ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಡಿಯೊ ಒನ್ ಕಾಲೇಜು ಆರ್‌ಜೆ...

Last Updated 14 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕಾಲೇಜು ಮಟ್ಟದ ಉದಯೋನ್ಮುಖ ರೇಡಿಯೊ ನಿರೂಪಕರಿಗಾಗಿ (ಆರ್‌ಜೆ)  94.3 ರೇಡಿಯೋ ಒನ್ ನಡೆಸಿದ ಪ್ರತಿಭಾ ಶೋಧದ ಮೊದಲ ಸುತ್ತು ಮುಗಿದಿದೆ. ನೆಚ್ಚಿನ ಫೈನಲಿಸ್ಟ್ ಯಾರು ಎಂಬುದನ್ನು ತೀರ್ಮಾನಿಸಲು ಅಂತಿಮ ಹಣಾಹಣಿ ನಡೆಯಲಿದೆ.

ಇದರಲ್ಲಿ ಗೆದ್ದವರು `ಅತ್ಯುತ್ತಮ ಕಾಲೇಜು ನಿರೂಪಕರು~ ಕಿರೀಟ ಮತ್ತು ರೇಡಿಯೊ ಒನ್‌ನಲ್ಲಿ ಒಂದು ವಾರ ತಮ್ಮದೇ ಆದ ಕಾರ್ಯಕ್ರಮ ನಿರೂಪಣೆ ಮಾಡುವ ಅವಕಾಶ ಪಡೆಯಲಿದ್ದಾರೆ. ಜತೆಗೆ ಬೆಂಗಳೂರಿನ ಕೇಳುಗರೂ ವಿಜೇತರನ್ನು ನಿರ್ಧರಿಸಲು ಮತ ಚಲಾಯಿಸಲಿದ್ದಾರೆ.

ಇದಕ್ಕೂ ಪೂರ್ವಭಾವಿಯಾಗಿನಗರದ 10 ಕಾಲೇಜುಗಳಲ್ಲಿ ಉತ್ಸಾಹಪೂರ್ಣ ವಾತಾವರಣದಲ್ಲಿ ಸ್ಪರ್ಧೆ ನಡೆದಿತ್ತು. ಜ್ಯೋತಿನಿವಾಸ ಕಾಲೇಜಿನ ಝೀಶಾ ಅಮ್ಲೋನಿ ಮತ್ತು ಆಕಾಂಕ್ಷಾ, ದಯಾನಂದ ಸಾಗರ ಕಾಲೇಜಿನ ಆದಿತ್ಯ ರಂಜನ್ ಮತ್ತು ಅಲಿಷಾ, ಅಮಿಟಿ ಸ್ಕೂಲ್ ಆಫ್ ಬಿಸಿನೆಸ್‌ನ ಅಸ್ರಾರ್ ಶೇಖ್ ಮತ್ತು ಕವಿತಾ,

ಸಿಎಂಎಸ್ ಜೈನ್ ಕಾಲೇಜಿನ ರೆನ್ನಿ ರಮೇಶ್ ಮತ್ತು ಪರಿಂಕಾ, ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಮ್ಯೋನೇಜ್‌ಮೆಂಟ್ ಸ್ಟಡೀಸ್‌ನ ಇಮ್ರೋನ್ ಖಾನ್ ಮತ್ತು ಬಿಜೊ ಥಾಮಸ್, ಸಿಂಧಿ ಕಾಲೇಜಿನ ಪ್ರತಿಕ್ ಜೈನ್ ಮತ್ತು ಸಿಮಿ ಜಸಕ್, ಶ್ರೀ ಮಹಾವೀರ್ ಜೈನ್ ಕಾಲೇಜಿನ ಗ್ರೀಷ್ಮಾ ಮತ್ತು ರಾಜ್,

ಬಾಲ್ಡ್‌ವಿನ್ ಕಾಲೇಜಿನ ಓಬಳೇಶ್ ಮತ್ತು ಶಾನ್, ಟಿ ಜಾನ್ ಕಾಲೇಜಿನ ಸುಹೇಲ್ ಮತ್ತು ಚುಯಿ, ನ್ಯೂ ಹೊರೈಜನ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಮ್ಯೋಥ್ಯೂ ಥಾಮಸ್ ಮತ್ತು ರಿಯಾ ನವೊಮಿ ಅವರುಗಳು ಅಂತಿಮ ಸುತ್ತಿಗೆ ಆಯ್ಕೆಯಾದರು,

ಮೌಲ್ಯ, ಸಂಗೀತಜ್ಞಾನ, ಹಾಸ್ಯಪ್ರಜ್ಞೆ, ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ ಮತ್ತು ಸೃಜನಶೀಲತೆ, ತಂಡದಲ್ಲಿನ ಪರಸ್ಪರ ಹೊಂದಾಣಿಕೆಗಳನ್ನು ಒರೆಗೆ ಹಚ್ಚಲಾಗುತ್ತದೆ. ಇವರ ನಿರೂಪಣೆ ಆಲಿಸಿ ಕೇಳುಗರೂ ಮತ ಚಲಾಯಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT