ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆಯಿಂದ ಭಾರಿ ಸಾಲದ ಬೇಡಿಕೆ

Last Updated 2 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ):  ಹಲವಾರು  ಪ್ರಮುಖ ಯೋಜನೆಗಳು ಮತ್ತು ರಕ್ಷಣಾ ಕಾರ್ಯಗಳನ್ನು  ಪೂರ್ಣಗೊಳಿಸಲು ಹಣದ ಕೊರತೆಯಿದೆ  ಎಂದಿರುವ  ರೈಲ್ವೆ ಸಚಿವಾಲಯವು ಆರ್ಥಿಕ  ಸಚಿವಾಲಯದಿಂದ 2000 ಕೋಟಿ  ರೂಪಾಯಿ ಸಾಲ ನೀಡುವಂತೆ ಬೇಡಿಕೆ ಸಲ್ಲಿಸಿದೆ.

ರೈಲ್ವೆ ಕಾಮಗಾರಿಗಳ ಖರ್ಚು 2007-08ರಲ್ಲಿ ರೂ. 41,033 ಕೋಟಿಯಿಂದ 2011-12ರ ಸಾಲಿನಲ್ಲಿ 73,650 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ ಪಿಂಚಣಿ   ಖರ್ಚು ಸಹ 7,953 ಕೋಟಿಯಿಂದ 16,000 ಕೋಟಿಗೆ ಹೆಚ್ಚಳವಾಗಿದ್ದು, ಆದಾಯದಲ್ಲಿ ತೀವ್ರ ಕುಸಿತವಾಗಿದೆ ಎಂದು ರೈಲ್ವೆ ಸಚಿವಾಲಯವು ತಿಳಿಸಿದೆ.

ಈ ಆರ್ಥಿಕ ವರ್ಷದಲ್ಲಿ 99.3 ಕೋಟಿ ಟನ್ ಕಬ್ಬಿಣದ ಅದಿರು ಹಾಗೂ ಕಲ್ಲಿದ್ದಲು ಸಾಗಣೆಯನ್ನು ಮಾಡುವ ಗುರಿ ಹೊಂದಿದ್ದು ಹಲವು ಕಾರಣದಿಂದ ಅದು ಅಸಾಧ್ಯ ಎನ್ನಲಾಗಿದೆ. ರೈಲ್ವೆ ಹಣಕಾಸು ಆಯುಕ್ತ ಪಾಮಾ ಬಬ್ಬರ್ ಅವರು ಮುಂದಿನ ವಾರ ಹಣಕಾಸು ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ಸಾಲದ ಬಗ್ಗೆ ಅಂತಿಮಗೊಳಿಸಲಿದ್ದಾರೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT