ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಗೀತೆ: ವಿಶ್ವದಾಖಲೆ

Last Updated 9 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಕಾನ್ಪುರ (ಪಿಟಿಐ): ಲಕ್ಷಕ್ಕಿಂತ ಹೆಚ್ಚು ಜನರು ಇಲ್ಲಿನ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ಭಾನುವಾರ `ಜನ ಗಣ ಮನ' ರಾಷ್ಟ್ರಗೀತೆಯನ್ನು ಸಾಮೂಹಿಕವಾಗಿ ಹಾಡುವ ಮೂಲಕ ಗಿನ್ನಿಸ್ ವಿಶ್ವದಾಖಲೆ ನಿರ್ಮಿಸಿದರು. ಈ ಮೂಲಕ ಈ ಹಿಂದೆ 42 ಸಾವಿರ ಜನರು ಸೇರಿ ರಾಷ್ಟ್ರಗೀತೆ ಹಾಡಿದ ಪಾಕಿಸ್ತಾನದ ದಾಖಲೆಯನ್ನು ಮುರಿದಂತಾಗಿದೆ. ಒಟ್ಟಾರೆ 1,25,000 ಜನರು ವಿಶ್ವದಾಖಲೆಯನ್ನು ಬರೆಯಲು ದನಿಗೂಡಿಸಿದರು.

ರಾಜನ್, ಸಾಜನ್‌ಗೆ  ತಾನ್‌ಸೇನ್ ಸಮ್ಮಾನ್
ಗ್ವಾಲಿಯರ್ (ಪಿಟಿಐ): 
ಪ್ರಸಿದ್ಧ ಗಾಯಕರಾದ ರಾಜನ್ ಹಾಗೂ ಸಾಜನ್ ಮಿಶ್ರ ಸಹೋದರರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ 2011-12ನೇ ಸಾಲಿನ ಪ್ರತಿಷ್ಠಿತ `ರಾಷ್ಟ್ರೀಯ ತಾನ್‌ಸೇನ್ ಸಮ್ಮಾನ್' ಪ್ರಶಸ್ತಿಗೆ  ಭಾಜನರಾಗಿದ್ದಾರೆ. ಪ್ರಶಸ್ತಿಯು 2 ಲಕ್ಷ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದ್ದು, ಇಲ್ಲಿನ ಬನಾರಸ್ ಘರಾಣ ಶಾಸ್ತ್ರೀಯ ಸಂಗೀತ ಶಾಲೆಯಲ್ಲಿ ಡಿಸೆಂಬರ್ 14ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT