ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಅಪಘಾತ: ಮೂವರ ಸಾವು

Last Updated 3 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ರಾಂಜಿಯಾ, ಅಸ್ಸಾಂ (ಪಿಟಿಐ):  ಪ್ರಯಾಣಿಕರಿದ್ದ ರೈಲು ಶುಕ್ರವಾರ ಹಳಿ ದಾಟುತ್ತಿದ್ದ ಜೆಸಿಬಿ ಯಂತ್ರದ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂರು ಮಂದಿ ಮೃತಪಟ್ಟಿದ್ದು, 50 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ಜೆಸಿಬಿ ಚಾಲಕನೂ ಸೇರಿದಂತೆ ಸತ್ತಿರುವ ಮೂವರಲ್ಲಿ ಇಬ್ಬರನ್ನು ಬಿಪುಲ್ ರಾಭಾ ಹಾಗೂ ಸಲಾಯ್ ಎಂದು ಗುರುತಿಸಲಾಗಿದೆ. `ಬೊಂಗೈಗಾಂ ಗುವಾಹಟಿ ಚಿಲ್‌ರಾಯ್~ ರೈಲು ಅಜರಾ ಮತ್ತು ಮಿರ್ಜಾ ಪ್ರದೇಶದ ಮಧ್ಯಭಾಗ ಗೊಸಾಯಂಗ್‌ಹಟಿ ಬಳಿ ಬೆಳಿಗ್ಗೆ 9.30 ರಲ್ಲಿ ಅಪಘಾತಕ್ಕೀಡಾಗಿದ್ದು, ಎಂಜಿನ್ ಹಾಗೂ 5 ಬೋಗಿಗಳು ಹಳಿ ತಪ್ಪಿದ್ದವು ಎಂದು ಮೂಲಗಳು ತಿಳಿಸಿವೆ.

 ಗಾಯಾಳುಗಳನ್ನು ಗ್ರಾಮಸ್ಥರು ಮಿರ್ಜಾ ಆರೋಗ್ಯ ಕೇಂದ್ರಕ್ಕೆ ಸೇರಿಸಿದ್ದಾರೆ. ಗಂಭೀರ ಗಾಯಗೊಂಡವರನ್ನು ಗುವಾಹಟಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

 ಹಳಿ ತಪ್ಪಿದ ಬೋಗಿಗಳು ಮುರಿದಿದ್ದು, ರೈಲ್ವೆ ಹಳಿ ಕೂಡಾ ಜಖಂಗೊಂಡಿದೆ  ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT