ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ನಾಳೆಯಿಂದ ಹುಲಿ ಗಣತಿ

Last Updated 14 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ರಾಜ್ಯದಲ್ಲಿ ಡಿ. 16ರಿಂದ 23ರವರೆಗೆ ನಡೆಯಲಿರುವ ಹುಲಿ ಗಣತಿಗೆ ಮೊದಲ ಬಾರಿ­ಗೆ ಜಿಪಿಎಸ್‌ (ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟ್ಂ) ತಂತ್ರಾಂಶ ಬಳಸಿಕೊಳ್ಳಲು ಅರಣ್ಯ ಇಲಾಖೆ ಮುಂದಾಗಿದೆ.

ಬಂಡೀಪುರ, ನಾಗರಹೊಳೆ, ಅಣಶಿ– ದಾಂಡೇಲಿ, ಭದ್ರಾ, ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯ (ಬಿಆರ್‌ಟಿ) ಸೇರಿದಂತೆ ರಾಷ್ಟ್ರೀಯ ಉದ್ಯಾನಗಳು, ಎಲ್ಲ ವನ್ಯಜೀವಿಧಾಮಗಳು ಹಾಗೂ ಅವುಗಳಿಗೆ ಹೊಂದಿ­ಕೊಂಡಿರುವ ಪ್ರಾದೇಶಿಕ ಅರಣ್ಯ ಪ್ರದೇಶ­ದಲ್ಲಿ ಗಣತಿ ನಡೆಯಲಿದೆ. ಈ ಪ್ರಕ್ರಿಯೆಯಲ್ಲಿ ಅರಣ್ಯ ಇಲಾಖೆಯ ಎಲ್ಲ ಅಧಿಕಾರಿ­ಗಳು ಹಾಗೂ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತಿದೆ.

ಹುಲಿ ಗಣತಿಯಲ್ಲಿ ಪಾಲ್ಗೊಳ್ಳಲು ಸ್ವಯಂ ಸೇವಕ­ರಿಗೂ ಅವಕಾಶ ಕಲ್ಪಿಸಲಾಗಿದೆ. ಒಟ್ಟು 800 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇಲಾಖೆಯು ಸೂಚಿಸಿ­ರುವ ಅರಣ್ಯ ವಿಭಾಗಕ್ಕೆ ನಿರ್ದಿಷ್ಟ ದಿನ ಹಾಜರಾಗಿ ತರಬೇತಿ ಪಡೆಯುವ ಸ್ವಯಂ ಸೇವಕರಿಗೆ ಮಾತ್ರ ಗಣತಿಯಲ್ಲಿ ಪಾಲ್ಗೊಳ್ಳಲು ಅವಕಾಶ.

ರಾಜ್ಯದಲ್ಲಿ ಎನ್‌ಟಿಸಿಎ ಮಾರ್ಗಸೂಚಿ ಅನ್ವಯ ಹುಲಿ ಗಣತಿ ನಡೆಸಲು ಇಲಾಖೆ ಸಜ್ಜಾಗಿದೆ. ಈಗಾಗಲೇ, ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಡಿ. 16 ಮತ್ತು 17ರಂದು ಆಯಾ ಅರಣ್ಯ ವಿಭಾಗಗ­ಳಲ್ಲಿ ಸ್ವಯಂ ಸೇವಕರು ಮತ್ತು ಸಿಬ್ಬಂದಿಗೆ ಸೀಳುದಾರಿ­ಯಲ್ಲಿ ಸಂಚರಿಸಿ ಗಣತಿ ನಡೆಸುವುದು ಹಾಗೂ ಅರ್ಜಿ­ಯಲ್ಲಿ ಮಾಹಿತಿ ದಾಖಲಿಸುವ ಕುರಿತು ತರಬೇತಿ ನೀಡಲಾಗುತ್ತದೆ. ತದನಂತರ 18ರಿಂದ 23ರವರೆಗೆ ಗಣತಿ ನಡೆಯಲಿದೆ’ ಎಂದು ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ವಿನಯ್‌ ಲೂತ್ರಾ ‘ಪ್ರಜಾವಾಣಿ’ಗೆ ತಿಳಿಸಿದರು.

ಗಣತಿಗಾಗಿ ಸುಮಾರು 800 ಸೀಳುದಾರಿಗಳನ್ನು ಗುರುತಿಸಲಾಗಿದೆ. ಪ್ರತಿಯೊಂದು ಸೀಳುದಾರಿಗೂ ಇಲಾಖೆಯ ಸಿಬ್ಬಂದಿಯೊಂದಿಗೆ ಒಬ್ಬ ಸ್ವಯಂ ಸೇವಕನನ್ನು ನಿಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.

ಜಿಪಿಎಸ್‌ ಬಳಕೆ
ಜಿಪಿಎಸ್‌ ತಂತ್ರಾಂಶ ಬಳಸುತ್ತಿರುವುದು ಈ ಗಣ­ತಿ­ಯ ವಿಶೇಷ.  ಈ ಹಿಂದೆ  ಅರಣ್ಯ ಇಲಾಖೆ­ಯ ಸಿಬ್ಬಂದಿಯೇ ಸೀಳುದಾರಿ ಗುರುತಿ­ಸು­ತ್ತಿದ್ದರು. ಆಗ ನಿಖರತೆ ಇರುತ್ತಿರಲಿಲ್ಲ. 5 ಕಿ.ಮೀ ಉದ್ದದ ಈ ಸೀಳುದಾರಿಯಲ್ಲಿ ಕ್ರಮಿಸಿ ತಮಗೆ ಕಾಣಸಿಗುವ ಹುಲಿ, ಇತರ  ಪ್ರಾಣಿ­ಗಳನ್ನು ಗಣತಿದಾರರು ನಿರ್ದಿಷ್ಟ ಅರ್ಜಿ ನಮೂನೆಯಲ್ಲಿ ದಾಖಲಿಸಬೇಕಿತ್ತು.

ಈಗ ಜಿಪಿಎಸ್‌ ತಂತ್ರಾಂಶದ ಮೂಲಕ ಸೀಳು­ದಾರಿಗಳನ್ನು ನಿಖರವಾಗಿ ಗುರುತಿಸ­ಲಾಗು­ತ್ತದೆ. ಈ ಸೀಳುದಾರಿಗಳಲ್ಲಿ ಸಂಚರಿಸುವ ಗಣತಿ­ದಾರರು ಹುಲಿಯ ಹೆಜ್ಜೆಗುರುತು, ಆವಾಸ ಗುರುತಿಸುತ್ತಾರೆ. ಜತೆಗೆ, ಇತರೇ ಪ್ರಾಣಿ­ಗಳನ್ನು ತಮಗೆ ನೀಡಿರುವ ಅರ್ಜಿ ನಮೂನೆ­ಯಲ್ಲಿ ದಾಖಲಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT