ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಮಟ್ಟಕ್ಕೆ ಬಜೆಗುಂಡಿ ಶಾಲಾ ತಂಡ

Last Updated 8 ಅಕ್ಟೋಬರ್ 2011, 8:55 IST
ಅಕ್ಷರ ಗಾತ್ರ

ಸೋಮವಾರಪೇಟೆ: ಬಜೆಗುಂಡಿ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರ ತಂಡ ಹಾಕಿ ಕ್ರೀಡೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ಬಹುತೇಕ ಕೂಲಿ ಕಾರ್ಮಿಕ ಕುಟುಂಬಗಳ ಮಕ್ಕಳು ಹಾಕಿ ತಂಡದಲ್ಲಿರುವುದು ವಿಶೇಷ.

ವಿರಾಜಪೇಟೆಯಲ್ಲಿ ಈಚೆಗೆ ಜರುಗಿದ 14-17ರ ವಯೋಮಾನದ ವಿದ್ಯಾರ್ಥಿ ನಿಯರ ಜಿಲ್ಲಾಮಟ್ಟದ ಹಾಕಿ ಫೈನಲ್ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ತಂಡದ ವಿರುದ್ಧ 3-0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದ ಈ ತಂಡ ಅಕ್ಟೋಬರ್ 15 ಮತ್ತು 16ರಂದು ಬೆಂಗಳೂರಿನಲ್ಲಿ ನಡೆಯಲಿ ರುವ ರಾಜ್ಯಮಟ್ಟದ ಪಂದ್ಯಕ್ಕೆ ಅರ್ಹತೆ ಪಡೆದಿದೆ.

ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಪವಿತ್ರ ನಾಯಕತ್ವದ ತಂಡಕ್ಕೆ ಕಿರಗಂ ದೂರು ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕ ರಮೇಶ್ ಸೇರಿದಂತೆ ಸುರೇಶ್ ಹಾಗು ಪ್ರಶಾಂತ್ ಅವರುಗಳು ತರಬೇತಿ ನೀಡುತ್ತಿದ್ದಾರೆ. ಬಜೆಗುಂಡಿ ಗ್ರಾಮದ ಯುವಕರು ಹಾಗು ಸಾರ್ವಜನಿಕರು ತಂಡಕ್ಕೆ ಸಹಕಾರ ನೀಡುತ್ತಿದ್ದು, ತಂಡದ ಕನಿಷ್ಟ 5ಮಂದಿ ವಿದ್ಯಾರ್ಥಿನಿಯರು ರಾಜ್ಯ ತಂಡಕ್ಕೆ ಆಯ್ಕೆಯಾಗಲಿದ್ದಾರೆ ಎಂಬ ವಿಶ್ವಾಸವನ್ನು ತರಬೇತುದಾರರು ವ್ಯಕ್ತಪಡಿಸಿದ್ದಾರೆ.

ಕ್ರೀಡಾಪರಿಕರಗಳ ಕೊರತೆಯ ನಡು ವೆಯೂ ಉತ್ತಮ ಆಟ ಪ್ರದರ್ಶಿಸು ತ್ತಿರುವ ಸರ್ಕಾರಿ ಶಾಲೆಯ ಈ ತಂಡಕ್ಕೆ ಜಿಲ್ಲಾ ಪಂಚಾಯಿತಿಯಿಂದ ಧನ ಸಹಾಯ ಸೇರಿದಂತೆ ಹಾಕಿ ಸ್ಟಿಕ್ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಜಿ.ಪಂ.ಸದಸ್ಯ ವೆಂಕಪ್ಪ ಹೇಳಿದರು.

ತಂಡದ ಸದಸ್ಯರಿಗೆ ಶೂ ಸೇರಿದಂತೆ ಅಗತ್ಯ ಕ್ರೀಡಾ ಸಾಮಾಗ್ರಿ ಒದ ಗಿಸುವುದಾಗಿ ಸೋಮವಾರಪೇಟೆ ಸ್ಪೋರ್ಟ್ಸ್ ಟ್ರಸ್ಟ್ ಕ್ಲಬ್ ಮತ್ತು ಬ್ಲೂಸ್ಟಾರ್ ಹಾಕಿ ಸಂಸ್ಥೆಯ ಪದಾಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT