ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಕ್ಷವೃತ್ತಿಯಲ್ಲಿ ತೇದು ತೇದು...

Last Updated 3 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ನಟನೆ ಎನ್ನುವುದು ರೂಕ್ಷವೃತ್ತಿ. ಸಾಮಾನ್ಯ ಜನರು ಅಂದುಕೊಂಡಿರುವಂತೆ ನಟಿಯರ ಜೀವನ ಸುಂದರವೂ ಅಲ್ಲ, ಸುಲಭವೂ ಅಲ್ಲ ಎನ್ನುತ್ತಿದ್ದಾರೆ ನಟಿ ಬಿಪಾಶಾ ಬಸು.

ಕಲಾವಿದರ ನಟನೆಯನ್ನು ಒರೆಗೆ ಹಚ್ಚುವಂಥ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ತುಡಿತ ಹೊಂದಿರುವ ಬಿಪಾಶಾ, ರಿಸ್ಕಿ ಪಾತ್ರಗಳಿದ್ದರೆ ಅಭಿನಯ ಕೂಡ ಉತ್ತಮವಾಗಿ ಮೂಡಿಬರುತ್ತದೆ ಎಂಬ ನಂಬಿಕೆಯುಳ್ಳವರು. ಬಾಲಿವುಡ್‌ನಲ್ಲಿ ಒಂದು ದಶಕವನ್ನು ಯಶಸ್ವಿಯಾಗಿ ಪೂರೈಸಿರುವ ಈ ನಟಿಗೆ ನಟನಾ ವೃತ್ತಿಯು ರೂಕ್ಷ ವೃತ್ತಿ ಎಂದು ಅರಿವಾಗಿದೆಯಂತೆ.

34 ವಯಸ್ಸಿನ ಬಿಪಾಶಾ 2001ರಲ್ಲಿ `ಅಜ್‌ನಬಿ' ಚಿತ್ರದ ಮೂಲಕ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದರು. ಈ ಚಿತ್ರದಲ್ಲಿ ಆಕೆ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಆಗಿನಿಂದಲೂ ವಿಭಿನ್ನ ಪಾತ್ರಗಳಿಗೆ ಮೈಯೊಡ್ಡುತ್ತಾ ಬಂದಿರುವ ಅವರಿಗೆ ಸದಾ ಕಾಲ ಚಾಲೆಂಜಿಂಗ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಹಂಬಲವಿದೆಯಂತೆ.

`ಏನಾದರೂ ಅತ್ಯುತ್ತಮವಾದುದನ್ನು ಸಾಧಿಸಬೇಕು ಎನ್ನುವ ಹಸಿವು, ಹಪಹಪಿ ನನ್ನೊಳಗೆ ಇಂದಿಗೂ ಜೀವಂತವಾಗಿದೆ. ಏನೇ ಮಾಡಿದರೂ ಅದನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂಬುದು ನನ್ನ ಸಿದ್ಧಾಂತ. ವೃತ್ತಿಗೆ ಸಂಬಂಧಿಸಿದಂತೆ ನಾನು ಭ್ರಷ್ಟಳಾಗಲು ಎಂದಿಗೂ ಬಯಸುವುದಿಲ್ಲ. ನಟನಾ ವೃತ್ತಿ ತುಂಬಾ ರೂಕ್ಷವಾದುದು.

ಆದರೂ, ಸಿನಿಮಾ ರಂಗದಲ್ಲಿ ನನ್ನ ಘನತೆಯನ್ನು ಕಾಯ್ದುಕೊಂಡಿದ್ದೇನೆ. ನಟ-ನಟಿಯರ ಜೀವನ ಸಾಮಾನ್ಯ ಜನ ಅಂದುಕೊಂಡಿರುವಷ್ಟು ಸುಂದರವೂ ಅಲ್ಲ, ಸುಲಭವೂ ಅಲ್ಲ. ಕಲಾವಿದರ ಭವಿಷ್ಯ ಪ್ರತಿ ಶುಕ್ರವಾರ ನಿರ್ಧಾರವಾಗುತ್ತದೆ' ಎಂಬುದು ಬಿಷಾಶಾ ಅನುಭವದ ಮಾತು. ವಿಕ್ರಮ್ ಭಟ್ ನಿರ್ದೇಶನದ `ರಾಝ್' ಚಿತ್ರದಲ್ಲಿನ ಬಿಷಾಶಾ ನಟನೆಗೆ ಮೆಚ್ಚುಗೆಯ ಮಾತುಗಳು ಕೇಳಿಬಂದಿದ್ದವು. ಈ ಚಿತ್ರ ಆಕೆಗೆ ಅನೇಕ ಅವಕಾಶಗಳನ್ನು ತಂದುಕೊಟ್ಟಿತ್ತು. ಆದರೆ, ಬರುತ್ತಿರುವ ಅವಕಾಶವನ್ನೆಲ್ಲಾ ಒಪ್ಪಿಕೊಳ್ಳದೆ ಆಕೆ ಉತ್ತಮ ಚಿತ್ರಗಳ ಆಯ್ಕೆಯಲ್ಲಿ ತೊಡಗಿದ್ದಾರಂತೆ.

`ಕಳೆದ ಏಳು ವರ್ಷಗಳಿಂದ ನಾನು ವರ್ಷಕ್ಕೆ ಮೂರು ಚಿತ್ರಗಳಲ್ಲಿ ಮಾತ್ರ ನಟಿಸುತ್ತಾ ಬರುತ್ತಿದ್ದೇನೆ. ಈಗಲೂ ಅದೇ ಸಿದ್ಧಾಂತವನ್ನು ನಾನು ಪಾಲಿಸುತ್ತಿದ್ದೇನೆ. ಬಂದ ಅವಕಾಶಗಳನ್ನೆಲ್ಲಾ ಬಾಚಿ ತಬ್ಬುವುದರ ಬದಲು ಒಳ್ಳೆ ಚಿತ್ರಗಳಲ್ಲಿ ನಟಿಸಿ ನಮ್ಮ ಪ್ರತಿಭೆ ಸಾಬೀತುಪಡಿಸಬೇಕು ಎಂಬುದು ನನ್ನ ನಿಲುವು. ಆ ಮೂಲಕ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಬೇಕು' ಎನ್ನುತ್ತಾರೆ ಅವರು.

ಅಂದಹಾಗೆ, ಬಿಪಾಶಾ ಅಭಿಮಾನಿಗಳು ಆಕೆಯನ್ನು ವಿಕ್ರಂ ಭಟ್ ಅವರ 3ಡಿ ಸಿನಿಮಾ `ಕ್ರಿಯೇಚರ್' ಚಿತ್ರದಲ್ಲಿ ಕಣ್ತುಂಬಿಕೊಳ್ಳಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT