ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಕ್ರೀಡಾಕೂಟ: ಸಹನಾಗೆ ಚಿನ್ನ

Last Updated 18 ಫೆಬ್ರುವರಿ 2011, 18:20 IST
ಅಕ್ಷರ ಗಾತ್ರ

ರಾಂಚಿ: ಕರ್ನಾಟಕದ ಸಹನಾ ಕುಮಾರಿ ಇಲ್ಲಿ ನಡೆಯುತ್ತಿರುವ 34ನೇ ರಾಷ್ಟ್ರೀಯ ಕ್ರೀಡಾಕೂಟದ ಹೈಜಂಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಬಿರ್ಸಾ ಮುಂಡಾ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಈ ವಿಭಾಗದ ಸ್ಪರ್ಧೆಯಲ್ಲಿ ಅವರು 1.81 ಮೀಟರ್ ಎತ್ತರ ಜಿಗಿದರು. ಎರಡನೇ ಸ್ಥಾನ ಕೂಡ ಕರ್ನಾಟಕದ ಚಂದನಾ ಗೌಡ (1.76 ಮೀ.) ಪಾಲಾಯಿತು.

100 ಮೀ. ಹರ್ಡಲ್ಸ್‌ನಲ್ಲಿ ಕರ್ನಾಟಕದ ಪಿ.ಎ.ಮಂಜು ಕಂಚಿನ ಪದಕ ಗೆದ್ದರು. ಗಗನ್‌ಗೆ ಬಂಗಾರ: ಕ್ರೀಡಾಕೂಟದ ಈಜು ವಿಭಾಗದಲ್ಲಿ ಕರ್ನಾಟಕದ ಎ.ಪಿ.ಗಗನ್ ತಮ್ಮ ಪಾರಮ್ಯ ಮುಂದುವರಿಸಿದ್ದಾರೆ. ಅವರು 400 ಮೀಟರ್ ಫ್ರೀಸ್ಟೈಲ್‌ನಲ್ಲಿ ನೂತನ ಕೂಟ ದಾಖಲೆಯೊಂದಿಗೆ ಬಂಗಾರದ ಪದಕ ಜಯಿಸಿದರು.

ಫಲಿತಾಂಶ (ಅಥ್ಲೆಟಿಕ್ಸ್): ಮಹಿಳೆಯರ ವಿಭಾಗ: ಹೈಜಂಪ್: ಸಹನಾ ಕುಮಾರಿ (ಕರ್ನಾಟಕ; 1.81 ಮೀ. ಎತ್ತರ)-1, ಚಂದನಾ ಗೌಡ (ಕರ್ನಾಟಕ; 1.76 ಮೀ.)-3, ಮಲ್ಲಿಕಾ ಮಂಡಲ್ (ಪಶ್ಚಿಮ ಬಂಗಾಳ; 1.76 ಮೀ.)-3.

100 ಮೀ. ಹರ್ಡಲ್ಸ್: ಎಂ.ಎಂ.ಅಂಚು (ಕೇರಳ; 14.09 ಸೆ.)-1, ಅರವಿಂದಾ ರಾತ್ವ (ಪಂಜಾಬ್; 14.27 ಸೆ.)-2, ಪಿ.ಎ.ಮಂಜು (ಕರ್ನಾಟಕ; 14.85 ಸೆ.)-3
ಈಜು: ಪುರುಷರ ವಿಭಾಗ: 400 ಮೀ. ಫ್ರೀಸ್ಟೈಲ್: ಎ.ಪಿ.ಗಗನ್ (ಕರ್ನಾಟಕ; 4:04.01)-1, ರೋಹಿತ್ ಆರ್.ಹವಲ್ದಾರ್ (ಕರ್ನಾಟಕ; 4.05.79)-2, ಮಂದಾರ್ ದಿವಸೆ (ಮಹಾರಾಷ್ಟ್ರ-4.08.21)-3. 200 ಮೀ.ವೈಯಕ್ತಿಕ ಮೆಡ್ಲೆ: ವೀರ್‌ಧವಳ್ ಖಾಡೆ (ಮಹಾರಾಷ್ಟ್ರ; 2:11.74)-1. ಸಂದೀಪ್ ಸೆಜ್ವಾಲ್ (ಮಧ್ಯಪ್ರದೇಶ; 2:14.74)-2, ಎ.ಪಿ.ಗಗನ್ (ಕರ್ನಾಟಕ; 2:15.17.3)-3.

ಮಹಿಳೆಯರು: 200 ಮೀ.ವೈಯಕ್ತಿಕ ಮೆಡ್ಲೆ: ರಿಚಾ ಮಿಶ್ರಾ (ದೆಹಲಿ; 2:26.90)-1, ಪೂಜಾ ಆರ್.ಆಳ್ವಾ (ಕರ್ನಾಟಕ; 2:31.66)-2, ಆರತಿ ಘೋರ್ಪಡೆ (ಮಹಾರಾಷ್ಟ್ರ; 2:36.25.3)-3. ವಾಟರ್ ಪೋಲೊ (ಸೆಮಿಫೈನಲ್): ಮಹಿಳೆಯರ ವಿಭಾಗ: ಕರ್ನಾಟಕ (0) ವಿರುದ್ಧ ಕೇರಳಕ್ಕೆ (10 ಪಾಯಿಂಟ್) ಜಯ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT