ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಹಬ್ಬದಿಂದ ಜನರು ದೂರ: ವಿಷಾದ

Last Updated 27 ಜನವರಿ 2012, 11:35 IST
ಅಕ್ಷರ ಗಾತ್ರ

ಚಿಂತಾಮಣಿ: ರಾಷ್ಟ್ರೀಯ ಹಬ್ಬಗಳಲ್ಲಿ ಜನರು ಸಕ್ರಿಯವಾಗಿ ಪಾಲ್ಗೊಳ್ಳದೆ ಅದರ ಪ್ರಾಮುಖ್ಯತೆ ಮರೆಯುತ್ತಿದ್ದಾರೆ ಎಂದು ಶಾಸಕ ಡಾ.ಎಂ.ಸಿ.ಸುಧಾಕರ್ ವಿಷಾದಿಸಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಗರದ ಝಾನ್ಸಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಗಣರಾಜ್ಯೋತ್ಸವ ಸಮಾರಂಭದ ಅಧ್ಯ ಕ್ಷತೆ ವಹಿಸಿ ಮಾತನಾಡಿದರು.

ಈಚೆಗೆ ರಾಷ್ಟ್ರೀಯ ಹಬ್ಬಗಳಲ್ಲಿ ಸಾರ್ವಜನಿಕರು ಪಾಲ್ಗೊಳ್ಳುತ್ತಿಲ್ಲ. ಅಧಿಕಾರಿಗಳು ರಜೆ ಇದೆ ಎಂದು ಗೈರು ಹಾಜರಾಗುತ್ತಾರೆ. ಹಿರಿಯರು ತ್ಯಾಗ ಬಲಿದಾನಗಳ ಮೂಲಕ ತಂದುಕೊಟ್ಟಿ ರುವ ಸ್ವಾತಂತ್ರ್ಯದ ಬಗ್ಗೆ ಜನರು ಆಸಕ್ತಿ ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿ ದರು.

ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ರಸ್ತೆಗಳ ಅಭಿವೃ ದ್ಧಿಗೆ ರೂ. 10 ಕೋಟಿ ಮಂಜೂರಾಗಿದೆ. ಚಿಂತಾಮಣಿ- ಚೇಳೂರು ರಸ್ತೆ ಸಮಗ್ರ ಅಭಿವೃದ್ಧಿಗೆ ರೂ. 3 ಕೋಟಿ, ಚಿಂತಾ ಮಣಿ- ಮುರುಗಮಲ್ಲ ರಸ್ತೆಗೆ ರೂ. 4 ಕೋಟಿ, ತಾಲ್ಲೂಕಿನ ಕೈವಾರದ ಕೆರೆ ಅಭಿವೃದ್ಧಿಗೆ ರೂ. 3 ಕೋಟಿ, ಕೈವಾರ ತಪೋವನ ರಸ್ತೆಗೆ ರೂ. 1 ಕೋಟಿ ಮಂಜೂರಾಗಿದೆ. ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.

ನಗರದ ಎಂ.ಜಿ ರಸ್ತೆಯಲ್ಲಿ ರೂ. 2.5 ಕೋಟಿ ವೆಚ್ಚದ ಕಾಮಗಾರಿ ಆರಂಭಗೊಂಡಿದ್ದು, ರಸ್ತೆಯ ಎರಡು ಬದಿಗಳಲ್ಲಿ ಚರಂಡಿ ಕೆಲಸ ನಡೆಯು ತ್ತಿದೆ. ಉತ್ತಮ ಪಾದಚಾರಿ ಮಾರ್ಗ ನಿರ್ಮಾಣ, ಕೋಲಾರ ವೃತ್ತ, ಬಾಗೇ ಪಲ್ಲಿ ವೃತ್ತಗಳನ್ನು ಅಭಿವೃದ್ಧಿಪಡಿಸ ಲಾಗುವುದು. ರಾಜ್ಯದ ಯಾವ ತಾಲ್ಲೂಕಿನಲ್ಲೂ ಇರದ ತಾಲ್ಲೂಕು ಪಂಚಾಯಿತಿ ಭವನ ನಗರದಲ್ಲಿ ನಿರ್ಮಾಣಗೊಳ್ಳುತ್ತಿದೆ. ಪಾಲಿಟೆಕ್ನಿಕ್‌ನಲ್ಲಿ ನೂತನ ಪ್ರಯೋಗಾಲಯ, ವರ್ಕ್‌ಶಾಪ್‌ಗಳ ನವೀಕರಣಕ್ಕೆ ರೂ. 3 ಕೋಟಿ ಯೋಜನೆ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದು, ಮೊದಲ ಹಂತದಲ್ಲಿ ರೂ. 95 ಲಕ್ಷ ಬಿಡುಗಡೆಯಾಗಿದೆ. ಸರ್ಕಾರಿ ಬಾಲಕರ ಕಾಲೇಜು, ಮಹಿಳಾ ಕಾಲೇಜು, ಮಹಾತ್ಮ ಗಾಂಧಿ ಬಾಲಕರ ಪ್ರೌಢಶಾಲೆಯಲ್ಲಿ ಕೋಟ್ಯಂತರ ರೂಪಾಯಿ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಆದರೆ ಕೆಲವು ನಾಯಕರು ಈ ಸಂಬಂಧ ಇಲ್ಲದ ಹೇಳಿಕೆ ಗಳನ್ನು ನೀಡುತ್ತಾ, ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಶಾಶ್ವತ ನೀರಾವರಿಗಾಗಿ ಕೋಲಾರ, ಚಿಕ್ಕಬಳ್ಳಾ ಪುರ ಜಿಲ್ಲೆ ಎಲ್ಲ ಶಾಸಕರು ಒತ್ತಡ ಹೇರುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

ನಗರಸಭೆ ಅಧ್ಯಕ್ಷೆ ನಾಗರತ್ನಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ತಹಶೀಲ್ದಾರ್ ಕೃಷ್ಣಮೂರ್ತಿ ಧ್ವಜಾ ರೋಹಣ ನೆರವೇರಿಸಿದರು. ಕಲಾವಿದ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾ ಡಿದರು. ಎಪಿಎಂಸಿ ಅಧ್ಯಕ್ಷ ಮುನಿರೆಡ್ಡಿ, ಟಿಎಪಿಸಿಎಂಎಸ್ ಅಧ್ಯಕ್ಷ ಚಂದ್ರಪ್ಪ, ಪೌರಾಯುಕ್ತ ಡಾ.ರಾಮೇಗೌಡ, ಬಿಇಒ ಬೈಲಾಂಜನೇಯಪ್ಪ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಬಸವರಾಜು, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ನಾರಾಯಣರೆಡ್ಡಿ ಇತರರು ಪಾಲ್ಗೊಂಡಿದ್ದರು. ವಿಧ್ಯಾರ್ಥಿಗಳು, ಎನ್‌ಎನ್‌ಸಿ, ಸ್ಕೌಟ್ಸ್ ಮತ್ತು ಗೈಡ್ಸ್ ತಂಡಗಳಿಂದ ಪಥ ಸಂಚಲನ ನಡೆಯಿತು.

ಅಸ್ಥಿರ ಸರ್ಕಾರ: ಮುನಿಯಪ್ಪ

ಶಿಡ್ಲಘಟ್ಟ: ರಾಜ್ಯವು ಎದುರಿಸುತ್ತಿ ರುವ ಗಂಭೀರ ಸಮಸ್ಯೆಗಳಲ್ಲಿ ಅಸ್ಥಿರ ಸರ್ಕಾ ರವು ಒಂದು. ಸುಭದ್ರ, ಜನಪರ ಆಡಳಿತ ನೀಡುವುದಾಗಿ ಹೇಳಿಕೊಂಡು ಅಧಿಕಾ ರಕ್ಕೆ ಬಂದ ಬಿಜೆಪಿ ಸರ್ಕಾರ ತನ್ನ ಮಾತು ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಶಾಸಕ ವಿ.ಮುನಿಯಪ್ಪ ಆರೋಪಿಸಿದರು.

ಪಟ್ಟಣದ ನೆಹರೂ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿ, `ಜನರ ನಿರೀಕ್ಷೆ ಹುಸಿಗೊಳಿಸದೆ ಸುಭದ್ರ ಆಡಳಿತ ನೀಡುವತ್ತ ರಾಜ್ಯ ಸರ್ಕಾರ ಮುಂದಾಗ ಬೇಕು~ ಎಂದು ಸಲಹೆ ಮಾಡಿದರು.

`ಹಲವಾರು ಆಂತರಿಕ ಸಮಸ್ಯೆಗಳಿ ದ್ದರೂ ದೇಶವು ವಿಶ್ವದ ಪುಟದಲ್ಲಿ ದೊಡ್ಡ ಸ್ಥಾನ ಪಡೆದಿದೆ. ಯುವಶಕ್ತಿ ಸ್ವಾವಲಂಬಿಗಳಾಗಿ ದೇಶಕಟ್ಟುವಲ್ಲಿ ಒಗ್ಗೂಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢವಾದಷ್ಟೂ ದೇಶ ಬಲಿಷ್ಠವಾಗು ತ್ತದೆ. ಬಡತನ ರೇಖೆಗಿಂತ ಕಡಿಮೆಯಿ ರುವ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ಗಳು ದೊರೆಯಬೇಕು ಎಂದರು.

ತಹಶೀಲ್ದಾರ್ ಭೀಮಾನಾಯಕ್ ಮಾತನಾಡಿ, `ದೇಶ ಎಷ್ಟೇ ಪ್ರಗತಿ ಸಾಧಿ ಸಿದ್ದರೂ ಅಭಿವೃದ್ಧಿಶೀಲ ದೇಶಗ ಳೊಂದಿಗೆ ಹೋಲಿಸಲಾಗುತ್ತದೆ. ಭಯೋತ್ಪಾದನೆ, ಮಾಲಿನ್ಯ, ಆರ್ಥಿಕ ಅಸಮತೋಲನ ಮುಂತಾದ ಸಮಸ್ಯೆ ಗಳನ್ನು ಕೊನೆಗಾಣಿಸಿ ಸದೃಢ ದೇಶ ನಿರ್ಮಾಣದತ್ತ ಪ್ರತಿಯೊಬ್ಬರು ಶ್ರಮಿಸ ಬೇಕು~ ಎಂದು ಹೇಳಿದರು.

ತಾ.ಪಂ. ಅಧ್ಯಕ್ಷ ವೇಣುಗೋಪಾಲ್, ಇಒ ಸುಬ್ರಾನಾಯಕ್, ಪುರಸಭಾ ಅಧ್ಯಕ್ಷೆ ಮಂಜುಳಾ ಸುಬ್ರಮಣಿ, ಮುಖ್ಯಾಧಿಕಾರಿ ಚನ್ನೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಕಂಠ, ಸರ್ಕಲ್ ಇನ್ಸ್ ಪೆಕ್ಟರ್ ಕೃಷ್ಣಪ್ಪ, ಬಿಜೆಪಿ ತಾಲ್ಲೂಕು ಅಧ್ಯಕ್ಷ ರಮೇಶ್ ಬಾಯರಿ, ಸುಬ್ರಮಣಿ, ಮುನಿಕೃಷ್ಣಪ್ಪ, ಮಕ್ಸೂದ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ವಿದ್ಯಾರ್ಥಿಗಳ ಆಕರ್ಷಕ ನೃತ್ಯ

`ಈ ದೇಶ ನಮ್ಮದು~ ಎಂಬ ದೇಶ ಭಕ್ತಿ ಗೀತೆಗೆ ಒಂದು ತಂಡ ನರ್ತಿಸಿದರೆ, `ವಂದೇ ಮಾತರಂ~ ಗೀತೆಗೆ ಮತ್ತೊಂದು ಶಾಲಾ ತಂಡ ನೃತ್ಯ ರೂಪಕ ಪ್ರದರ್ಶಿಸಿತು. ವೇಷಭೂಷಣಗಳೊಂದಿಗೆ ಚಾರಿತ್ರಿಕ ವ್ಯಕ್ತಿಗಳ ಛದ್ಮವೇಷಧಾರಿ ಗಳಾಗಿ ಶಾಲಾ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದಾಗ ನೋಡುಗರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.

ಶಿಡ್ಲಘಟ್ಟ ಪಟ್ಟಣದ ನೆಹರೂ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಗಣರಾಜ್ಯೋತ್ಸವದಲ್ಲಿ  ವಿವಿಧ  ಶಾಲೆ ಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯ ಕ್ರಮಗಳು ಜನರ ಮೆಚ್ಚುಗೆಗೆ ಪಾತ್ರವಾ ದವು. ಭಾಷಣ ಕೇಳಲು ಹೆಚ್ಚು ಜನರು ಇರಲಿಲ್ಲ. ಆದರೆ ಸಾಂಸ್ಕೃತಿಕ ಕಾರ್ಯ ಕ್ರಮವನ್ನು ಮಾತ್ರ ಬಿಸಿಲನ್ನೂ ಲೆಕ್ಕಿಸದೆ ವೀಕ್ಷಿಸಿ ಆನಂದಿಸಿದರು.

ರೇಷ್ಮೆ ಸೀರೆಗಳನ್ನು ಉಟ್ಟು, ಭಾರತಮಾತೆಯಾಗಿ ಕೆಲವರು ಬಂದಿದ್ದರೆ, ಕೃಷ್ಣ ಅರ್ಜುನ, ಕನಕದಾಸ ಮುಂತಾದ ವೇಷಧಾರಿಗಳಾಗಿದ್ದರು. ಹಿಂದಿ ದೇಶಭಕ್ತಿಗೆ ಉತ್ತರ ಭಾರತದ ವೇಷ ಧರಿಸಿ ಕೆಲವರು ನರ್ತಿಸಿದರೆ, ಇನ್ನು ಕೆಲವರು ದಕ್ಷಿಣ ಭಾರತದ ಉಡುಗೆ ತೊಡುಗೆಗಳೊಂದಿಗೆ ಅಲಂಕರಿಸಿಕೊಂಡು ಪ್ರದರ್ಶನ ನೀಡಿದರು.

ಆಶಾಕಿರಣ ಅಂಧ ಮಕ್ಕಳ ಶಾಲೆ, ಸರ್ಕಾರಿ ಪ್ರೌಢಶಾಲೆ ತುಮ್ಮನಹಳ್ಳಿ, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ತಾಯಿಬಾನಗರ, ಸರ್ಕಾರಿ ಕುವೆಂಪು ಮಾದರಿ ಹಿರಿಯ ಪ್ರಾಥಮಿಕ ಶಾಲೆ ಚೀಮಂಗಲ, ಸರಸ್ವತಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಸ್ಕೌಟ್ಸ್ ಮತ್ತು ಗೈಡ್ಸ್ ತಂಡ, ವಾಸವಿ ವಿದ್ಯಾ ಸಂಸ್ಥೆ, ಡಾಲ್ಫಿನ್ ಪಬ್ಲಿಕ್ ಶಾಲೆ, ಶಾರದಾ ವಿದ್ಯಾ ಸಂಸ್ಥೆ, ಶಿಡ್ಲಘಟ್ಟ ಸರ್ಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿ ತಂಡಗಳು ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶಿಸಿದರು.

 ಸರಸ್ವತಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ ಸ್ಥಾನವನ್ನು, ಶಾರದಾ ವಿದ್ಯಾ ಸಂಸ್ಥೆ ದ್ವತೀಯ ಸ್ಥಾನವನ್ನು ಮತ್ತು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ತಾಯಿಬಾನಗರ ತೃತೀಯ ಸ್ಥಾನ  ಪಡೆದರು. ತುಮ್ಮನ ಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರ ಡೊಳ್ಳುಕುಣಿತ ತಂಡಕ್ಕೆ ವಿಶೇಷ ಪುರಸ್ಕಾರವನ್ನು ನೀಡಿ ಗೌರವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT