ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ್‌ದೇವ್ ಬಂಧನ:ಬಿಜೆಪಿ,ಆರ್‌ಎಸ್‌ಎಸ್ ಪ್ರತಿಭಟನೆ

Last Updated 6 ಜೂನ್ 2011, 8:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ಯೋಗ ಗುರು ಬಾಬಾ ರಾಮ್‌ದೇವ್ ಅವರನ್ನು ಬಂಧಿಸಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿ ಬಿಜೆಪಿ, ಆರ್‌ಎಸ್‌ಎಸ್ ಕಾರ್ಯಕರ್ತರು ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಸದಸ್ಯರು ಭಾನುವಾರ ಪ್ರತಿಭಟನೆ ನಡೆಸಿದರು.

ಭಾನುವಾರ ಸಂಜೆಯಿಂದ ಸೋಮವಾರ ಸಂಜೆಯವರೆಗೆ ಪ್ರತಿಭಟನೆ ನಡೆಸಲು ನಿರ್ಧರಿಸಿದ ಪ್ರತಿಭಟನಾಕಾರರು, `ಬಾಬಾ ರಾಮ್‌ದೇವ್ ಅವರನ್ನು ಬಂಧಿಸಿರುವುದು ಮತ್ತು ಶಾಂತಿಯುತ ಉಪವಾಸ ಸತ್ಯಾಗ್ರಹಕ್ಕೆ ಅಡ್ಡಿ ಉಂಟು ಮಾಡಿರುವುದು ಸರಿಯಲ್ಲ~ ಎಂದರು.

ನಗರದ ಶಿಡ್ಲಘಟ್ಟ ವೃತ್ತದಲ್ಲಿ ಪ್ರತಿಭಟನೆ ಆರಂಭಿಸಿರುವ ಪ್ರತಿಭಟನಾಕಾರರು, `ಭ್ರಷ್ಟಾಚಾರ‌್ನಕೊನೆಗಾಣಿಸಲು ಮತ್ತು ವಿದೇಶದಲ್ಲಿನ ಹಣವನ್ನು ತರಲು ಬಾಬಾ ಮತ್ತು ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದರೆ ಹೊರತು ಬೇರೆ ಉದ್ದೇಶವೇನೂ ಇರಲಿಲ್ಲ~ ಎಂದರು.

ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ರವಿನಾರಾಯಣರೆಡ್ಡಿ, ಮುಖಂಡರಾದ ಚಿಕ್ಕನಹಳ್ಳಿ ನಾರಾಯಣಸ್ವಾಮಿ, ಬಳುವನಹಳ್ಳಿ ಲೋಕೇಶಗೌಡ, ನಾಗರಾಜ, ಅಶೋಕಕುಮಾರ್, ಎ.ವಿ.ಬೈರೇಗೌಡ, ಕೆ.ನಾರಾಯಣಪ್ಪ, ಹನುಮೇಗೌಡ, ಮುರಳಿಮೋಹನ್, ಸತ್ಯನಾರಾಯಣ ಮಹೇಶ್, ಮಂಗಳಾ ಶ್ರೀಧರ್, ಪ್ರೇಮಲೀಲಾ ವೆಂಕಟೇಶ್. ಪತಂಜಲಿ ಯೋಗ ಸಮಿತಿ ಮತ್ತು ಭಾರತ ಸ್ವಾಭಿಮಾನ ಆಂದೋಲನ ಟ್ರಸ್ಟ್‌ನ ಸದಸ್ಯರಾದ ಲಕ್ಷ್ಮಣ ಮೂರ್ತಿ, ಕೆ.ವೀಣಾ, ಪಿ.ವಿ.ರಾಮಚಂದ್ರರೆಡ್ಡಿ, ಗೋವಿಂದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT