತ್ತು ಪೆರಾರಿವಲನ್ ಅವರು ತಮಗೆ ವಿಧಿಸಿರುವ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸುವಂತ ಅರ್ಜಿ ಸಲ್ಲಿಸಿದಾಗ, ಅವರಿಗೆ ವಿಧಿಸಿದ ಗಲ್ಲು ಶಿಕ್ಷೆಗೆ ಆ 30 ರಂದು ಎಂಟು ವಾರಗಳ ತಡೆಯಾಜ್ಞೆ ನೀಡಿತ್ತು.

ರಾಷ್ಟಪತಿ ಪ್ರತಿಭಾ ಪಾಟೀಲ್ ಅವರು, ಕ್ಷಮಾದಾನದ ಅರ್ಜಿಯನ್ನು ತಳ್ಳಿಹಾಕಿದ ನಂತರ ಸೆಪ್ಟೆಂಬರ್ 9 ರಂದು ಗಲ್ಲಿಗೇರಬೇಕಾಗಿದ್ದ ಈ ಮೂವರು ಆರೋಪಿಗಳಿಗೆ ಹೈಕೋರ್ಟ್ ತಡೆಯಾಜ್ಞೆ  ನೆಮ್ಮದಿ ತಂದಿತ್ತು. 

 ಕಳೆದ 1991ರ ಮೇ 21ರಂದು ಶ್ರೀಪರಂಬೂರಿನಲ್ಲಿ ನಡೆದ ರ್ಯಾಲಿಯೊಂದರಲ್ಲಿ ಭಾಗವಹಿಸಿದ್ದ ರಾಜೀವ್ ಗಾಂಧಿ ಅವರನ್ನು ಎಲ್ ಟಿಟಿ ಇ ಸಂಘಟನೆಗೆ ಸೇರಿದ್ದ ಆತ್ಮಹತ್ಯಾ ಬಾಂಬರ್ ತನ್ನನ್ನೇ ತಾನು ಸ್ಫೋಟಿಸಿ ಹತ್ಯೆ ಮಾಡಿದ ಪ್ರಕರಣದಲ್ಲಿ ಈ ಮೂವರು ಆರೋಪಿಗಳಾಗಿದ್ದಾರೆ. ಅವರು ವೆಲ್ಲೋರ್ ಜೈಲಿನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT