ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಮಟ್ಟದ ಮಹಿಳಾ ಸಮಾವೇಶ

Last Updated 21 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕರ್ನಾಟಕ ಸರ್ಕಾರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಹಯೋಗದೊಂದಿಗೆ ಇತ್ತೀಚೆಗಷ್ಟೆ ಮಹಿಳೆ ಮತ್ತು ವಿಜ್ಞಾನ ಯೋಜನೆಯ ಅಡಿಯಲ್ಲಿ ರಾಜ್ಯ ಮಟ್ಟದ ಮಹಿಳಾ ಸಮಾವೇಶವನ್ನು ಆಯೋಜಿಸಿದ್ದವು.

ಪ್ರಗತಿಪರ ಮತ್ತು ವೈಜ್ಞಾನಿಕ ಮನೋಭಾವವನ್ನು ಮೂಡಿಸುವ ಮುಖ್ಯ ಉದ್ದೇಶದೊಂದಿಗೆ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಜೆ.ಎನ್.ಸಿ.ಎ.ಎಸ್.ಆರ್‌ನ ಎಜುಕೇಶನ್ ಟೆಕ್ನಾಲಜಿ ವಿಭಾಗದ ಮುಖ್ಯಸ್ಥರಾದ ಇಂದುಮತಿ ರಾವ್ ಉದ್ಘಾಟಿಸಿದರು.

ಭಾರತೀಯ ವಿಜ್ಞಾನ ಮಂದಿರದ ಜೀವರಸಾಯನ ಶಾಸ್ತ್ರ ವಿಭಾಗದ ಡಾ.ಎಚ್.ಎಸ್.ಸಾವಿತ್ರಿ , ಮಾಧ್ಯಮ ತಜ್ಞೆ ಬಿ.ಮೀರಾ, ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಡಾ.ವಸುಂಧರಾ ಶ್ರೀಧರ್ ಅವರ `ಮಹಿಳೆ-ಜೀವನ-ವಿಜ್ಞಾನ~, ಶ್ರೀಮತಿಯವರ ವಸ್ತು-ಸಂಯೋಜನೆ-ಬದಲಾವಣೆ, ಡಾ.ಎಚ್.ಗಿರಿಜಮ್ಮನವರ `ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ವೈದ್ಯ ವಿಜ್ಞಾನಿಗಳು~ ಮತ್ತು ಸುಮಂಗಲಾ ಮುಮ್ಮಗಟ್ಟಿಯವರ `ನಾನು ಯಾರು?~ ಎಂಬ ಪುಸ್ತಕಗಳನ್ನು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಲೋಕಾರ್ಪಣೆ ಮಾಡಿತು. ಕ.ರಾ.ವಿ.ಪ.ದ ಅಧ್ಯಕ್ಷರಾದ ಡಾ.ನಿರಂಜನಾರಾಧ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ವಿಜ್ಞಾನದ ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡಿರುವ ಇಸ್ರೋದ ವಿಜ್ಞಾನಿ ಅನುರಾಧಾ ಎಸ್.ಪ್ರಕಾಶ್, ಬಾಲವಿಜ್ಞಾನ ಪತ್ರಿಕೆಯ ಸಂಪಾದಕಿ ಹಾಗೂ ವಿಜ್ಞಾನ ಸಂವಹನ ಕಾರರಾದ ಶ್ರೀಮತಿ ಹರಿಪ್ರಸಾದ್ ಹಾಗೂ ಬೆಂಗಳೂರು ಆಕಾಶವಾಣಿಯ ಸುಮಂಗಲಾ ಮುಮ್ಮಿಗಟ್ಟಿಯವರನ್ನು  ಸನ್ಮಾನಿಸಲಾಯಿತು.

ಎಚ್.ಆರ್.ಸ್ವಾಮಿ ಅವರ `ಪವಾಡ ಬಯಲು~ ಪ್ರಾತ್ಯಕ್ಷಿತೆಯೂ ನಡೆಯಿತು. ಎರಡು ದಿನ ನಡೆದ ಸಮಾವೇಶದಲ್ಲಿ ಪವಾಡಗಳ ಹಿಂದಿರುವ ವೈಜ್ಞಾನಿಕ ರಹಸ್ಯಗಳನ್ನೂ ಬಯಲು ಮಾಡಲಾಯಿತು. ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಮಹಿಳೆ ಎಂಬ ವಿಷಯದ ಕುರಿತು ಇಸ್ರೋ ವಿಜ್ಞಾನಿ ಅನುರಾಧಾ ಪ್ರಕಾಶ್, ನಿತ್ಯಜೀವನದಲ್ಲಿ `ರಸಾಯನಶಾಸ್ತ್ರ~ ಕುರಿತು ಪ್ರೊ.ಕೆ.ವಿ.ಘನಶ್ಯಾಮ ಹಾಗೂ ಮೂಢ ನಂಬಿಕೆಗಳ ಹಿಂದಿನ ರಹಸ್ಯಗಳ ಕುರಿತು ಜವಹರಲಾಲ್ ನೆಹರು ತಾರಾಲಯದ ನಿರ್ದೇಶಕರಾದ ಡಾ.ಬಿ.ಎಸ್.ಶೈಲಜಾ ಗೋಷ್ಠಿ ನಡೆಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT