ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಸಿಂಗ್ ಪೈಪ್‌ಗೆ ಸಂಪರ್ಕ: ಸೂಕ್ತ ಕ್ರಮಕ್ಕೆ ಸೂಚನೆ

Last Updated 23 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ವಿಜಯಪುರ: ಪಟ್ಟಣಕ್ಕೆ ಕೊಳವೆಬಾವಿಗಳಿಂದ ನೀರು ಪೂರೈಸುವ ರೈಸಿಂಗ್‌ಪೈಪ್‌ಗಳಿಗೆ ಕೆಲವರು ನೇರವಾಗಿ ಸಂಪರ್ಕ ಹಾಕಿಕೊಂಡಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಅಗತ್ಯವಾದಲ್ಲಿ ಬೇರೆ ಪೈಪ್‌ಲೈನ್ ಅಳವಡಿಸುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಕೆ.ರಾಜು ಸೂಚಿಸಿದರು.

ಅವರು ಇಲ್ಲಿನ ಪುರಸಭಾ ಸಭಾಂಗಣದಲ್ಲಿ ಪ್ರಗತಿಪರಿಶೀಲನೆ ನಡೆಸಿ,  ಮಳೆಗಾಲದಲ್ಲಿಯೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದನ್ನು ತಡೆಯಬೇಕು ಎಂದು ತಿಳಿಸಿದರು.

ಕೊಳವೆಬಾವಿಗಳನ್ನು ಕೊರೆದಿದ್ದು ವಿದ್ಯುತ್ ಸಂಪರ್ಕ ಪಡೆಯಲು ಬೆಸ್ಕಾಂ ಅಧಿಕಾರಿಗಳು ಸ್ಪಂದಿಸುತ್ತಿಲ್ಲವೆಂಬ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಅವರು, ಕೂಡಲೇ ಕ್ರಮಕೈಗೊಳ್ಳುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.

ಕೆಡಬ್ಲ್ಯೂಸಿಡಿ ಗೆ ಸಂಬಂಧಿಸಿದಂತೆ ನಿವೇಶನವನ್ನು ಪರಿಶೀಲಿಸಿ ಎಸ್‌ಆರ್ ಕಾಸ್ಟ್ ಬದಲಾಯಿಸಿಕೊಳ್ಳುವಂತೆ ಸೂಚಿಸಿದ ಅವರು, ರಾಜಕಾಲುವೆಗಳಲ್ಲಿ ಅಡ್ಡ ಹಾಕಿರುವ ಯಾವುದೇ ಪೈಪ್‌ಲೇನ್‌ಗಳನ್ನು ಸ್ಥಳಾಂತರ ಮಾಡುವಂತೆ ತಿಳಿಸಿದರು.

`ಕೆಲವು ರಾಜಕಾಲುವೆಗಳನ್ನು ತೆರವುಗೊಳಿಸಿರುವುದರಿಂದ ಕೆರೆಗೆ ಸ್ವಲ್ಪಮಟ್ಟಿಗೆ ನೀರು ಹರಿದಿದೆ. ಉಳಿದೆಲ್ಲಾ ರಾಜಕಾಲುವೆಗಳನ್ನು ತೆರವುಗೊಳಿಸಿದರೆ ಅಂತರ್ಜಲಮಟ್ಟ ಹೆಚ್ಚುತ್ತದೆ~ ಎಂದು ಸ್ಥಾಯಿಸಮಿತಿಯ ಅಧ್ಯಕ್ಷ ಎಂ.ವೀರಣ್ಣಗೌಡ ಸಲಹೆ ನೀಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಅವರು, ದೇವನಹಳ್ಳಿ ಪುರಸಭೆಯ ಜೆಸಿಬಿ ಯಂತ್ರವನ್ನು ಪಡೆದು ರಾಜಕಾಲುವೆಗಳನ್ನು ತೆರವುಗೊಳಿಸುವಂತೆ ಸೂಚಿಸಿದರು.

`ಬೆಳಗಿನ ವೇಳೆ ಪಟ್ಟಣದ ವಾರ್ಡ್‌ಗಳಿಗೆ ಮತ್ತು ರಾತ್ರಿವೇಳೆ ಸಂಗ್ರಹಣಾ ತೊಟ್ಟಿಗಳಿಗೆ ಕೊಳವೆಬಾವಿಗಳಿಂದ ನೀರು ಸರಬರಾಜು ಮಾಡಿಕೊಳ್ಳುವುದು ಸೂಕ್ತ~ ಎಂಬ ಉಪಾಧ್ಯಕ್ಷ ಎಂ.ಎಲ್.ಕೃಷ್ಣಪ್ಪಗೌಡ ಅವರು ನೀಡಿದ ಸಲಹೆಗೆ ಅವರು ಸಹಮತ ವ್ಯಕ್ತಪಡಿಸಿದರು.

ಮೆಹಬೂಬ್‌ನಗರ ಮತ್ತು ಕೆ.ಎಸ್.ರಸ್ತೆಯ ಭಾಗಗಳಲ್ಲಿ ಮಳೆನೀರು ಮನೆಗಳಿಗೆ ನುಗ್ಗುವುದು. ಕಸವಿಲೇವಾರಿ ಸಮಸ್ಯೆ ಇರುವ ಬಗ್ಗೆ ಏಜಾಜ್ ಅಹ್ಮದ್ ಅವರು ದೂರಿದ ಹಿನ್ನೆಲೆಯಲ್ಲಿ ಸ್ಥಳಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಅವರು ಸೂಚಿಸಿದರು.

ಸರ್ಕಾರಿ ಅಥವಾ ಕಂದಾಯ ಇಲಾಖೆಗೆ ಸೇರಿದ ಜಮೀನನ್ನು ಗುರ್ತಿಸಿದರೆ ಸರ್ವೆ ಮಾಡಿಸಿ ನಕ್ಷೆ ತಯಾರಿಸಿಕೊಡಲು ತಹಶೀಲ್ದಾರ್ ಅವರಿಗೆ ಸೂಚಿಸುತ್ತೇನೆ. ಸಾರ್ವಜನಿಕ ಉದ್ದೇಶಕ್ಕಾಗಿ ಬಳಸಿಕೊಳ್ಳಿರಿ ಎಂದು ಅವರು ಸೂಚಿಸಿದರು.

ಇದೇ ಸಂದರ್ಭದಲ್ಲಿ ಪುರಸಭಾಧ್ಯಕ್ಷೆ ಮಂಜುಳಾ, ಸದಸ್ಯ ಸತೀಶ್‌ಕುಮಾರ್, ಮುಖ್ಯಾಧಿಕಾರಿ ಎಂ.ಆರ್.ಮಂಜುನಾಥ್, ಸಹಾಯಕ ಅಭಿಯಂತರ ಗೋಪಾಲಕೃಷ್ಣ, ಸರಿತಾ, ಜಿಲ್ಲಾಧಿಕಾರಿಕಚೇರಿಯ ಕಾರ್ಯನಿರ್ವಾಹಕ ಅಭಿಯಂತರ ನರಸಿಂಹಮೂರ್ತಿ, ಮತ್ತಿತರರು ಇದ್ದರು. ನರಸಿಂಹಮೂರ್ತಿ ಅವರು ಪಟ್ಟಣದ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT